ಹಾಂಕಾಂಗ್ ಓಪನ್ : ಪಿವಿ ಸಿಂಧುಗೆ ವೀರೋಚಿತ ಸೋಲು

Posted By:

ಬೆಂಗಳೂರು, ನವೆಂಬರ್ 26: ರಿಯೋ ಒಲಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ, ಬಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಅವರು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನ್‌‌ಮೆಂಟ್‌ನ ಫೈನಲ್‌‌ ಪಂದ್ಯದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಭಾನುವಾರದಂದು ನಡೆದ ಅಂತಿಮ ಹಣಾಹಣಿಯಲ್ಲಿ ಪಿ.ವಿ. ಸಿಂಧು ಅವರು 21 -18, 21 -18 ನೇರ ಸೆಟ್ ಗಳಿಂದ ತೈವಾನ್ ಆಟಗಾರ್ತಿ ಥಾಯ್ ಟ್ಜು ಯಿಂಗ್ ವಿರುದ್ಧ ಸೋಲು ಅನುಭವಿಸಿದರು.

PV Sindhu goes down to Ying in final

ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ರೋಚಕ ಹೋರಾಟ ನಡೆಸಿ ಸೋಲು ಕಂಡರು.

ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ರಚನಾಕ್ ಇಂಟನಾನ್ ಅವರು ಮಣಿಸಿದ್ದ ಸಿಂಧು ಅವರು ಅಂತಿಮವಾಗಿ ಫೈನಲ್ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಅಗ್ರ ಶ್ರೇಯಾಂಕಿತೆ ಥಾಯ್ ಟ್ಜು ಯಿಂಗ್ ಅವರ ಎದುರು ಸೋಲು ಅನುಭವಿಸಿದ್ದಾರೆ.

Story first published: Sunday, November 26, 2017, 16:19 [IST]
Other articles published on Nov 26, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ