ಇಂಡೋನೇಷಿಯಾ ಮಾಸ್ಟರ್ಸ್ : ಬೆಳ್ಳಿಗೆ ತೃಪ್ತಿ ಪಟ್ಟ ಸೈನಾ ನೆಹ್ವಾಲ್

Posted By:
Saina settles for silver in Indonesia Masters

ಬೆಂಗಳೂರು, ಜನವರಿ 28 : ಭಾರತದ ಹೆಮ್ಮೆಯ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಇಂಡೋನೇಷಿಯಾ ಮಾಸ್ಟರ್ಸ್ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ವಿರೋಚಿತ ಸೋಲು ಕಂಡಿದ್ದಾರೆ. ವಿಶ್ವದ ನಂ. 1 ತಾಯ್ ಟ್ಸು ಯಿಂಗ್ ವಿರುದ್ಧ ಸೋತ ಸೈನಾ, ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.

ಜಕಾರ್ತದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ತಾಯ್ ಟ್ಸು ಯಿಂಗ್ ಅವರು 21-9 ಹಾಗೂ 21-13ರಲ್ಲಿ ಸೈನಾ ವಿರುದ್ಧ ಗೆಲುವು ಸಾಧಿಸಿದರು. ಸುಮಾರು 350,000 ಯುಎಸ್ ಡಾಲರ್ ಮೊತ್ತದ ಪ್ರಶಸ್ತಿ ಹೊಂದಿರುವ ಈ ಟೂರ್ನಮೆಂಟ್ ನ ಕ್ವಾರ್ಟರ್ ಫೈನಲ್ ನಲ್ಲಿ ಪಿವಿ ಸಿಂಧು ವಿರುದ್ಧ ಸೈನಾ ಅವರು ಗೆಲುವು ಸಾಧಿಸಿದ್ದರು.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಅವರು 5-8ರಲ್ಲಿ ಮುನ್ನಡೆ ಸಾಧಿಸಿದರೂ 27 ನಿಮಿಷಕ್ಕೂ ಅಧಿಕ ಕಾಲ ಚೈನೀಶ್ ತೈಪೆ ಆಟಗಾರ್ತಿ ವಿರುದ್ಧ ಸ್ಪರ್ಧಿಸಲಾಗಲಿಲ್ಲ.

ಕಳೆದ ವರ್ಷ ಮಲೇಷಿಯಾ ಮಾಸ್ಟರ್ಸ್ ನಂತರ ಇದೇ ಮೊದಲ ಬಾರಿಗೆ ಪ್ರಮುಖ ಟೂರ್ನಮೆಂಟ್ ನ ಫೈನಲ್ ತಲುಪಿದ್ದ ಸೈನಾ ಅವರು ಮತ್ತೆ ಉತ್ತಮ ಪ್ರದರ್ಶನ ನೀಡಲು ಮುಂದಾಗಿರುವುದು ಶುಭ ಸೂಚನೆ.

Story first published: Sunday, January 28, 2018, 16:09 [IST]
Other articles published on Jan 28, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ