ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಐದನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶಟ್ಲರ್ ಕೃಷ್ಣ ನಗರ್

ಟೋಕಿಯೋ, ಸೆಪ್ಟೆಂಬರ್ 5: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಐದನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶಟ್ಲರ್ ಕೃಷ್ಣ ನಗರ್ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಸಂಖ್ಯೆಯನ್ನು 19ಕ್ಕೆ ವಿಸ್ತರಿಸಿಕೊಂಡಿದೆ.

ಬ್ಯಾಡ್ಮಿಂಟನ್‌ನ ಎಸ್‌ಹೆಚ್ 6 ವಿಭಾಗದಲ್ಲಿ ರಾಜಸ್ಥಾನ ಮೂಲದ ಕೃಷ್ಣ ನಗರ್ ಹಾಂಗ್‌ಕಾಂಗ್‌ನ ಚು ಮನ್ ಕಾಯ್ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 21-17, 16-21, 21-17 ಅಂತರದಿಂದ ಕೃಷ್ಣ ಗೆಲುವು ಸಾಧಿಸುವ ಮೂಲಕ ಭಾರತ ಐದನೇ ಚಿನ್ನದ ಪದಕವನ್ನು ಗೆಲ್ಲಲು ಕಾರಣವಾಗಿದ್ದಾರೆ. ಫೈನಲ್ ಪಂದ್ಯ 44 ನಿಮಿಷಗಳ ಹೋರಾಟವನ್ನು ಕಂಡಿತು.

ಪುರುಷರ ಸಿಂಗಲ್ಸ್ ಎಸ್‌ಎಲ್ 4 ಕ್ಲಾಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಫ್ರಾನ್ಸ್‌ನ ಲ್ಯೂಕಾಸ್ ಮಜೂರ್ ವಿರುದ್ಧ ಸುಹಾಸ್ ಯತಿರಾಜ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ನಂತರ ಭಾರತಕ್ಕೆ ಈ ಚಿನ್ನದ ಪದಕ ಬಂದಿದೆ. ಈ ಮೂಲಕ ಭಾನುವಾರ ಬೆಲಗಿನ ಅವಧಿಯಲ್ಲಿ ಭಾರತ ಎರಡು ಪದಕವನ್ನು ಗೆದ್ದುಕೊಂಡಿದೆ. ಈ ಮೂಲಕ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ವಿವರ:

1. ಭವೀನಾಬೆನ್ ಪಟೇಲ್- ಬೆಳ್ಳಿ ಪದಕ- ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47
3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
4. ದೇವೇಂದ್ರ ಝಝಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56
7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64
8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್‌ಎಚ್ 1
9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42
10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42
11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64
12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ರೈಫಲ್ ಎಸ್‌ಹೆಚ್ 1
13. ಹರ್ವಿಂದರ್ ಸಿಂಗ್‌- ಕಂಚಿನ ಪದಕ- ಪುರುಷರ ಆರ್ಚರಿ ಸಿಂಗಲ್ಸ್ ರಿಕ್ಯೂರ್ವ್
14. ಮನೀಷ್ ನರ್ವಾಲ್ - ಚಿನ್ನದ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
15. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
14. ಮನೀಷ್ ನರ್ವಾಲ್ - ಚಿನ್ನದ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
16. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
17. ಪ್ರಮೋದ್ ಭಗತ್- ಬೆಳ್ಳಿ ಪದಕ - ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-3 ವಿಭಾಗ
18. ಸುಹಾಸ್ ಯತಿರಾಜ್- ಬೆಳ್ಳಿ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗ
19. ಕೃಷ್ಣ ನಗರ್- ಚಿನ್ನದ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಹೆಚ್ 6 ವಿಭಾಗ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 5, 2021, 10:36 [IST]
Other articles published on Sep 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X