ಏಪ್ರಿಲ್ 7ರಿಂದ ಶುರು 11ನೇ ಐಪಿಎಲ್ ಕ್ರಿಕೆಟ್ ಟೂರ್ನಿ

Posted By:
11nth IPL will start from April 7

ನವದೆಹಲಿ, ಜನವರಿ 22: ಐಪಿಎಲ್ 11ನೇ ಆವೃತಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಟೂರ್ನಿಯು ಏಪ್ರಿಲ್ 7ರಿಂದ ಮೇ 27ರ ವರೆಗೆ ನಡೆಯಲಿದೆ.

ಐಪಿಎಲ್ ಆಡಳಿತ ಮಂಡಳಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಗಳು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯಾವ ಆಟಗಾರರು ಯಾವ ತಂಡದಲ್ಲಿ ಉಳಿದಿದ್ದಾರೆ?

ಈ ಆವೃತಿಯಲ್ಲಿ ಪಂದ್ಯಗಳ ಪ್ರಾರಂಭ ಸಮಯವನ್ನು ಬದಲಾಯಿಸಲಾಗಿದ್ದು, ಪಂದ್ಯಗಳು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಆಗಲಿವೆ. ಟಿವಿಗಳ ಬೇಡಿಕೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈ ಆವೃತ್ತಿಯಲ್ಲಿ ಪುನರ್‌ ಪ್ರವೇಶ ಆಗಲಿವೆ. ಪಂಜಾಬ್ ಸೂಪರ್ ಕಿಂಗ್ಸ್‌ ತಂಡವು ತನ್ನ ತವರು ನೆಲದ ಪಂದ್ಯಗಳಲ್ಲಿ ನಾಲ್ಕನ್ನು ಮೊಹಾಲಿಯಲ್ಲಿ ಮೂರು ಪಂದ್ಯವನ್ನು ಇಂದೋರ್‌ನಲ್ಲಿ ಆಡಲಿದೆ.

ಈ ಆವೃತ್ತಿಯ ಆಟಗಾರರ ಹರಾಜಿಗೆ 360 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 578 ಆಟಗಾರರು ಇದ್ದು, ಜನವರಿ 27 ಮತ್ತು 28 ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, January 22, 2018, 19:13 [IST]
Other articles published on Jan 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ