ಕರುಣ್, ರಾಹುಲ್ ಭರ್ಜರಿಯಾಟ, ಕಿವೀಸ್ ಗೆ ಸೋಲು

Posted By:

ಮುಂಬೈ, ಅಕ್ಟೋಬರ್ 18: ಭಾರತ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡವು ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಮಂಡಳಿ ಅಧ್ಯಕ್ಷರ ಇಲೆವನ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ ಸೋಲುಂಟಾಗಿದೆ.

ಕಿವೀಸ್ ವಿರುದ್ಧ ಕರ್ನಾಟಕ ಮೂಲದ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಕರುಣ್ ನಾಯರ್ ಅವರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.

1st warm-up: Board President XI beat New Zealand by 30 runs; Karun Nair, KL Rahul shine

ಮಂಗಳವಾರ ನಡೆದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ 68 ರನ್ (75 ಎಸೆತಗಳು, 1x6, 9X4) ಮತ್ತು ಕರುಣ್ ನಾಯರ್ 78 (64 ಎಸೆತಗಳು, 12X4) ಅವರ ಅರ್ಧಶತಕದ ನೆರವಿನಿಂದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡಕ್ಕೆ 30 ರನ್‌ ಗಳ ಜಯ ಲಭಿಸಿದೆ. ಇವರಿಬ್ಬರಲ್ಲದೆ, 17 ವರ್ಷ ವಯಸ್ಸಿನ ಪೃಥ್ವಿ ಶಾ 66 ಎಸೆತಗಳಲ್ಲಿ 80ರನ್ ಗಳಿಸಿ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್‌:
ಮಂಡಳಿ ಅಧ್ಯಕ್ಷರ ಇಲೆವನ್‌: 50 ಓವರ್‌ಗಳಲ್ಲಿ 9ಕ್ಕೆ295
ನ್ಯೂಜಿಲೆಂಡ್‌: 47.4 ಓವರ್‌ಗಳಲ್ಲಿ 265ಕ್ಕೆ ಆಲೌಟ್‌

ಕಿವೀಸ್ ಪರ ಟಾಮ್ ಲಥಾಮ್‌ 59 ರನ್ (63 ಎಸೆತಗಳು, 7‍‍‍X4), ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ 22 ಎಸೆತಗಳಲ್ಲಿ 33 ರನ್‌ ಗಳಿಸಿ ಪ್ರತಿರೋಧ ಒಡ್ದಿದರು.

Story first published: Wednesday, October 18, 2017, 14:16 [IST]
Other articles published on Oct 18, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ