ಮೊದಲ ಇನ್ನಿಂಗ್ಸ್ ನಲ್ಲಿ 205 ರನ್ ಗಳಿಗೆ ಸರ್ವಪತನ ಕಂಡ ಲಂಕಾ

Posted By:

ನಾಗ್ಪುರ್, ನವೆಂಬರ್ 24: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಶ್ರೀಲಂಕಾ ಪಡೆದುಕೊಂಡಿದ್ದು, ಬೃಹತ್ ಮೊತ್ತ ಗಳಿಸುವಲ್ಲಿ ವಿಫಲವಾಗಿ 205 ಸ್ಕೋರಿಗೆ ಆಲೌಟ್ ಆಗಿದೆ.

ಶ್ರೀಲಂಕಾ ಪರ ಕರುಣಾರತ್ನೆ 51, ಚಂಡಿಮಾಲ್ 57. ಡಿಕ್ವೆಲ್ಲಾ 24ರನ್ ಗಳಿಸಿ ರನ್ ಗತಿ ಹೆಚ್ಚಿಸಲು ಯತ್ನಿಸಿದರು. ಭಾರತದ ಪರ ಆರ್ ಅಶ್ವಿನ್ 4, ಇಶಾಂತ್ ಹಾಗೂ ಜಡೇಜ ತಲಾ 3 ವಿಕೆಟ್ ಗಳಿಸಿದರು.

ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಲಾಗಿದ್ದು, ಗಾಯಾಳು ಮೊಹಮ್ಮದ್ ಶಮಿ ಬದಲಿಗೆ ವೇಗಿ ಇಶಾಂತ್ ಶರ್ಮ ತಂಡ ಸೇರಿದ್ದಾರೆ.

ಸ್ಕೋರ್ ಕಾರ್ಡ್

ಮದುವೆ ನಿಮಿತ್ತ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಭುವನೇಶ್ವರ್ ಕುಮಾರ್ ಬದಲಿಗೆ ರೋಹಿತ್ ಶರ್ಮ ತಂಡ ಸೇರಿದ್ದಾರೆ. ಉಳಿದಂತೆ ಶಿಖರ್ ಧವನ್ ಬದಲಿಗೆ ಆರಂಭಿಕ ಆಟಗಾರನಾಗಿ ಎಂ ವಿಜಯ್ ಕಣಕ್ಕಿಳಿಯುತ್ತಿದ್ದಾರೆ.

Ishant Sharma

ಆರಂಭದಲ್ಲೇ ಯಶ ಕಂಡ ವೇಗಿ ಇಶಾಂತ್ ಶರ್ಮ ಅವರು ಸಮರವಿಕ್ರಮ(13) ಅವರ ವಿಕೆಟ್ ಪಡೆದರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ಕರುಣಾರತ್ನೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಲಹಿರು ತಿರುಮನ್ನೆ (9), ಏಂಜೆಲೋ ಮ್ಯಾಥ್ಯೂಸ್ (10) ವಿಕೆಟ್ ಕೂಡಾ ಉದುರಿದ್ದು, ನಾಯಕ ದಿನೇಶ್ ಚಾಂಡಿಮಾಲ್ ಇನ್ನಿಂಗ್ಸ್ ಸಂಭಾಳಿಸಿ, ಅರ್ಧಶತಕ ಗಳಿಸಿದರು.

Story first published: Friday, November 24, 2017, 13:09 [IST]
Other articles published on Nov 24, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ