ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!

4 cricketers likely to retire in 2020

ನಿವೃತ್ತಿ ಎನ್ನುವುದು ಕ್ರೀಡೆಯ ಅವಿಭಾಜ್ಯ ಅಂಗ. ಆದರೆ ಸರಿ ಸುಮಾರು ಒಂದೂವರೆ ದಶಕಕ್ಕೂ ಅಧಿಕ ಕಾಲ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಛಾಪನ್ನೊತ್ತಿರುವ ನಿವೃತ್ತಿಯಾಗುವುದು ಅಭಿಮಾನಿಗಳಿಗೆ ಬೇಸರದ ಸುದ್ದಿ. ಅಂತಾ ಕೆಲವು ನೋವಿನ ಸುದ್ದಿಕೇಳಲು ಕ್ರಿಕೆಟ್‌ ಪ್ರೇಮಿಗಳು ಸಿದ್ದರಾಗಿರಲೇ ಬೇಕಿದೆ.

2019ರ ವರ್ಷದಲ್ಲಿ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ನಿವೃತ್ತಿಯನ್ನು ಘೋಷಿಸಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಾಶೀಮ್ ಆಮ್ಲಾ ಕೂಡ ನಿವೃತ್ತಿಯನ್ನು ಘೋಷಿಸಿದ್ದಾರೆ. ಕೆಲ ಆಟಗಾರರು ಎಲ್ಲಾ ಪಾರ್ಮ್ಯಾಟ್‌ಗಳಿಂದಲೂ ನಿವೃತ್ತಿಯನ್ನು ಪಡೆದರೆ ಕೆಲವರು ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.

ಧೋನಿ ಧಮಾಕಕ್ಕೆ 15ರ ಸಂಭ್ರಮ; ಮಾಹಿ ಹಾದಿಯ ಅಪೂರ್ವ ನೋಟಧೋನಿ ಧಮಾಕಕ್ಕೆ 15ರ ಸಂಭ್ರಮ; ಮಾಹಿ ಹಾದಿಯ ಅಪೂರ್ವ ನೋಟ

ಕಳೆದ ವರ್ಷದ ರೀತಿಯಲ್ಲೇ ಈ ವರ್ಷವೂ ಕೂಡ ಕೆಲ ಹಿರಿಯ ಪ್ರಮುಖ ಆಟಗಾರರು ನಿವೃತ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾದಲ್ಲಿ ಈ ವರ್ಷಾಂತ್ಯದ ವೇಳೆಗೆ ಟಿ20 ವಿಶ್ವಕಪ್‌ಕೂಡ ನಡೆಯಲಿದ್ದು ಕೆಲ ಆಟಗಾರರು ಅಲ್ಲಿಯವರೆಗೆ ತಂಡದಲ್ಲಿದ್ದು ಬಳಿಕ ನಿವೃತ್ತಿ ಹೇಳಿದರೆ ಅಚ್ಚರಿಯಿಲ್ಲ. ಹಾಗಾದರೆ ಈ ವರ್ಷದಲ್ಲಿ ನಿವೃತ್ತಿಯನ್ನು ಪಡೆಯುವ ಸಾಧ್ಯತೆಯಿರುವ ಆಟಗಾರರು ಯಾರು ಅನ್ನೋದನ್ನು ಬನ್ನಿ ನೋಡೋಣ;

#4 ಡೇಲ್ ಸ್ಟೇಯ್ನ್

#4 ಡೇಲ್ ಸ್ಟೇಯ್ನ್

ದಕ್ಷಿಣ ಆಫಿಕ್ರಾದ ಲೆಜೆಂಡರಿ ಬೌಲರ್ ಡೇಲ್ ಸ್ಟೇಯ್ನ್ ಕಳೆದ ದಶಕದ ಶ್ರೇಷ್ಠ ಬೌಲರ್. ಟೆಸ್ಟ್‌ ನಿಂದ ಕಳೆದ ವರ್ಷ ನಿವೃತ್ತಿಯನ್ನು ಪಡೆದಿದ್ದಾರೆ.ಗಾಯದ ಕಾರಣದಿಂದ ತವರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯದಾಗಿ ಕೆಂಪು ಚೆಂಡಿನೊಂದಿಗೆ ಆಡಿದ ಡೇಲ್ ಸ್ಟೇಯ್ನ್ ನಿಗದಿತ ಓವರ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಲಿದ್ದು ಸಾಕಷ್ಟು ನಿರೀಕ್ಷೆಗಳು ಸ್ಟೇಯ್ನ್ ಮೇಲಿದೆ. ಜೊತೆಗೆ ಎಮ್ಎಸ್‌ಎಲ್ , ಬಿಗ್ ಬ್ಯಾಷ್ ಸೇರಿದಂತೆ ಅನೇಕ ಟೂರ್ನಿಗಳಲ್ಲೂ ಪಾಲ್ಗೊಂಡಿದ್ದಾರೆ. ಈ ವರ್ಷ ಸ್ಟೇಯ್ನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸಾಧ್ಯತೆಗಳು ಹೆಚ್ಚಿವೆ.

#3 ರಾಸ್ ಟೇಯ್ಲರ್

#3 ರಾಸ್ ಟೇಯ್ಲರ್

ನ್ಯೂಜಿಲ್ಯಾಂಡ್ ಕ್ರಿಕೆಟ್‌ನ ಪ್ರತಿಭಾವಂತ ಆಟಗಾರ ರಾಸ್ ಟೇಲರ್. ಆದರೆ ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್, ಬ್ರೆಂಡನ್ ಮೆಕ್‌ಕಲಮ್, ಡೇನಿಯಲ್ ವೆಟ್ಟೋರಿಯಂತಾ ಆಟಗಾರರಿಗೆ ಹೋಲಿಸಿದರೆ ಟೇಲರ್‌ಗೆ ಸಿಕ್ಕ ಖ್ಯಾತಿ ಕಡಿಮೆಯೆ. ಆದರೆ ಟೇಯ್ಲರ್ ದಾಖಲೆಗಳು ಅಂಕಿಅಂಶಗಳ ಸಹಿತ ತಾನು ಎಂತಾ ಆಟಗಾರ ಎಂಬುದನ್ನು ತೋರಿಸುತ್ತದೆ. ಮುಂದಿನ ಮಾರ್ಚ್‌ನಲ್ಲಿ 36 ವರ್ಷಕ್ಕೆ ಕಾಲಿಡಲಿರುವ ರಾಸ್ ಟೆಯ್ಲರ್ ಕಳೆದ ವರ್ಷಲ್ಲೇ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಈ ವರ್ಷದ ಟಿ20 ವಿಶ್ವಕಪ್ ಟೇಯ್ಲರ್ ಅವರ ಕೊನೆಯ ಟೂರ್ನಿಯಾಗಿರಬಹುದು.

ಕ್ರಿಕೆಟ್‌ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!

#2 ಲಸಿತ್ ಮಲಿಂಗಾ

#2 ಲಸಿತ್ ಮಲಿಂಗಾ

ಶ್ರೀಲಂಕಾದ ಮಾರಕ ವೇಗಿ ಲಸಿತ್ ಮಲಿಂಗಾ ಟೆಸ್ಟ್‌ ಹಾಗೂ ಏಕದಿನದಿಂದ ಈಗಾಗಲೇ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಟಿ20ಯಿಂದ ನಿವೃತ್ತಿಯನ್ನು ಪಡೆದಿಲ್ಲ. 2020 ಲಸಿತ್ ಮಲಿಂಗಾ ಚುಟುಕು ಕ್ರಿಕೆಟ್‌ನಿಂದಲೂ ನಿವೃತ್ತಿಯನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ. 79 ಅಂತರಾಷ್ಟ್ರೀಯ ಟಿ20 ಟೂರ್ನಿಗಳನ್ನು ಆಡಿರುವ ಮಲಿಂಗಾ 106 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ ಎಂಬ ಹೆಗ್ಗಳಿಕೆ ಮಲಿಂಗಾ ಪಾಲಿಗಿದೆ. 2014ರಲ್ಲಿ ಶ್ರೀಲಂಕಾ ತಂಡವನ್ನು ವಿಶ್ವಕಪ್‌ನಲ್ಲಿ ಮುನ್ನಡೆಸಿರುವ ಮಲಿಂಗಾ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

#1 ಎಂ.ಎಸ್ ಧೋನಿ

#1 ಎಂ.ಎಸ್ ಧೋನಿ

ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಗ್ರೇಟ್ ಫಿನಿಷರ್ ಆಗಿ ಮಾತ್ರವಲ್ಲದೆ ನಾಯಕನಾಗಿ ದಶಕಗಳ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಖ್ಯಾತಿ ಹೊಂದಿದ್ದಾರೆ. ಮಾತ್ರವಲ್ಲದೆ ಟೀಮ್ ಇಂಡಿಯಾ ಟಿ20,ಏಕದಿನ, ಚಾಂಪಿಯನ್ಸ್‌ ಟ್ರೋಫಿಯಂತಾ ಮಹತ್ವದ ಟ್ರೋಫಿಗಳನ್ನು ಗೆಲ್ಲಲು ಕಾರಣರಾಗಿದ್ದರು. ಈಗಾಗಲೇ ಟೆಸ್ಟ್‌ ಕ್ರಿಕೆಟ್‌ನಿಂದ ಧೋನಿ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಅನಿರೀಕ್ಷಿತವಾಗಿ ಹೊರಬಿದ್ದ ನಂತರ ಧೋನಿ ಎಲ್ಲಾ ಫಾರ್ಮ್ಯಾಟ್‌ನಿಂದಲೂ ನಿವೃತ್ತಿ ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಧೋನಿ ಬಳಿಕ ಯಾವುದೇ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇದ್ದರೂ ನಿವೃತ್ತಿಯ ಬಗ್ಗೆ ಯಾವುದೇ ಮಾತನ್ನಾಡಿಲ್ಲ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ಧೋನಿ ಅಭಿಮಾನಿಗಳಿದ್ದಾರೆ. ಧೋನಿ ಟಿ20 ವಿಶ್ವಕಪ್‌ನಲ್ಲಿ ಆಡುವ ಮನಸ್ಸು ಮಾಡಿದರೂ ಅದಾದ ಬಳಿಕ ನಿವೃತ್ತಿ ಖಚಿತ.

Story first published: Wednesday, January 1, 2020, 13:54 [IST]
Other articles published on Jan 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X