ಟೆಸ್ಟ್ ಅಧಿಕ ವಿಕೆಟ್ ಗಾಗಿ ಮೆಕ್‌ಗ್ರಾತ್ ಗೆ ಸಮಾನಾಗಿ ನಿಂತ ಆ್ಯಂಡರ್ಸನ್

ಲಂಡನ್, ಸೆಪ್ಟೆಂಬರ್ 11: ಟೆಸ್ಟ್ ಕ್ರಿಕೆಟ್ ನಲ್ಲಿ ಅಧಿಕ ವಿಕೆಟ್ ಪಡೆದ ವೇಗಿಗಳಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಅವರು ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ ಗೆ ಸಮಾನಾಗಿ ನಿಂತಿದ್ದಾರೆ. ಭಾರತದೆದುರಿನ ಐದನೇ ಮತ್ತು ಕೊನೆಯ ಟೆಸ್ಟ್ ನಲ್ಲಿ ಆ್ಯಂಡರ್ಸನ್ 563 ವಿಕೆಟ್ ಸಾಧನೆಯೊಂದಿಗೆ ಮೆಕ್‌ಗ್ರಾಸ್ ದಾಖಲೆಯನ್ನು ಸರಿದೂಗಿಸಿಕೊಂಡರು.
ಕೆನ್ನಿಂಗ್ಟನ್ ಓವಲ್ ನಾಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ನ ಭಾರತದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಶಿಖರ್ ಧವನ್ 1, ಚೇತೇಶ್ವರ ಪೂಜಾರ 0 ವಿಕೆಟ್ ಒಪ್ಪಿಸುವ ಮೂಲಕ ಆ್ಯಂಡರ್ಸನ್ ಅವರ ಅಪೂರ್ವ ಸಾಧನೆಗೆ ಕಾರಣರಾದರು. ಟೆಸ್ಟ್ ಸರಣಿಯನ್ನು ಈಗಾಗಲೇ 3-1ರಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ಕೊನೆಯ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
143ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ನ ಗರಿಷ್ಠ ವಿಕೆಟ್ ಸರದಾರ 36ರ ಹರೆಯದ ಆ್ಯಂಡರ್ಸನ್ ಈ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಹೊಸದೊಂದು ದಾಖಲೆ ಬರೆಯುತ್ತ ಕಣ್ಣಿಟ್ಟಿದ್ದರು. ಆ ಕನಸೀಗ ನೆರವೇರಿದಂತಾಗಿದೆ.

1993ರಿಂದ 2007ರ ವರೆಗೆ ಆಸ್ಟ್ರೇಲಿಯ ತಂಡದಲ್ಲಿ ಪ್ರಮುಖ ಆಟಗಾರನಾಗಿ ಮಿಂಚಿದ್ದ ಮೆಕ್‌ಗ್ರಾತ್ ಒಟ್ಟು 124ನೇ ಟೆಸ್ಟ್ ನಲ್ಲಿ ಅಧಿಕ ವಿಕೆಟ್ ದಾಖಲೆ ಮೆರೆದಿದ್ದರು. ಬಲ ತೋಳಿನ ನೋವಿನೊಂದಿಗೆ ಆ್ಯಂಡರ್ಸನ್ ಸರಣಿಗೆ ಇಳಿದಿದ್ದರಾದರೂ ಚೇತರಿಕೆಕಂಡು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. (ಮೇಲಿನ ಚಿತ್ರ ಕೃಪೆ: ಇಎಸ್ಪಿಎನ್ ಕ್ರಿಕ್ ಇನ್ಫೋ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications