ಆಂಡ್ರೋ ಟೈ ನಿರ್ಧಾರವನ್ನು ನಾವು ಗೌರವಿಸುತ್ತೇವೆ: ಜಯ್‌ದೇವ್ ಉನಾದ್ಕಟ್

ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ವೇಗಿ ಆಂಡ್ರೋ ಟೈ ಇದ್ದಕ್ಕಿಂತೆ ಐಪಿಎಲ್‌ನಲ್ಲಿ ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ತವರಿಗೆ ಮರಳಿದರು. ಈ ಬೆಳವಣಿಗೆಯಿಂದಾಗಿ ತಂಡದಲ್ಲಿ ನಕಾರಾತ್ಮಕ ಮನೋಭಾವ ಉಂಟಾಗಿಲ್ಲ ಎಂದು ಆರ್‌ಆರ್ ತಂಡದ ವೇಗಿ ಜಯ್‌ದೇವ್ ಉನಾದ್ಕಟ್ ಅಭಿಪ್ರಾಯಪಟ್ಟಿದ್ದಾರೆ.

ಜಯದೇವ್ ಉನಾದ್ಕಟ್ ಆಂಡ್ರ್ಯೋ ಟೈ ನಿರ್ಧಾರದ ಬಗ್ಗೆ ಸ್ಪೋರ್ಟ್ಸ್ ಟುಡೇ ಜೊತೆಗೆ ಮಾತನಾಡಿದರು. ಆಸ್ಟ್ರೇಲಿಯಾದ ವೇಗಿ ಇಂತಾ ನಿರ್ಧಾರವನ್ನು ತೆಗೆದುಕೊಂಡಿರುವಾಗ ಏನಾದರೂ ಪೂರಕ ಅನುಭವವಾಗಿರಬಹುದು. ಹಾಗಾಗಿ ಇಂತಾ ಸಂದರ್ಭದಲ್ಲಿ ಆರ್‌ಆರ್ ಫ್ರಾಂಚೈಸಿ ಆಟಗಾರರನ್ನು ಬೆಂಬಲಿಸುತ್ತದೆ ಎಂದಿದ್ದಾರೆ ಉನಾದ್ಕಟ್.

ಡು ಪ್ಲೆಸಿಸ್, ಗಾಯಕ್ವಾಡ್ ಅದ್ಭುತ ಜೊತೆಯಾಟ, ಚೆನ್ನೈಗೆ ಭರ್ಜರಿ ಜಯ

ಗಮನಾರ್ಹ ಸಂಗತಿಯೆಂದರೆ ಆರ್‌ಆರ್‌ ತಂಡದ ಇನ್ನೂ ಕೆಲ ಆಟಗಾರರು ಈ ಬಾರಿ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಬಯೋಬಬಲ್‌ನ ಕಾರಣವನ್ನು ನೀಡಿ ಲಿಯಾಮ್ ಲಿವಿಂಗ್ಸ್ಟನ್ ಅರ್ಧಕ್ಕೆ ಐಪಿಎಲ್ ತೊರೆದು ಇಂಗ್ಲೆಂಡ್‌ಗೆ ಮರಳಿದ್ದರು. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬೆರಳಿನ ಗಾಯಕ್ಕೊಳಗಾದ ಕಾರಣ ಮರಳಿದರೆ ವೇಗಿ ಜೋಫ್ರಾ ಆರ್ಚರ್ ಟೂರ್ನಿಗೆ ಆಗಮಿಸುವ ಮುನ್ನವೇ ಗಾಯಗೊಂಡಿದ್ದು ಬಳಿಕ ಸಂಪೂರ್ಣ ಟೂರ್ನಿಯಿಂದಲೇ ಹೊರಗುಳಿದಿದ್ದರು.

"ಆಂಡ್ರ್ಯೋ ಟೈ ತವರಿಗೆ ವಾಪಾಸಾಗಲು ನಿಶ್ಚಯಿಸಿದ್ದರೆ ಅದಕ್ಕೆ ಪೂರಕವಾಗಿ ಅವರ ಮನಸ್ಸಿನಲ್ಲಿ ಏನಾದರೂ ನಡೆದಿರಬಹುದು. ಆತನ ಪ್ರಕಾರ ಅದು ಸರಿಯಾದ ನಿರ್ಧಾರ. ಬಯೋ ಬಬಲ್‌ನಲ್ಲಿರುವಾಗ ಬೇರೆ ಬೇರೆ ಯೋಚನೆಗಳು, ಸಂಗತಿಗಳು ಕಾಡಲು ಆರಂಭಿಸಿದರೆ ಅದು ಮತ್ತಷ್ಟು ಕಠಿಣವಾಗುತ್ತದೆ" ಎಂದು ಉನಾದ್ಕಟ್ ಹೇಳಿಕೊಂಡಿದ್ದಾರೆ.

ಐಪಿಎಲ್ 2021: ಚೆನ್ನೈ ಪರ ದಾಖಲೆ ಬರೆದ ಡು ಪ್ಲೆಸಿಸ್, ಋತುರಾಜ್

"ತಂಡದ ವಾತಾವರಣ ಸಾಕಷ್ಟು ಸಕಾರಾತ್ಮಕವಾಗಿದೆ. ನಕಾರಾತ್ಮಕ ಸಂಗತಿಗಳು ಹೆಚ್ಚಾಗಿ ಹರಡುತ್ತಿರುವುದನ್ನು ನಾನು ಕಂಡಿಲ್ಲ. ನಾವು ಅಂಗಳದಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕಾದ ಕಾರಣ ಋಣಾತ್ಮಕ ಸಂಗತಿಗಳು ನಮಗೆ ಸಹಾಯಕವಾಗುವುದಿದಿಲ್ಲ" ಎಂದು ಉನಾದ್ಕಟ್ ಅಭಿಪ್ರಾಯಪಟ್ಟಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, April 29, 2021, 15:01 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X