ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಶ್ಫಿಕರ್ ರಹೀಮ್ ಶತಕದ ಸೊಬಗು, ಶ್ರೀಲಂಕಾಗೆ ಭಾರಿ ಅಂತರದ ಸೋಲು

Asia cup 2018: Sri Lanka vs Bangladesh 1st match

ದುಬೈ, ಸೆಪ್ಟೆಂಬರ್ 15: ಮುಫ್ತಿಕರ್ ರಹೀಮ್ ಅವರ ಭರ್ಜರಿ ಶತಕದಿಂದಾಗಿ ಕುಸಿತದ ಹಾದಿ ಹಿಡಿದಿದ್ದ ಬಾಂಗ್ಲಾದೇಶ ಹೋರಾಟದ ಮೊತ್ತವನ್ನು ಪೇರಿಸಿದೆ.

ಏಷ್ಯಾಕಪ್ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಟಾಸ್ ಗೆದ್ದ ಮೊದಲ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮುಫ್ತಿಕರ್ ರಹೀಮ್ ಅವರ ಏಕಾಂಗಿ ಹೋರಾಟ ಬಾಂಗ್ಲಾವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯಿತು.

ಒಂದು ಕಡೆ ವಿಕೆಟ್ ಉರುಳಿತ್ತಿದ್ದರೂ ಮತ್ತೊಂದೆಡೆ ಸ್ಕ್ರೀಜಿಗೆ ಅಂಟಿಕೊಂಡಿದ್ದ ರಹೀಮ್ 150 ಎಸೆತದಲ್ಲಿ 144 ರನ್ ಭಾರಿಸಿದರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ರಹೀಮ್ ಆ ನಂತರ ಭಾರಿ ಹೊಡೆತಗಳನ್ನು ಭಾರಿಸಿ ರನ್ ರೇಟ್ ಉತ್ತಮ ಪಡಿಸಿದರು.

ಬಹಳ ತಿಂಗಳುಗಳ ನಂತರ ಏಕದಿನ ಕ್ರಿಕೆಟ್ ಗೆ ಮರಳಿದ ಲಸಿತ್ ಮಲಿಂಗಾ ಈ ಪಂದ್ಯದಲ್ಲಿ ತಾವೇಕೆ ವಿಶ್ವದರ್ಜೆಯ ಬೌಲರ್ ಎಂಬುದನ್ನು ಸಾಬೀತು ಪಡಿಸಿದರು. ಅವರು ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ಗಳನ್ನು ಕಬಳಿಸಿ ಬಾಂಗ್ಲಾವನ್ನು ಪೇಚಿಗೆ ಸಿಲುಕಿಸಿದ್ದರು.

ಪಂದ್ಯದುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಮಾಡಿದ ಅವರು 4 ವಿಕೆಟ್ ಪಡೆದರು. ಅವರನ್ನು ಹೊರತುಪಡಿಸಿ ಸುರಂಗಾ ಲಕ್ಮಲ್ , ಅಮಿಲಾ, ಇನ್ನುಳಿದ ಬೌಲರ್‌ಗಳು ಅಷ್ಟೇನು ಯಶಸ್ವಿಯಾಗಲಿಲ್ಲ.

Story first published: Sunday, September 16, 2018, 10:29 [IST]
Other articles published on Sep 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X