ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌-ಬೆಕಿ ಬೋಸ್ಟನ್‌ಗೆ ಗಂಡು ಮಗು

ಸಿಡ್ನಿ: ಆಸ್ಟ್ರೇಲಿಯಾದ ಪ್ರಮುಖ ವೇಗಿ ಪ್ಯಾಟ್ ಕಮಿನ್ಸ್ ಮತ್ತು ಬೆಕಿ ಬೋಸ್ಟನ್‌ ದಂಪತಿಗೆ ಚೊಚ್ಚಲ ಮಗು ಜನಿಸಿದೆ. ತಾವು ಚೊಚ್ಚಲ ಗಂಡು ಮಗುವಿಗೆ ಅಪ್ಪ-ಅಮ್ಮ ಅನ್ನಿಸಿಕೊಳ್ಳುತ್ತಿರುವ ಸಂಗತಿಯನ್ನು ಬೌಲಿಂಗ್ ಆಲ್ ರೌಂಡರ್ ಕಮಿನ್ಸ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

 ಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋ ಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋ

ಅಕ್ಟೋಬರ್ 12ರಂದು ಪ್ಯಾಟ್ ಕಮಿನ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಕಮಿನ್ಸ್ ಮತ್ತು ಬೋಸ್ಟನ್‌ ನಡುವಿನ ಖುಷಿಯ ಕ್ಷಣಗಳು, ಬೋಸ್ಟನ್‌ ಗರ್ಭಿಣಿಯಾಗಿದ್ದಾಗಿನ ಸಂಭ್ರಮ ಮತ್ತು ಮಗು ಹೆತ್ತ ಬಳಿಕದವರೆಗಿನ ಚಿತ್ರಣವಿದೆ. ಟಿ20 ವಿಶ್ವಕಪ್‌ ಸನಿಹವಿರುವಾಗಲೇ ಕಮಿನ್ಸ್‌ ಪಾಲಿಗೆ ವೈಯಕ್ತಿಕ ಬದುಕಿನ ಖುಷಿಯ ಕ್ಷಣ ಎದುರಾಗಿದೆ.

ಅಸಲಿಗೆ ಮಗು ಜನಿಸಿದ್ದು ಅಕ್ಟೋಬರ್‌ 8ರಂದು. ನಾಲ್ಕು ದಿನಗಳ ಬಳಿಕ ಕಮಿನ್ಸ್ ಈ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಮಗುವಿಗೆ ಈಗಾಗಲೇ ನಾಮಕರಣ ಮಾಡಲಾಗಿದೆ. ಇನ್‌ಸ್ಟಾಗ್ರಾಮ್ ವಿಡಿಯೋದ ಪ್ರಕಾರ ಮಗುವಿಗೆ ಅಲ್ಬಿ ಬೋಸ್ಟನ್ ಕಮಿನ್ಸ್ ಎಂದು ಹೆಸರಿಡಲಾಗಿದೆ.

ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!

ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada

ಪ್ಯಾಟ್ ಕಮಿನ್ಸ್ ಅವರು ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಕಮಿನ್ಸ್ ಉಪನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಪತ್ನಿ ಮಗುವಿಗೆ ಜನ್ಮ ನೀಡುವ ಮುನ್ಸೂಚನೆ ಇದ್ದಿದ್ದರಿಂದ ಕಮಿನ್ಸ್ ಈ ಬಾರಿಯ ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು. ಐಪಿಎಲ್‌ನಲ್ಲಿ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 15:57 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X