ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬ್ಯಾಟಿಂಗ್ ಕೋಚ್ ಪ್ರತಿಕ್ರಿಯೆ

ಲಂಡನ್, ಆಗಸ್ಟ್ 16: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಅಂತಿಮ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡವನ್ನು ಸೋಲಿನ ಭೀತಿಗೆ ತಳ್ಳಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್‌ಗಳ ಹಿನ್ನೆಡೆ ಅನುಭವಿಸಿದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್‌ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಸದ್ಯ ಭಾರತ ತಂಡ 154 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ. ಇಂಗ್ಲೆಂಡ್‌ಗೆ ಸವಾಲಿನ ಗುರಿಯನ್ನು ನೀಡುವ ಮೂಲಕ ಫಲಿತಾಂಶವನ್ನು ತನ್ನ ಪರವಾಗಿ ಮಾಡಲು ಭಾರತ ಅಂತಿಮ ದಿನದಲ್ಲಿ ಶತ ಪ್ರಯತ್ನವನ್ನು ನಡೆಸಲಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿಯೂ ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಬಗ್ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೆಂಬಲಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಣ್ಣ ಪುಟ್ಟ ಬಿರುಕುಗಳು ಆಟದಲ್ಲಿ ಸಾಮಾನ್ಯ . ಒಮ್ಮೆ ಅವರ ಬ್ಯಾಟ್‌ನಿಂದ ರನ್ ಹರಿಯಲು ಸಾಧ್ಯವಾದರೆ ಬಳಿಕ ಸರಾಗವಾಗಿ ರನ್ ಬರುತ್ತದೆ ಎಂದು ವಿಕ್ರಂ ರಾಥೋರ್ ಹೇಳಿಕೆ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!

ವಿದೇಶಿ ನೆಲದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ವೈಫಲ್ಯವನ್ನು ಅನುಭವಿಸುತ್ತಿರುವುದು ಅವರ ಬ್ಯಾಟಿಂಗ್ ಮೇಲೆ ಒತ್ತಡ ಬೀಳುವಂತೆ ಮಾಡಿದೆಯಾ ಎಂಬ ಪ್ರಶ್ನೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್‌ಗೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ರಾಥೋರ್, ನಿಜಕ್ಕೂ ಇಲ್ಲ ಎಂದು ಹೇಳಿದ್ದಾರೆ. "ಆದರೆ ಖಂಡಿತವಾಗಿಯೂ ನಾವು ಕಠಿಣ ಪರಿಶ್ರಮವನ್ನು ಪಡುತ್ತಿದ್ದೇವೆ. ಇದು ತಮ್ಮ ಆಟಗಾರರೊಂದಿಗೆ ಕಠಿಣ ಪರಿಶ್ರಮವನ್ನು ಪಡುತ್ತಿರುವ ವಿಭಿನ್ನ ರೀತಿಯ ಪರಿಸ್ಥಿತಿಯಾಗಿದೆ. ಅವರು ಸುದೀರ್ಘ ಕಾಲ ಕಠಿಣ ಪರಿಶ್ರಮವನ್ನು ಪಡುತ್ತಿರುವಂತೆಯೇ ಫಲಿತಾಂಶ ಉತ್ತಮವಾಗಿ ಬರುತ್ತದೆ. ಇಂತಾ ಪರಿಸ್ಥಿಗಳು ಬರುತ್ತದೆ" ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ.

"ನೀವು ಕ್ರಿಕೆಟ್ ಆಡುತ್ತಿದ್ದರೆ ಬ್ಯಾಟ್ಸ್‌ಮನ್ ಆಗಿ ನೀವು ಕೆಲ ಬಿರುಕಿನ ಕ್ಷಣಗಳನ್ನು ಎದುರಿಸುತ್ತೀರಿ. ಹಾಗಾಗಿ ನೀವು ಅವುಗಳಿಂದ ಹೊರಬರಲು ದಾರಿಯನ್ನು ಕಂಡುಕೊಳ್ಳಬೇಕಿದೆ. ಕಠಿಣ ಪರಿಶ್ರಮವನ್ನು ಪಡಬೇಕಾಗುತ್ತದೆ. ನಮ್ಮ ಪರಿಶ್ರಮಗಳು ಸರಿಯಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕು. ನಾವು ಸಪೋರ್ಟಿಂಗ್ ಸ್ಟಾಫ್‌ಗಳಾಗಿ ಆಟಗಾರರಿಗೆ ಬೆಂಬಲವಾಗಿರುತ್ತೇವೆ" ಎಂದು ರಾಥೋರ್ ಹೇಳಿದ್ದಾರೆ. "ನಮಗೆ ಒತ್ತಡ ಹೆಚ್ಚಾಗುತ್ತಾ ಎಂದು ಹೇಳಿದರೆ ನಿಜಕ್ಕೂ ಇಲ್ಲ. ಆದರೆ ಆಟಗಾರನೋರ್ವ ನಿಜಕ್ಕೂ ಅತ್ಯುತ್ತಮ ಪರಿಶ್ರಮವನ್ನು ಪಡುತ್ತಿದ್ದು ವಿಫಲವಾಗುತ್ತಿದ್ದರೆ ನಾವು ಆ ಬಗ್ಗೆ ಕಳವಳಪಡುತ್ತೇವೆ. ಆಗ ನಿಮಗೆ ಬೇಸರವಾಗುತ್ತದೆ. ನಿಮ್ಮ ಪರಿಶ್ರಮ ನಿಮಗೆ ಸಹಾಯ ಮಾಡುತ್ತಿಲ್ಲ ಎಂಬುದು ನಿಮಗೆ ಬೇಸರವನ್ನುಂಟು ಮಾಡುತ್ತದೆ" ಎಂದಿದ್ದಾರೆ ರಾಥೋರ್.

ಇನ್ನು ಇದೇ ಸಂದರ್ಭದಲ್ಲಿ ವಿಕ್ರಂ ರಾಥೋರ್ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೂಫಲ್ಯದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ 20 ರನ್‌ಗಳಿಗೆ ಔಟ್ ಆಗಿರುವ ವಿಚಾರವಾಗಿ ಕಳವಳ ಪಡುವ ಅಗತ್ಯವಿಲ್ಲ. ಅದು ಕೇವಲ ಏಕಾಗ್ರಥೆಯ ಕೊರತೆಯಿಂದ ಕಳೆದುಕೊಮಡಂತಾ ವಿಕೆಟ್. ಅಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಭಾರತ ಇಂಗ್ಲೆಂಡ್ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 200ರ ಸನಿಹದಲ್ಲಿ ಗುರಿಯನ್ನು ನೀಡಬೇಕು ಎಂದಿದ್ದಾರೆ. ಆಗ ಅಂತಿಮ ದಿನದಲ್ಲಿ ಇಂಗ್ಲೆಂಡ್ ತಮ,ಡದ ವಿರುದ್ಧ ಮೇಲುಗೈ ಸಾಧಿಸುವ ಅವಕಾಶ ಭಾರತ ತಂಡಕ್ಕೆ ಇದೆ ಎಂದು ವಿಕ್ರಂ ರಾಥೋರ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಆಡುವ ಬಳಗ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.

Virat Kohli ಔಟ್ ಆದ ನಂತರ ಹೀಗಾ ಮಾಡೋದು | Oneindia Kannada

ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್.
ಬೆಂಚ್: ಝ್ಯಾಕ್ ಕ್ರಾಲಿ, ಕ್ರೇಗ್ ಓವರ್‌ಟನ್, ಡೇನಿಯಲ್ ಲಾರೆನ್ಸ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.

For Quick Alerts
ALLOW NOTIFICATIONS
For Daily Alerts
Story first published: Monday, August 16, 2021, 16:04 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X