ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?

BCCI may pull up M Vijay, Karun Nair for breach of contract

ಬೆಂಗಳೂರು, ಅಕ್ಟೋಬರ್ 07: ಆಯ್ಕೆ ಸಮಿತಿಯ ನಿರ್ಧಾರಗಳ ಕುರಿತಾಗಿ ಆಕ್ಷೇಪ ಎತ್ತಿದ್ದ ಕಾರಣಕ್ಕೆ ಕರ್ನಾಟಕದ ಕರುಣ್ ನಾಯರ್ ಹಾಗೂ ತಮಿಳುನಾಡಿನ ಮುರಳಿ ವಿಜಯ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕ್ರಮ ಜರುಗಿಸುವ ಸಾಧ್ಯತೆಗಳಿವೆ.

ಇಬ್ಬರೂ ಆಟಗಾರರು ಆಯ್ಕೆ ಸಮಿತಿಯ ಸಂವಹನ ಕೊರತೆಯ ಕುರಿತಾಗಿ ಮಾತನಾಡುವ ಮೂಲಕ ಕೇಂದ್ರ ಗುತ್ತಿಗೆ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಕರುಣ್ ನಾಯರ್ ಭಾರತ ತಂಡದಿಂದ ಹೊರಗೆ: ಪ್ರತಿಕ್ರಿಯಿಸಿದ ನಾಯಕ ಕೊಹ್ಲಿಕರುಣ್ ನಾಯರ್ ಭಾರತ ತಂಡದಿಂದ ಹೊರಗೆ: ಪ್ರತಿಕ್ರಿಯಿಸಿದ ನಾಯಕ ಕೊಹ್ಲಿ

ಬಿಸಿಸಿಐನಿಂದ ಗುತ್ತಿಗೆ ಪಡೆದಿರುವ ಕ್ರಿಕೆಟಿಗರಿಗೆ ಕೆಲ ನಿಬಂಧನೆಗಳು ಇರುತ್ತವೆ. ಇವುಗಳನ್ನು ವಿಜಯ್ ಹಾಗೂ ಕರುಣ್ ಉಲ್ಲಂಘಿಸಿರುವುದು ಆಯ್ಕೆ ಸಮಿತಿ ಸದಸ್ಯರು ಹಾಗೂ ಬಿಸಿಸಿಐನ ಉನ್ನತ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

'ಆಯ್ಕೆ ಸಮಿತಿ ನಿರ್ಧಾರಗಳ ಕುರಿತಾಗಿ ಮಾತನಾಡುವ ಮೂಲಕ ವಿಜಯ್ ಹಾಗೂ ಕರುಣ್ ತಪ್ಪು ಮಾಡಿದ್ದಾರೆ. ಇದು ಕೇಂದ್ರ ಒಪ್ಪಂದದ ಉಲ್ಲಂಘನೆ. ಇತ್ತೀಚೆಗೆ ಮುಗಿದ ಪ್ರವಾಸದ ಸರಣಿಯ ಕುರಿತಾಗಿ 30 ದಿನಗಳ ಅಂತರದಲ್ಲಿ ಯಾರೊಬ್ಬರ ಜತೆಯಲ್ಲೂ ವಿವರ ಹಂಚಿಕೊಳ್ಳಬಾರದು ಎಂದು ನಿಯಮವಿದೆ.

ಆಯ್ಕೆ ಬಗ್ಗೆ ಕರುಣ್ ಜೊತೆ ವೈಯಕ್ತಿವಾಗಿ ಮಾತಾಡಿದ್ದೇನೆ: ಎಂಎಸ್‌ಕೆ ಪ್ರಸಾದ್ಆಯ್ಕೆ ಬಗ್ಗೆ ಕರುಣ್ ಜೊತೆ ವೈಯಕ್ತಿವಾಗಿ ಮಾತಾಡಿದ್ದೇನೆ: ಎಂಎಸ್‌ಕೆ ಪ್ರಸಾದ್

ಆದರೆ, ಇಬ್ಬರೂ ಆಟಗಾರರು ತಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದರು.

ತಂಡದಿಂದ ಕೈಬಿಡುವ ಹಂತದಲ್ಲಿ ನಮಗೆ ಮಾಹಿತಿ ಇಲ್ಲ

ತಂಡದಿಂದ ಕೈಬಿಡುವ ಹಂತದಲ್ಲಿ ನಮಗೆ ಮಾಹಿತಿ ಇಲ್ಲ

ಅಕ್ಟೋಬರ್ 11 ರಂದು ಹೈದರಾಬಾದ್​ನಲ್ಲಿ ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿ (ಸಿಒಎ) ಸಭೆ ಇದ್ದು, ಈ ವೇಳೆ ಈ ವಿಷಯ ಚರ್ಚೆಯಾಗಲಿದೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಡದಿಂದ ಕೈಬಿಡುವ ಹಂತದಲ್ಲಿ ಆಯ್ಕೆ ಸಮಿತಿಯಿಂದ ಯಾರೊಬ್ಬರೂ ಸಂವಹನ ಮಾಡುತ್ತಿಲ್ಲ ಎಂದು ಇವರಿಬ್ಬರು ಆರೋಪಿಸಿದ್ದರು.

ವಿನೋದ್ ರಾಯ್ ಸಿಒಎ ಮುಖ್ಯಸ್ಥ ಪ್ರತಿಕ್ರಿಯೆ

ವಿನೋದ್ ರಾಯ್ ಸಿಒಎ ಮುಖ್ಯಸ್ಥ ಪ್ರತಿಕ್ರಿಯೆ

ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ, ಆಯ್ಕೆ ಸಮಿತಿ ಹಾಗೂ ಆಟಗಾರರ ನಡುವೆ ಸಂವಹನ ಕೊರತೆ ಉಂಟಾಗಿಲ್ಲ. ಬಿಸಿಸಿಐನ ಆಯ್ಕೆ ಸಮಿತಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಾರದರ್ಶಕವಾಗಿ ಎಲ್ಲವೂ ನಡೆಯುತ್ತಿದೆ. ವಿಜಯ್ ಹಾಗೂ ಕರುಣ್ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯೇ ನಿರ್ಧರಿಸಲಿದೆ ಎಂದು ಬಿಸಿಸಿಐ ಸಿಒಎ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

 ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್

'ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡವನ್ನು ಪ್ರಕಟಿಸಿದ ಕೂಡಲೇ ನಾನು ಕರುಣ್ ನಾಯರ್ ಜೊತೆ ಮಾತನಾಡಿದ್ದೇನೆ. ತಂಡಕ್ಕೆ ಸ್ಥಾನ ಗಿಟ್ಟಿಸಿಕೊಳ್ಳುವ ಬಗೆಯನ್ನೂ ಆ ವೇಳೆ ವಿವರಿಸಿದ್ದೇನೆ. ಸಂವಹನ ವಿಚಾರವಾಗಿ ಆಯ್ಕೆ ಸಮಿತಿ ತುಂಬಾ ಸ್ಪಷ್ಟವಾಗಿದೆ' ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಅವರು ಪತಿಕ್ರಿಯಿಸಿದ್ದರು.

ವಿಜಯ್ ನೀಡಿದ್ದ ಹೇಳಿಕೆ

ವಿಜಯ್ ನೀಡಿದ್ದ ಹೇಳಿಕೆ

ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಮೂರನೇ ಟೆಸ್ಟ್ ಪಂದ್ಯಕ್ಕೆ ನನ್ನ ಆಯ್ಕೆ ಮಾಡಿರಲಿಲ್ಲ. ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಲಿ, ಸದಸ್ಯರಾಗಲಿ ನನ್ನನ್ನು ಸಂಪರ್ಕಿಸಿಲ್ಲ. ಒಮ್ಮೆ ಕೂಡಾ ನನ್ನನ್ನು ಈ ಬಗ್ಗೆ ಕೇಳಿಲ್ಲ, ನನ್ನ ಟೀಂ ಮ್ಯಾನೇಜ್ಮೆಂಟ್ ಜತೆ ಮಾತ್ರ ಸಂಪರ್ಕದಲ್ಲಿದ್ದೀನಿ, ಹೀಗಾಗಿ, ತಂಡಕ್ಕೆ ಆಯ್ಕೆಯಾಗದಿರುವ ವಿಷ್ಯ ತಿಳಿಯಿತು ಎಂದು ಮುರಳಿ ವಿಜಯ್ ಅವರು ಮುಂಬೈ ಮಿರರ್ ಗೆ ಪ್ರತಿಕ್ರಿಯಿಸಿದ್ದರು.

ಕರುಣ್ ನಾಯರ್ ಅಳಲು

ಕರುಣ್ ನಾಯರ್ ಅಳಲು

ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುತ್ತಾ ಬಂದಿರುವ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರು ತಮ್ಮ ದುಃಖ ತೋಡಿಕೊಂಡಿದ್ದರು. ನಾವು ಈ ಬಗ್ಗೆ ಯಾರನ್ನು ದೂರುತ್ತಿಲ್ಲ. ನಮಗೆ ಸರಿಯಾದ ಮಾಹಿತಿ ನೀಡಿಲ್ಲ, ಆಡುವ ಹನ್ನೊಂದರಲ್ಲಿ ಆಯ್ಕೆಯಾಗದಿರುವ ಬಗ್ಗೆ ನಮಗೆ ತಿಳಿಸಲಿಲ್ಲ ಎಂದು ಕರುಣ್ ಹೇಳಿದ್ದರು.

Story first published: Sunday, October 7, 2018, 13:17 [IST]
Other articles published on Oct 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X