ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಆಯ್ಕೆಗಾರರ ಹುದ್ದೆ: ಅರ್ಜಿ ಸಲ್ಲಿಸುವ ಗಡುವು ಮುಕ್ತಾಯ, ಡಿಸೆಂಬರ್ ತಿಂಗಳಲ್ಲಿ ಘೋಷಣೆ

BCCI Selectors’ Post: Ajay Ratra, SS Das, Maninder Singh, Nayan Mongia In Race

ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ ​​ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಸೋಮವಾರ ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಹಲವು ದೊಡ್ಡ ಹೆಸರುಗಳ ನಡುವೆ ಮಾಜಿ ಕ್ರಿಕೆಟಿಗರಾದ ನಯನ್ ಮೊಂಗಿಯಾ, ಮಣಿಂದರ್ ಸಿಂಗ್, ಶಿವಸುಂದರ್ ದಾಸ್ ಮತ್ತು ಅಜಯ್ ರಾತ್ರಾ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಐವರು ಆಯ್ಕೆಗಾರರ ಹುದ್ದೆಗೆ ಬಿಸಿಸಿಐ ಸುಮಾರು 100 ಅರ್ಜಿಗಳನ್ನು ಸ್ವೀಕರಿಸಿದೆ. ಮಂಡಳಿಯು ಅರ್ಜಿಗಳನ್ನು ಪರಿಶೀಲನೆ ಮಾಡಲಿದ್ದು, ಡಿಸೆಂಬರ್‌ನಲ್ಲಿ ಹೊಸ ಆಯ್ಕೆ ಸಮಿತಿಯನ್ನು ಘೋಷಣೆ ಮಾಡುತ್ತದೆ. ನೆಚ್ಚಿನ ಅರ್ಜಿದಾರರಲ್ಲಿ ಒಬ್ಬರಾಗಿರುವ ತಮಿಳುನಾಡಿನ ಲಕ್ಷ್ಮಣ್‌ ಶಿವರಾಮಕೃಷ್ಣನ್‌ಗೆ ಒಪ್ಪಿಗೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.

ಒಂದೇ ವಲಯದಿಂದ ಇಬ್ಬರು ಆಯ್ಕೆಗಾರರನ್ನು ನೇಮಿಲಸು ಬಿಸಿಸಿಐ ಆಸಕ್ತಿ ಹೊಂದಿಲ್ಲದ ಕಾರಣ, ಶಿವರಾಮಕೃಷ್ಣನ್ ಆಯ್ಕೆಗೆ ತೊಡಕಾಗಿದೆ. ತಮಿಳುನಾಡಿನ ಮತ್ತೊಬ್ಬ ಮಾಜಿ ಕ್ರಿಕೆಟಿಗ ಶರತ್ ಶ್ರೀಧರನ್ ಪ್ರಸ್ತುತ ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಪರಾಗ್ ಸ್ಫೋಟಕ ಬ್ಯಾಟಿಂಗ್; ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಸೆಮಿಸ್ ತಲುಪಿದ ಅಸ್ಸಾಂವಿಜಯ್ ಹಜಾರೆ ಟ್ರೋಫಿ: ಪರಾಗ್ ಸ್ಫೋಟಕ ಬ್ಯಾಟಿಂಗ್; ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಸೆಮಿಸ್ ತಲುಪಿದ ಅಸ್ಸಾಂ

ಸದ್ಯಕ್ಕೆ ಚೇತನ್ ಶರ್ಮಾ, ಸುನಿಲ್ ಜೋಶಿ, ದೇಬಶಿಶ್ ಮೊಹಂತಿ ಮತ್ತು ಹರ್ವಿಂದರ್ ಸಿಂಗ್ ಹೊಸ ಸಮಿತಿ ಬರುವವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಹೊಸ ಆಯ್ಕೆ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಭಾಯಿಸಲಿದೆ.

BCCI Selectors’ Post: Ajay Ratra, SS Das, Maninder Singh, Nayan Mongia In Race

ವಿಶ್ವಕಪ್‌ನಲ್ಲಿ ಭಾರತದ ಸೋಲಿನ ನಂತರ ಬಿಸಿಸಿಐ ಕಠಿಣ ಕ್ರಮ

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ನಂತರ ಬಿಸಿಸಿಐ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಿದ ಬಳಿಕ, ನೂತನ ಆಯ್ಕೆ ಸಮಿತಿ ರಚನೆ ಮಾಡಲು ಅರ್ಜಿ ಆಹ್ವಾನಿಸಿತ್ತು.

ಕಳೆದ ಬಾರಿ ಶಿವರಾಮಕೃಷ್ಣನ್ ಆಯ್ಕೆ ಸಮಿತಿಗೆ ಆಯ್ಕೆಯಾಗುವ ಪ್ರಬಲ ಅಭ್ಯರ್ಥಿಯಾಗಿದ್ದರು. ಆದರೆ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ತಮ್ಮ ಪ್ರಭಾವ ಬಳಲಿ ಚೇತನ್ ಶರ್ಮಾರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈಗ ಗಂಗೂಲಿ ಕೂಡ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ, ಕರ್ನಾಟಕದ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿರುವ ಕಾರಣ ದಕ್ಷಿಣ ಭಾರತದವರಾದ ಶಿವರಾಮಕೃಷ್ಣನ್ ಆಯ್ಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

ಬಿಸಿಸಿಐ ಶೀಘ್ರದಲ್ಲೇ ಸಭ ನಡೆಸಲು ತೀರ್ಮಾನಿಸಿದೆ. ಭಾರತ ತಂಡ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಢಾಕಾಗೆ ಪ್ರಯಾಣಿಸುವ ಮುನ್ನ ಬಿಸಿಸಿಐ ಸಭೆ ನಡೆಸುತ್ತದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಆಯ್ಕೆ ಸಮಿತಿಯ ಚೇತನ್ ಶರ್ಮಾ ಈ ಸಭೆಯಲ್ಲಿ ಭಾಗವಹಿಸಲಿದ್ದು, ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಾಧ್ಯತೆ ಇದೆ.

Story first published: Monday, November 28, 2022, 22:02 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X