ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಯ್ಕೆ ಸಮಿತಿ, ಟಿ20 ನಾಯಕತ್ವದ ಬಳಿಕ ಮತ್ತೊಂದು ದೊಡ್ಡ ಬದಲಾವಣೆಗೆ ಬಿಸಿಸಿಐ ಗಂಭೀರ ಚಿಂತನೆ!

BCCI set to appoint New Coach for Team India T20 format Dravid may Continue as Test and ODI Head Coach

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ನಿರ್ಣಾಯಕ ಹಂತದಲ್ಲಿ ಟೀಮ್ ಇಂಡಿಯಾ ಎಲ್ಲಾ ಹಂತದಲ್ಲಿಯೂ ಎಡವುತ್ತಿರುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಈ ಸೋಲು ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗೆ ಕಾರಣವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳು ತಂಡದ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿದ್ದು ಬಿಸಿಸಿಐ ಈಗಾಗಲೇ ಆಯ್ಕೆ ಸಮಿತಿಯನ್ನು ಕಿತ್ತೆಸೆದು ಆರಂಭಿಕ ಹಂತದ ಕ್ರಮವನ್ನು ತೆಗೆದುಕೊಂಡಿದೆ. ಜೊತೆಗೆ ಟಿ20 ತಂಡದಲ್ಲಿ ಮತ್ತಷ್ಟು ಬದಲಾವಣೆಯ ಸೂಚನೆಗಳೂ ದೊರೆತಿದೆ.

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆಗೆ ಬಹುತೇಕ ನಿಶ್ಚಿತವಾಗಿದೆ. 2024ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಯುವ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ಟೀಮ್ ಇಂಡಿಯಾ ಚುಕ್ಕಾಣಿ ನೀಡಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ಇದರ ಜೊತೆಗೆ ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಬದಲಾವಣೆಗೆ ಬಿಸಿಸಿ ಗಂಭೀರವಾಗಿ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಈ ಬಾರಿ ಇದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಗಳು ಇದೆ

PAK vs ENG: ಪಂದ್ಯದ ವೇಳೆ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್PAK vs ENG: ಪಂದ್ಯದ ವೇಳೆ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್

ಟಿ20 ಕ್ರಿಕೆಟ್‌ಗೆ ನೂತನ ಕೋಚ್

ಟಿ20 ಕ್ರಿಕೆಟ್‌ಗೆ ನೂತನ ಕೋಚ್

ಭಾರತೀಯ ಕ್ರಿಕೆಟ್ ತಂಡದಲ್ಲಿ ರಾಹುಲ್ ದ್ರಾವಿಡ್ ಅವರು ಮೂರು ಮಾದರಿಗೂ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. 2021ರ ವಿಶ್ವಕಪ್‌ ಅಂತ್ಯದ ಬಳಿಕ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯ ಮೇಲೂ ಈಗ ಕುತ್ತು ಬರುವ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಚುಟುಕು ಕ್ರಿಕೆಟ್ ಮಾದರಿಗೆ ಹೊಸ ಕೋಚ್ ನೇಮಕಗೊಳಿಸುವ ಬಗ್ಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ರಾಹುಲ್ ದ್ರಾವಿಡ್ ಕೋಚ್ ಶೈಲಿ ಚುಟುಕು ಮಾದರಿಗೆ ಸೂಕ್ತವಾಗಿಲ್ಲ ಎಂಬ ಅಭಿಪ್ರಾಯಗಳು ಇತ್ತೀಚೆಗೆ ವ್ಯಕ್ತವಾಗಿದ್ದು ಈ ಕಾರಣದಿಂದಾಗಿ ಬಿಸಿಸಿಐ ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಬಿಸಿಸಿಐ ಮೂಲಗಳೇ ಬಿಟ್ಟುಕೊಟ್ಟ ಮಾಹಿತಿ!

ಬಿಸಿಸಿಐ ಮೂಲಗಳೇ ಬಿಟ್ಟುಕೊಟ್ಟ ಮಾಹಿತಿ!

ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಮಾತ್ರವೇ ಪೂರ್ಣಕಾಲಿಕ ಕೋಚ್ ಆಗಿ ಮುಂದುವರಿಸಲು ನಾವು ಗಂಭೀರವಾದ ಚಿಂತನೆಗಳನ್ನು ನಡೆಸುತ್ತಿದ್ದೇವೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. "ನಾವು ಗಂಭೀರವಾಗಿ ಈ ವಿಚಾರವಾಗಿ ಚಿಂತಿಸುತ್ತಿದ್ದೇವೆ. ಇದು ರಾಹುಲ್ ದ್ರಾವಿಡ್ ಅವರನ್ನು ಗುರಿಯಾಗಿರಿಸಿ ತೆಗೆದುಕೊಳ್ಳುತ್ತಿರುವ ನಿರ್ಧಾರವಲ್ಲ ಬದಲಿಗೆ ಸತತ ಪಂದ್ಯಗಳು ಹಾಗೂ ನಿರಂತರ ಕ್ರಿಕೆಟನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ತಂಡದಲ್ಲಿ ಬದಲಾವಣೆಯ ಅಗತ್ಯವಿದ್ದು ಶೀಘ್ರದಲ್ಲೇ ಟಿ20ಗೆ ಹೊಸ ಕೋಚಿಂಗ್ ವ್ಯವಸ್ಥೆ ಬರಲಿದೆ ಎಂದು ಖಚಿತಪಡಿಸಬಲ್ಲೆ" ಎಂದು ಬಿಸಿಸಿಐ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಯಾರಾಗಲಿದ್ದಾರೆ ಮುಂದಿನ ಟಿ20 ಕೋಚ್?

ಯಾರಾಗಲಿದ್ದಾರೆ ಮುಂದಿನ ಟಿ20 ಕೋಚ್?

ಇನ್ನು ದ್ರಾವಿಡ್ ಅವರನ್ನು ಟಿ20 ಕೋಚಿಂಗ್ ಹುದ್ದೆಯಿಂದ ಬಿಡುಗಡೆಗೊಳಿಸಿದರೆ ಚುಟುಕು ಮಾದರಿಗೆ ಯಾರು ಹೊಸ ಕೋಚ್ ಆಗಲಿದ್ದಾರೆ ಎಂಬುದು ಕೂಡ ಕುತೂಹಲವಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಈವರೆಗೂ ಯಾರನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. "ಯಾರು ಯಾವಾಗ ಹೊಸದಾಗಿ ಕೋಚ್ ಸ್ಥಾನಕ್ಕೆ ನೇಮಕವಾಗಲಿದ್ದಾರೆ ಎಂಬುದನ್ನು ನಾವಿನ್ನೂ ನಿರ್ಧರಿಸಿಲ್ಲ. ಆದರೆ ಟಿ20ಗೆ ಹೊಸ ಕೋಚಿಂಗ್ ಸೆಟಪ್‌ನ ಅಗತ್ಯವನ್ನು ನಾವು ಮನಗಂಡಿದ್ದೇವೆ. ಜನವರಿ ತಿಂಗಳಿನಲ್ಲಿ ಟಿ20 ಮಾದರಿಗೆ ನಾವು ಹೊಸ ನಾಯಕನನ್ನು ಅಧಿಕೃತವಾಗಿ ನೇಮಕಗೊಳಿಸಲಿದ್ದೇವೆ. ಅದಾದ ಬಳಿಕ ಹೊಸ ಕೋಚ್ ಕೂಡ ಆಯ್ಕೆಯಾಗಬಹುದು" ಎಂದು ಹೇಳಿಕೆ ನೀಡಿದ್ದಾರೆ

ಮುನ್ನೆಲೆಗೆ ಬಂದ ಆಶಿಶ್ ನೆಹ್ರಾ ಹೆಸರು

ಮುನ್ನೆಲೆಗೆ ಬಂದ ಆಶಿಶ್ ನೆಹ್ರಾ ಹೆಸರು

ಟೀಮ್ ಇಂಡಿಯಾದ ಟಿ20 ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದ ಬಳಿಕ ಇದೀಗ ಟಿ20 ಕೋಚಿಂಗ್ ಸ್ಥಾನಕ್ಕೆ ಆಶಿಶ್ ನೆಹ್ರಾ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾದ ಚುಟುಕು ಮಾದರಿಯ ಕೋಚಿಂಗ್ ಸ್ಥಾನಕ್ಕೆ ಆಶಿಶ್ ನೆಹ್ರಾ ಅತ್ಯುತ್ತಮ ಆಯ್ಕೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಕೋಚ್ ರವಿ ಶಾಸ್ತ್ರಿ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಆಶಿಶ್ ನೆಹ್ರಾ ಹೆಸರನ್ನು ಬಹಿರಂಗವಾಗಿ ಹೇಳಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಟದ ಕೋಚ್ ಆಗಿ ಯಶಸ್ವಿಯಾಗಿ ಜವಾಬ್ಧಾರಿ ನಿರ್ವಹಿಸಿದ ಬಳಿಕ ಕೋಚ್ ಹುದ್ದೆಗೆ ನೆಹ್ರಾ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಆದರೆ ಬಿಸಿಸಿಐ ಈ ವಿಚಾರವಾಗಿ ಯಾವ ಹೆಜ್ಜೆಯಿಡಲಿದೆ ಎಂಬುದು ಈಗ ಸಾಕಷ್ಟು ಕುತೂಹಲ ಮೂಡಿಸಿದೆ.

Story first published: Monday, December 5, 2022, 16:29 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X