ಆಟಕ್ಕಿಲ್ಲದ, ಲೆಕ್ಕಕ್ಕಿಲ್ಲದ ಕೊಚ್ಚಿ ತಂಡಕ್ಕೆ 800 ಕೋಟಿ ರು ಬಂಪರ್!

Posted By:

ಬೆಂಗಳೂರು, ಅಕ್ಟೋಬರ್ 25: ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ವಿಫಲವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮತ್ತೆ ಹಿನ್ನಡೆಯಾಗಿದೆ.

ಆಟಕ್ಕೂ, ಲೆಕ್ಕಕ್ಕೂ ಇಲ್ಲದ ಕೊಚ್ಚಿ ತಂಡಕ್ಕೆ ಭಾರಿ ಮೊತ್ತದ ಉಡುಗೊರೆ ನೀಡಲು ಬಿಸಿಸಿಐ ಸಿದ್ಧವಾಗಬೇಕಿದೆ. ಕೊಚ್ಚಿ ಟಸ್ಕರ್ಸ್ ತಂಡದ ಮ್ಯಾನೇಜ್​ವೆುಂಟ್ ಬರೋಬ್ಬರಿ 850 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

2011ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಒಪ್ಪಂದವನ್ನು ರದ್ದು ಮಾಡಿ ಐಪಿಎಲ್​ನಿಂದ ಹೊರಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಿ ಸೂತ್ರಕ್ಕೆ ಬಿಸಿಸಿಐ ಮುಂದಾಗಿದೆ. ಹೀಗಾಗಿ, ಪರಿಹಾರವಾಗಿ 850 ಕೋಟಿ ರೂ. ನೀಡಲು ಒಪ್ಪಿಕೊಂಡಿದೆ.

BCCI set to pay Rs 850 cr to Kochi Tuskers as compensation

2011ರಲ್ಲಿ ಕೊಚ್ಚಿ ತಂಡ ನೀಡಿರುವ ಬ್ಯಾಂಕ್ ಖಾತ್ರಿ ಮೊತ್ತವನ್ನು ಬಿಸಿಸಿಐ ವಾಪಸ್ ನೀಡಿರಲಿಲ್ಲ. ಬಿಸಿಸಿಐಯ ಈ ನಿರ್ಧಾರವನ್ನು ಪ್ರಶ್ನಿಸಿ ಕೊಚ್ಚಿ ಫ್ರಾಂಚೈಸಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಲಹೋಟಿ ನೇತೃತ್ವದ ನ್ಯಾಯ ಪಂಚಾಯಿತಿ ಸಮಿತಿ ಮೊರೆ ಹೋಗಿದ್ದು, ನ್ಯಾಯ ಸಮಿತಿಯು ಕೊಚ್ಚಿ ತಂಡದ ಪರ ತೀರ್ಪು ನೀಡಿದೆ.

2015ರಲ್ಲಿ ಮಧ್ಯಸ್ಥಿಕೆ ಸಮಿತಿಯ ನೇತೃತ್ವ ವಹಿಸಿಕೊಂಡಿದ್ದ ನ್ಯಾ. ಆರ್​ಎಸ್ ಲಾಹೋತಿ, ಬಿಸಿಸಿಐ ವಾದವನ್ನು ತಳ್ಳಿಹಾಕಿದ್ದಲ್ಲದೆ, ಕೊಚ್ಚಿ ಫ್ರಾಂಚೈಸಿಗೆ ಪರಿಹಾರವಾಗಿ 550 ಕೋಟಿ ರೂ.ಪರಿಹಾರ ನೀಡಬೇಕು ಎಂದು ಹೇಳಿದ್ದಲ್ಲದೆ, ನೀಡದೇ ಹೋದ ಪಕ್ಷದಲ್ಲಿ ವರ್ಷಕ್ಕೆ ಶೇ.18ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಒಟ್ಟಾರೆಯಾಗಿ ನೀಡಬೇಕು ಎಂದು ಆದೇಶಿಸಿತ್ತು.

Story first published: Wednesday, October 25, 2017, 12:43 [IST]
Other articles published on Oct 25, 2017
Please Wait while comments are loading...