ಆತನಿಗೆ ಡೆತ್ ಓವರ್‌ಗಳಲ್ಲಿ ಬೌಲಿಂಗ್ ನೀಡುವ ಬಗ್ಗೆ ರೋಹಿತ್ ಶರ್ಮಾ ಚಿಂತಿಸಬೇಕು: ಆರ್‌ಪಿ ಸಿಂಗ್

ಒಬ್ಬ ಬೌಲರ್ ನಿಯಮಿತವಾಗಿ ಡೆತ್ ಓವರ್‌ಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದರೆ, ನಾಯಕ ರೋಹಿತ್ ಶರ್ಮಾ ತನ್ನ ಆಯ್ಕೆಗಳನ್ನು ಮರುಪರಿಶೀಲಿಸಬೇಕು ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ಪಂದ್ಯಗಳ ಅವಧಿಯಲ್ಲಿ ಟೀಮ್ ಇಂಡಿಯಾ ಅಂತಿಮ ಓವರ್‌ಗಳಲ್ಲಿ ಭಾರಿ ರನ್‌ಗಳನ್ನು ಬಿಟ್ಟುಕೊಡುತ್ತಿದೆ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದರು ರನ್ ಬಿಟ್ಟುಕೊಡುವುದೇನು ಕಡಿಮೆಯಾಗಿಲ್ಲ.

ದೀಪ್ತಿ ಶರ್ಮಾ ರನ್ ಔಟ್ ವಿವಾದ: MCCಯಿಂದ ಹೊರಬಿತ್ತು ಮಹತ್ವದ ಹೇಳಿಕೆ; ಇಂಗ್ಲೆಂಡ್‌ಗೆ ಮುಖಭಂಗದೀಪ್ತಿ ಶರ್ಮಾ ರನ್ ಔಟ್ ವಿವಾದ: MCCಯಿಂದ ಹೊರಬಿತ್ತು ಮಹತ್ವದ ಹೇಳಿಕೆ; ಇಂಗ್ಲೆಂಡ್‌ಗೆ ಮುಖಭಂಗ

ಭಾನುವಾರ, ಸೆಪ್ಟೆಂಬರ್ 25 ರಂದು ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ತಮ್ಮ ಕೊನೆಯ ಐದು ಓವರ್‌ಗಳಲ್ಲಿ 63 ರನ್‌ಗಳನ್ನು ಬಿಟ್ಟುಕೊಟ್ಟಿತು. ಮೊಹಾಲಿಯಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ 209 ರನ್‌ಗಳನ್ನು ಕೂಡ ಡಿಫೆಂಡ್ ಮಾಡಿಕೊಳ್ಳಲು ಟೀಂ ಇಂಡಿಯಾಗೆ ಸಾಧ್ಯವಾಗಿರಲಿಲ್ಲ.

ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅತ್ಯುತ್ತಮ ಪ್ರದರ್ಶನದಿಂದ ದೂರವಿದ್ದರೆ, ಜಸ್ಪ್ರೀತ್ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ ಅವರ ಅತ್ಯಂತ ದುಬಾರಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಏಷ್ಯಾ ಕಪ್ 2022 ರಲ್ಲಿ ಡೆತ್ ಬೌಲಿಂಗ್ ಕಳವಳಕ್ಕೆ ಕಾರಣವಾಗಿತ್ತು ಮತ್ತು 2022 ರ ಟಿ20 ವಿಶ್ವಕಪ್‌ಗೆ ಹೋಗುವ ಮುನ್ನವೂ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಂತಿಮ ಹಂತದಲ್ಲಿ ಬೌಲಿಂಗ್ ನೀಡಬಾರದು

ಅಂತಿಮ ಹಂತದಲ್ಲಿ ಬೌಲಿಂಗ್ ನೀಡಬಾರದು

ಡೆತ್ ಓವರ್‌ಗಳಲ್ಲಿ ರನ್‌ಗಾಗಿ ಹೋಗುವ ಬೌಲರ್‌ಗಳಿಗೆ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸ್ವಲ್ಪ ಸಮಯದವರೆಗೆ ವಿಭಿನ್ನ ಪಾತ್ರವನ್ನು ನೀಡಬೇಕು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.

"ಡೆತ್ ಓವರ್‌ಗಳಲ್ಲಿ ಬೌಲರ್ ಪದೆ ಪದೇ 18-19 ರನ್‌ಗಳನ್ನು ಬಿಟ್ಟುಕೊಡುತ್ತಿದ್ದರೆ, ಆ ಹಂತದಲ್ಲಿ ಅವನಿಗೆ ಬೌಲಿಂಗ್ ನೀಡಬಾರದು. ಬೌಲರ್‌ಗಳ ದೊಡ್ಡ ವಿಕೆಟ್‌ಗಳು ಮತ್ತು ಅವರು ಆರಂಭಿಕ ಓವರ್ ಗಳಲ್ಲಿ ವಿಕೆಟ್‌ಗಳನ್ನು ಪಡೆದರೆ, ಅವರು ಅಂತಿಮ ಓವರ್ ಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಾರೆ." ಎಂದು ಅವರು ಹೇಳಿದರು.

ಟೀಂ ಇಂಡಿಯಾದಲ್ಲಿ ತನ್ನ ಪಾತ್ರವೇನು ಎನ್ನುವ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್

ಬೌಲರ್ ಆತ್ಮವಿಶ್ವಾಸ ಕಳೆದುಕೊತ್ತಾನೆ

ಬೌಲರ್ ಆತ್ಮವಿಶ್ವಾಸ ಕಳೆದುಕೊತ್ತಾನೆ

"ಆದರೆ ಅದು ಸರಿಯಾಗಿ ನಡೆಯದಿದ್ದರೆ, ಬೌಲರ್ ಅನ್ನು ಸ್ವಲ್ಪ ಸಮಯದವರೆಗೆ ಪಾತ್ರದಿಂದ ದೂರವಿಡಬೇಕು, ಏಕೆಂದರೆ ಅದು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ."

ಅದರಲ್ಲೂ ಇತ್ತೀಚಿನ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಅಂತಿಮ ಓವರ್ ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ಟೀಂ ಇಂಡಿಯಾಗೆ ತಲೆ ನೋವಾಗಿದೆ. ಬುಮ್ರಾ ವಾಪಸಾದ ಮೇಲೂ ಕೂಡ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಹರ್ಷಲ್ ಪಟೇಲ್ ಕೂಡ ಹೆಚ್ಚಿನ ರನ್ ಬಿಟ್ಟುಕೊಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಶಮಿ, ಅರ್ಷ್‌ದೀಪ್ ಕಣಕ್ಕೆ

ದಕ್ಷಿಣ ಆಫ್ರಿಕಾ ವಿರುದ್ಧ ಶಮಿ, ಅರ್ಷ್‌ದೀಪ್ ಕಣಕ್ಕೆ

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತವು ವಿಭಿನ್ನ ವೇಗದ ಬೌಲಿಂಗ್ ಸಂಯೋಜನೆಯನ್ನು ಹೊಂದಿದೆ.

ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ವರದಿ ಮಾಡುತ್ತಾರೆ ಮತ್ತು ಅರ್ಷ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ತಂಡಕ್ಕೆ ವಾಪಸಾಗಲಿದ್ದಾರೆ ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.

ಯೋಜನೆಯನ್ನು ಬದಲಿಸಬೇಕು

ಯೋಜನೆಯನ್ನು ಬದಲಿಸಬೇಕು

ಆರ್‌ಪಿ ಸಿಂಗ್ ಡೆತ್ ಬೌಲಿಂಗ್ ಸಮಸ್ಯೆಯನ್ನು ಎದುರಿಸಲು ಯೋಜನೆಯಲ್ಲಿ ಬದಲಾವಣೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಕಳಪೆ ಡೆತ್ ಬೌಲಿಂಗ್‌ನಿಂದಾಗಿ ಟೀಮ್ ಇಂಡಿಯಾ ತನ್ನ ಇತ್ತೀಚಿನ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಭಾರತವು ಡೆತ್ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯಲು ನೋಡಬೇಕು ಎಂದು ಸಲಹೆ ನೀಡಿದರು, ಆರ್‌ಪಿ ಸಿಂಗ್ ಹೇಳಿದರು. "ಇದು ಸಂಪೂರ್ಣ ಭಾರತೀಯ ಬೌಲಿಂಗ್ ಘಟಕವಾಗಿತ್ತು, ಅರ್ಷದೀಪ್ ಸಿಂಗ್ ಅವರ ಆಯ್ಕೆಯ ಬಗ್ಗೆ ಒಂದೇ ಪ್ರಶ್ನೆ ಉಳಿದಿದೆ. ಆದರೆ, ಡೆತ್ ಬೌಲಿಂಗ್ ಇನ್ನೂ ಕಳವಳಕಾರಿಯಾಗಿದೆ. ಕೌಶಲ್ಯದ ಕೊರತೆಯು ಸಮಸ್ಯೆಯಲ್ಲ. ಅಂತಿಮ ಓವರ್‌ಗಳಲ್ಲಿ ರನ್‌ಗಳನ್ನು ಉಳಿಸಲು ನೋಡುವುದಕ್ಕಿಂತ ವಿಕೆಟ್‌ಗಳನ್ನು ಪಡೆಯುವ ಯೋಜನೆಯನ್ನು ರೂಪಿಸಬೇಕು. ಆದ್ದರಿಂದ, ಮನಸ್ಥಿತಿಯಲ್ಲೂ ಬದಲಾವಣೆಯ ಅಗತ್ಯವಿದೆ." ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.

ವಿಶ್ವಕಪ್‌ಗೆ ತೆರಳುವ ಮುನ್ನ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಎದುರಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, September 26, 2022, 8:01 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X