ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲು ಬ್ಯಾಟ್‌ ಮಾಡಿದ ಪಂದ್ಯಗಳಲ್ಲಿ ಭಾರತದ ಸೋಲುತ್ತಿರುವುದಕ್ಕೆ ಕಾರಣ ತಿಳಿಸಿದ ಬ್ಯಾಟಿಂಗ್ ಕೋಚ್

Coach Vikram Rathour Said That Dew Is The Reason Behind India Lost While Defending Target

ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ 200 ರನ್‌ಗಳನ್ನು ಗಳಿಸಿಯೂ ಅದನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಟೀಂ ಇಂಡಿಯಾ ಬೌಲರ್ ಗಳ ನೀರಸ ಪ್ರದರ್ಶನವೇ ಇದಕ್ಕೆ ಕಾರಣ ಎಂದು ಎಲ್ಲರೂ ದೂರುತ್ತಿರುವಾಗ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್‌ ಮಾತ್ರ ವಿಭಿನ್ನವಾದ ಉತ್ತರ ನೀಡಿದ್ದಾರೆ.

ಬೃಹತ್ ಮೊತ್ತ ಗಳಿಸಿಯೂ ಅದನ್ನು ರಕ್ಷಿಸಿಕೊಳ್ಳಲು ವಿಫಲವಾಗುತ್ತಿರುವುದಕ್ಕೆ "ಇಬ್ಬನಿ" ಕಾರಣ ಎಂದು ವಿಕ್ರಮ್ ರಾಥೋಡ್ ಹೇಳಿದ್ದಾರೆ. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ಇಬ್ಬನಿ ಸಮಸ್ಯೆಯ ಬಗ್ಗೆ ಯಾವುದೇ ದೂರು ಬಂದಿಲ್ಲ.

IND A vs NZ A: ಸ್ಯಾಮ್ಸನ್, ತಿಲಕ್, ಶಾರ್ದೂಲ್ ಅರ್ಧಶತಕ; ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತIND A vs NZ A: ಸ್ಯಾಮ್ಸನ್, ತಿಲಕ್, ಶಾರ್ದೂಲ್ ಅರ್ಧಶತಕ; ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

ಏಷ್ಯಾಕಪ್‌ನ ಸೂಪರ್ 4 ಹಂತಗಳಿಂದ ಭಾರತ ಇದುವರೆಗೆ ಆರು ಟಿ20 ಪಂದ್ಯಗಳನ್ನಾಡಿದೆ. ಅದರಲ್ಲಿ ಮೂರು ಪಂದ್ಯಗಳಲ್ಲಿ ಜಯಗಳಿಸಿದ್ದು, ಮೂರರಲ್ಲಿ ಸೋತಿದೆ. ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಮೂರು ಸೋಲುಗಳು ಗುರಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಬಂದಿವೆ.

ರಾಥೋಡ್ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ದುಬೈನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಾವುದೇ ಭಾರತೀಯ ತಂಡದ ಸದಸ್ಯರು, ಇಬ್ಬನಿಯಿಂದ ಬೌಲಿಂಗ್ ಕಷ್ಟವಾಯಿತು ಎಂದು ದೂಷಿಸಲಿಲ್ಲ.

ಟಾಸ್ ಮುಖ್ಯ ಪಾತ್ರ ವಹಿಸುತ್ತದೆ ಎಂದ ರಾಥೋಡ್

ಟಾಸ್ ಮುಖ್ಯ ಪಾತ್ರ ವಹಿಸುತ್ತದೆ ಎಂದ ರಾಥೋಡ್

ನಾವು ಗುರಿಗಳನ್ನು ರಕ್ಷಿಸುವಲ್ಲಿ ಉತ್ತಮವಾಗಲು ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಬೌಲರ್‌ಗಳಿಗೆ ಅದಕ್ಕೆ ತಕ್ಕಂತಹ ವಾತಾವರಣ ಇರಬೇಕಾಗುತ್ತದೆ, ಟಾಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

ಪ್ರತಿ ಬಾರಿಯೂ ನಾವು ಉತ್ತಮ ಮೊತ್ತವನ್ನು ಗಳಿಸಿ ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಲು ಇಬ್ಬನಿ ಬೀಳುವುದು ಕಾರಣವಾಗಿದೆ. ಆದ್ದರಿಂದ ಎದುರಾಳಿಗಳಿಗೆ ಗೆಲುವು ಸುಲಭವಾಗುತ್ತದೆ ಎಂದು ರಾಥೋಡ್ ಬುಧವಾರ ತಿರುವನಂತಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದ ಮುನ್ನಾದಿನದಂದು ಹೇಳಿದರು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಉಪನಾಯಕ!; ವರದಿ

ಇಬ್ಬನಿಯ ಕಾರಣದಿಂದ ಮೊಹಾಲಿಯಲ್ಲಿ ಸೋಲಾಯಿತು

ಇಬ್ಬನಿಯ ಕಾರಣದಿಂದ ಮೊಹಾಲಿಯಲ್ಲಿ ಸೋಲಾಯಿತು

ಭಾರತವು 200 ಪ್ಲಸ್ ಗುರಿಯನ್ನು ರಕ್ಷಿಸಲು ಸಾಧ್ಯವಾಗದ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ರಾಥೋಡ್ ಉಲ್ಲೇಖಿಸಿದರು. ಬೌಲರ್ ಗಳು ಎದುರಿಸಿದ ರೀತಿಯ ಟೀಕೆಗಳ ಹೊರತಾಗಿಯೂ ಅವರ ಪರವಾಗಿ ಮಾತನಾಡಿದ್ದಾರೆ.

"ನಾನು ಬೌಲರ್‌ಗಳನ್ನು ಟೀಕಿಸುವುದಿಲ್ಲ ಏಕೆಂದರೆ ಅವರು ಕೊನೆಯ ಓವರ್‌ನವರೆಗೂ ಪಂದ್ಯವನ್ನು ತಳ್ಳಲು ಸಮರ್ಥರಾಗಿದ್ದಾರೆ, ಪ್ರತಿ ಬಾರಿಯೂ, ನಾವು ಡಿಫೆಂಡ್ ಮಾಡಲು ನೋಡಿದಾಗ ಖಂಡಿತವಾಗಿಯೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಬೌಲರ್‌ಗಳಿಗೆ ಅವರ ಜವಾಬ್ದಾರಿ ಗೊತ್ತಿದೆ

ಬೌಲರ್‌ಗಳಿಗೆ ಅವರ ಜವಾಬ್ದಾರಿ ಗೊತ್ತಿದೆ

ಅಂತರಾಷ್ಟ್ರೀಯ ಕ್ರಿಕೆಟ್ ಆಡುವವರಿಗೆ ತರಬೇತಿ ನೀಡಲು ಟೀಮ್ ಮ್ಯಾನೇಜ್‌ಮೆಂಟ್ ಎಂದಿಗೂ ಪ್ರಯತ್ನಿಸುವುದಿಲ್ಲ ಆದರೆ ಅವರ ಶಕ್ತಿಯನ್ನು ಬೆಂಬಲಿಸಲು ಪ್ರೋತ್ಸಾಹಿಸುತ್ತದೆ ಎಂದು ವಿಕ್ರಮ್ ರಾಥೋಡ್ ಹೇಳಿದರು.

ಅರ್ಷದೀಪ್ ಸಿಂಗ್‌ರಂತಹ ಬೌಲರ್ ಗಳಿಗೆ ಯಾವಾಗಲೂ ತಮ್ಮ ಸ್ವಂತ ಯೋಜನೆಗಳನ್ನು ಅನುಸರಿಸಲು ಹೇಳಲಾಗುತ್ತದೆ ಎಂದು ಅವರು ಹೇಳಿದರು. "ಈ ಹಂತದಲ್ಲಿ, ನಾವು ಅವರಿಗೆ ಏನನ್ನೂ ಹೇಳುತ್ತಿಲ್ಲ. ಅರ್ಷದೀಪ್ ಸಿಂಗ್ ಸ್ಲಾಗ್ ಓವರ್‌ಗಳಲ್ಲಿ ಐಪಿಎಲ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ, ಆದ್ದರಿಂದ ನಾವು ಯೋಜನೆಗಳನ್ನು ಅನುಸರಿಸಲು ಅವರನ್ನು ಬೆಂಬಲಿಸುತ್ತೇವೆ. ಪ್ರತಿ ಬ್ಯಾಟರ್‌ಗೆ ಎಲ್ಲಿ ಬೌಲಿಂಗ್ ಮಾಡಬೇಕು ಮತ್ತು ಅವರ ಯೋಜನೆಗಳನ್ನು ಅನುಸರಿಸಬೇಕು ಎಂದು ಅವರಿಗೆ ತಿಳಿದಿದೆ." ಅವರು ಹೇಳಿದರು.

 ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಬದಲಾವಣೆ

ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಬದಲಾವಣೆ

ಭಾರತದ ಅಗ್ರ ಮೂರು ಆಟಗಾರರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ ತಮ್ಮ ಹಳತಾದ ವಿಧಾನಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು ಆದರೆ ಕಳೆದ ವಿಶ್ವಕಪ್ ಟೂರ್ನಿಯ ನಂತರದ ಮನಸ್ಥಿತಿಯ ಬದಲಾವಣೆಯಿಂದ ರಾಥೋಡ್ ಸಂತೋಷಪಟ್ಟಿದ್ದಾರೆ.

"ನಾವು ಬ್ಯಾಟಿಂಗ್ ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವು ಹೆಚ್ಚು ಆಕ್ರಮಣಕಾರಿಯಾಗಿರಲು ಪ್ರಯತ್ನಿಸುತ್ತಿರುವ ವಿಧಾನ ಬದಲಾಗಿದೆ, ನಾವು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಿದ್ದೇವೆ, ಅದು ಸಾಕಷ್ಟು ಸ್ಪಷ್ಟವಾಗಿದೆ" ಎಂದು ಹೇಳಿದರು.

"ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ನಮ್ಮಲ್ಲಿರುವ ದೊಡ್ಡ ಸವಾಲಾಗಿದೆ. ವಿಶ್ವಕಪ್‌ನಲ್ಲಿ ಆಡುವವರಿಗೆ ಸಾಧ್ಯವಾದಷ್ಟು ಅವಕಾಶಗಳನ್ನು ನೀಡಲು ನಾವು ಬಯಸುತ್ತೇವೆ ಆದರೆ ಅದು ಹೇಗೆ ಸಂಭವಿಸುತ್ತದೆ ಎಂಬುದು ಆಟದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ." ಎಂದು ರಾಥೋಡ್ ಹೇಳಿದ್ದಾರೆ.

Story first published: Tuesday, September 27, 2022, 23:30 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X