ಐಪಿಎಲ್ ಮಾಧ್ಯಮ ಹಕ್ಕು ವಿತರಣೆ ವಿಚಾರಕ್ಕೆ ಬಿಸಿಸಿಐಗೆ 52 ಕೋಟಿ ದಂಡ

Posted By:

ನವದೆಹಲಿ, ನವೆಂಬರ್ 29 : ಕಳೆದ ಐಪಿಎಲ್ ಸಮಯದಲ್ಲಿ ಮಾಧ್ಯಮ ಹಕ್ಕುಗಳ ವಿತರಣೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಬಿಸಿಸಿಐ ವಿಫಲವಾಗಿದೆ ಮತ್ತು ಹೆಚ್ಚು ಲಾಭಗಳಿಸಲು ಸ್ಪರ್ಧಾತ್ಮಕತೆಯನ್ನು ಗಾಳಿಗೆ ತೂರಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ದೂರಿದೆ.

ಕ್ರಿಕೆಟ್ ಆಟಗಾರರಿಗೆ ಇನ್ಮುಂದೆ ಡಿಎನ್ಎ ಪರೀಕ್ಷೆ ಕಡ್ಡಾಯ!

ಸ್ಪರ್ಧಾತ್ಮಕತೆ ಮೀರಿ ಐಪಿಎಲ್ ಟೂರ್ನಿ ನಡೆಸಿದ್ದಕ್ಕಾಗಿ ಬಿಸಿಸಿಐಗೆ 52.24 ಕೋಟಿ ದಂಡವನ್ನೂ ಅದು ವಿಧಿಸಿದೆ. ಈ ಮುಂಚೆಯೂ ಸಿಸಿಐ ಬಿಸಿಸಿಐ ಗೆ ಇದೇ ವಿಷಯಕ್ಕೆ ದಂಡ ವಿಧಿಸಿತ್ತು.

Competition Commission slaps Rs 52-cr penalty on BCCI

ಐಪಿಎಲ್ ತಂಡಗಳ ಹರಾಜುದಾರರ ಹಿತಕ್ಕಾಗಿ ನ್ಯಾಯ ಸಮ್ಮತವಲ್ಲದ ಟಿವಿ ಹಕ್ಕನ್ನು ಬಿಸಿಸಿಐ ಒಪ್ಪಿಕೊಂಡಿತ್ತು ಎಂದು ಸಿಸಿಐ ಹೇಳಿದೆ.

ಫೆಬ್ರುವರಿ 2013ರಲ್ಲಿಯೂ ಸಿಸಿಐ ಇದೇ ಕಾರಣಕ್ಕಾಗಿ ಇಷ್ಟೆ ಮೊತ್ತದ ದಂಡವನ್ನು ಬಿಸಿಸಿಐ ಮೇಲೆ ಹೇರಿತ್ತು.

ಐಪಿಎಲ್ ನಿಂದಾಗಿ ಸಾಕಷ್ಟು ಬಾರಿ ಮುಜುಗರಕ್ಕೆ ಒಳಗಾಗಿದ್ದರೂ ಬಿಸಿಸಿಐ, ಐಪಿಎಲ್ ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಿಫಲವಾಗುತ್ತಿರುವುದು ಐಪಿಎಲ್ ನಿಂದ ಬಿಸಿಸಿಐಗೆ ಆಗುತ್ತಿರುವ ಲಾಭವನ್ನು ತೋರಿಸುತ್ತದೆ.

ವಿವಾದಗಳ ಮೂಟೆಯಾದರೂ ಐಪಿಎಲ್ ಅನ್ನು ಬಿಡಲು ಬಿಸಿಸಿಐ ತಯಾರಿಲ್ಲ. ಏಕೆಂದರೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿ.

Story first published: Wednesday, November 29, 2017, 19:20 [IST]
Other articles published on Nov 29, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ