ಹೆಣ್ಣು ಮಗುವಿನ ತಂದೆಯಾದ ಕ್ರಿಕೆಟಿಗ ಚೇತೇಶ್ವರ್‌ ಪೂಜಾರಾ

Posted By:
Cricketer Cheteshwar Pujara become father today

ಮುಂಬೈ, ಫೆಬ್ರವರಿ 23: ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಎನಿಸಿಕೊಂಡಿರುವ ಚೇತೇಶ್ವರ್‌ ಪೂಜಾರ ಅವರು ತಂದೆಯಾಗಿದ್ದಾರೆ. ಪೂಜಾರ ಅವರ ಪತ್ನಿ ಪೂಜಾ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

'ನಮ್ಮ ಜೀವನದಲ್ಲಿ ಬರುವ ಹೊಸ ಪಾತ್ರಗಳು ನಮ್ಮನ್ನು ಹೆಚ್ಚು ರೋಮಾಂಚನಗೊಳಿಸುತ್ತವೆ. ನಾವು ಹೊಂದಿದ್ದ ಆಶಯವನ್ನು ಈಕೆ ನಿಜ ಮಾಡಿದಳು!' ಎಂದು ಮಗುವಿನೊಂದಿಗೆ ಕಾಣಿಸಿಕೊಂಡ ಫೋಟೊವನ್ನು ಪೂಜಾರ ಟ್ವಿಟರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಚೇತೇಶ್ವರ್‌ ಪೂಜಾರ ಹಾಗೂ ಪೂಜಾ ದಂಪತಿಗೆ ಹಲವು ಕ್ರಿಕೆಟಿಗರು ಟ್ವಿಟ್ಟರ್‌ನಲ್ಲಿ ಶುಭ ಹಾರೈಸಿದ್ದಾರೆ.
ಭಾರತ ಟೆಸ್ಟ್‌ ತಂಡದ ಖಾಯಂ ಸದಸ್ಯ ಎನಿಸಿಕೊಂಡಿರುವ ಚೇತೇಶ್ವರ್‌ ಪೂಜಾರ ಅವರು 2018ರ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಹರಾಜಿನಲ್ಲಿ ಖರೀದಿಯಾಗದೇ ಉಳಿದಿದ್ದಾರೆ.

ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪೂಜಾರ ಪ್ರತಿನಿಧಿಸುವ ಸೌರಾಷ್ಟ್ರ ತಂಡ ಗುರುವಾರ ಬರೋಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

Story first published: Friday, February 23, 2018, 17:44 [IST]
Other articles published on Feb 23, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ