ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಏಕದಿನ ಕ್ರಿಕೆಟ್ ನಲ್ಲೀಗ ಧೋನಿಗಿಂತ ಜಾಸ್ ಬಟ್ಲರ್ ಉತ್ತಮ ಆಟಗಾರ'

ಏಕದಿನ ಕ್ರಿಕೆಟ್ ನಲ್ಲೀಗ ಧೋನಿಗಿಂತ ಜಾಸ್ ಬಟ್ಲರ್ ಉತ್ತಮ ಆಟಗಾರನಂತೆ | Oneindia Kannada
Currently, Buttler is better than Dhoni in white-ball cricket: Paine

ಮ್ಯಾಂಚೆಸ್ಟರ್, ಜೂ. 25: ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರು ಉತ್ತಮ ವಿಕೆಟ್ ಕೀಪರ್ ಆಗಿ, ಬ್ಯಾಟ್ಸ್ಮನ್ ಆಗಿ ಏಕದಿನ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ಕ್ಯಾಪ್ಟನ್ ಟಿಮ್ ಪೇನ್ ಪ್ರಕಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಸ್ಥಾನವನ್ನು ಇಂಗ್ಲೆಂಡ್ ನ ಜಾಸ್ ಬಟ್ಲರ್ ಆವರಿಸಿಕೊಂಡಿದ್ದಾರಂತೆ.

ವಿಶ್ವಕಪ್ ಎಂಬ ರೋಮಾಂಚನ: 35 ವರ್ಷದ ಹಿಂದಿನ ಸಂಭ್ರಮದ ಮೆಲುಕುವಿಶ್ವಕಪ್ ಎಂಬ ರೋಮಾಂಚನ: 35 ವರ್ಷದ ಹಿಂದಿನ ಸಂಭ್ರಮದ ಮೆಲುಕು

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 5-0ಯಿಂದ ಸರಣಿ ವೈಟ್ ವಾಷ್ ಗೊಳಿಸಿದ ಬಳಿಕ ಪೇನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಬಟ್ಲರ್ ಬಗ್ಗೆ ಮಾತನಾಡುತ್ತ ಸ್ವತಃ ಕೀಪರ್-ಬ್ಯಾಟ್ಸ್ಮನ್ ಆಗಿರುವ ಪೇನ್, 'ಬಟ್ಲರ್ ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರೀಗ ತುಂಬಾ ಉತ್ತಮ ಸ್ಥಿತಿಯಲ್ಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅವರು ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್-ಬ್ಯಾಟ್ಮನ್ ಎನಿಸಿಕೊಳ್ಳುವುದರಲ್ಲಿದ್ದಾರೆ' ಎಂದಿದ್ದಾರೆ.

ಕಪಿಲ್ ಡೇವಿಲ್ಸ್ ವಿಶ್ವಕಪ್ ಎತ್ತಿಹಿಡಿದ ಆಹಾ! ಎಂಥಾ ಆ ಕ್ಷಣ!ಕಪಿಲ್ ಡೇವಿಲ್ಸ್ ವಿಶ್ವಕಪ್ ಎತ್ತಿಹಿಡಿದ ಆಹಾ! ಎಂಥಾ ಆ ಕ್ಷಣ!

'ಈ ಕುರಿತು ಬಟ್ಲರ್ ಗೆ ಅನೇಕ ಮಂದಿ ಸವಾಲೆಸೆಯಲೂಬಹುದೇನೋ ನನಗೆ ಗೊತ್ತಿಲ್ಲ. ಎಂಎಸ್ ಧೋನಿ ನಿಜಕ್ಕೂ ಉತ್ತಮ ಆಟಗಾರರೆ. ಆದರೆ ಈಗಿನ ಸ್ಥಿತಿಯಲ್ಲಿ ಜಾಸ್ ಅವರು ಅವರ ಶಕ್ತಿಯ ಉನ್ನತ ಸ್ಥಿತಿಯಲ್ಲಿದ್ದಾರೆ' ಎಂದು ಟಿಮ್ ಹೇಳಿದರು.

ಬಟ್ಲರ್ ಅವರು ಇಂಗ್ಲೆಂಡ್-ಆಸ್ಟ್ರೇಲಿಯಾ ಏಕದಿನ ಸರಣಿಯ ಮೂರು ಇನ್ನಿಗ್ಸ್ ಗಳಲ್ಲಿ ಅಜೇಯ 91, 54, 110 ರನ್ ನೊಂದಿಗೆ ಒಟ್ಟು 275ರನ್ ಕಲೆ ಹಾಕಿದ್ದರು. ಇನ್ನೊಂದು ವಾಸ್ತವ ಸಂಗತಿಯೆಂದರೆ; ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು ಬಟ್ಲರ್ ಅವರೇ ಕಾರಣ. ಬಟ್ಲರ್ ಆ ಪಂದ್ಯದಲ್ಲಿ ಶತಕ ಸಿಡಿಸದಿದ್ದರೆ ಇಂಗ್ಲೆಂಡ್ 50 ಓವರ್ ಗಳಲ್ಲಿ 206ರನ್ ಗುರಿ ಮುಟ್ಟಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಏಕದಿನದಲ್ಲಿ ಬಟ್ಲರ್ ಅವರ ಈಗಿನ ಆಕರ್ಷಕ ಆಟವನ್ನು ಗಮನಿಸಿದ ಯಾರಾದರೂ ಅವರ ಸಾಧನೆಯನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ. ಇವುಗಳನ್ನೆಲ್ಲ ಗಮನಿಸಿಯೇ ಪೇನ್ ಅವರು ಜಾಸ್ ಅವರನ್ನು ಶ್ಲಾಘಿಸಿದ್ದಾರೆ.

Story first published: Tuesday, June 26, 2018, 13:15 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X