ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ನೀನೊಬ್ಬ ದಿಗ್ಗಜ ಕೇನ್": ಭಾವನಾತ್ಮಕ ಫೋಟೋ ಹಂಚಿಕೊಂಡ ಡೇವಿಡ್ ವಾರ್ನರ್

David Warner shares a touching photo with Kane Williamson After Australias T20 WC victory
David Warner ಅವರು RCB ಸೇರಿಕೊಂಡರೆ RCBಗೆ ಲಾಭ | Oneindia Kannada

ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದು ತಮ್ಮ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆದರೆ ಪಂದ್ಯದ ಬಳಿಕ ಈ ಇಬ್ಬರು ಶ್ರೇಷ್ಠ ಆಟಗಾರರು ಹಾಗೂ ಆಪ್ತ ಗೆಳೆಯರು ಮಾತುಕತೆಯಲ್ಲಿ ಭಾಗಿಯಾದರು. ನಂತರ ಈ ಫೋಟೋವನ್ನು ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್ ಇಬ್ಬರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸದಸ್ಯರಾಗಿ ಕಳೆದ ಕೆಲ ಆವೃತ್ತಿಗಳಲ್ಲಿ ಆಪ್ತ ಬಾಂಧವ್ಯ ಹೊಂದಿದ್ದಾರೆ. ಇಬ್ಬರು ಕೂಡ ತಮ್ಮ ದೇಶಗಳನ್ನು ಪ್ರತಿನಿಧಿಸುವಾಗಲೂ ಪರಸ್ಪರ ಗೌರವಿಸಿಕೊಳ್ಳುತ್ತಾರೆ. ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದ ಮುಕ್ತಾಯದ ಬಳಿಕ ಈ ಇಬ್ಬರು ಆಟಗಾರರು ಕೆಲ ಕಾಲ ಆತ್ಮೀಯ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರು.

ವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿ

ಈ ಸಂಭಾಷಣೆಯ ಫೊಟೋವನ್ನು ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ವಾರ್ನರ್ ನೀಡಿರುವ ಒಕ್ಕಣೆ ಇಬ್ಬರ ನಡುವೆ ಎಷ್ಟು ಆತ್ಮೀಯತೆ ಇದೆ ಎಂಬುದನ್ನು ವ್ಯಕ್ತಪಡಿಸುತ್ತದೆ. "ಮೈ ಮ್ಯಾನ್ ಯು ಲೆಜೆಂಡ್" ಎಂದು ಡೇವಿಡ್ ವಾರ್ನರ್ ಅವರನ್ನು ಉಲ್ಲೇಖಿಸಿ ಸ್ಟೋರಿ ಹಂಚಿಕೊಂಡಿದ್ದಾರೆ.

ಇನ್ನು ಫೈನಲ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಸೋತ ನ್ಯೂಜಿಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ಸವಾಲು ಸ್ವೀಕರಿಸಿತು. ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಶಾನ್ ಮಾರ್ಶ್ ಅದ್ಭುತವಾದ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಇಬ್ಬರು ಆಟಗಾರರು ಕೂಡ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಲು ಕಾರಣವಾದರು.

ದ್ರಾವಿಡ್ ಮೇಲೆ ಬಿಸಿಸಿಐ ಅಧ್ಯಕ್ಷರಲ್ಲಿ ದೂರು ನೀಡಿದ್ರಂತೆ ಆ ವ್ಯಕ್ತಿ: ಬಹಿರಂಗಡಿಸಿದ ಸೌರವ್ ಗಂಗೂಲಿದ್ರಾವಿಡ್ ಮೇಲೆ ಬಿಸಿಸಿಐ ಅಧ್ಯಕ್ಷರಲ್ಲಿ ದೂರು ನೀಡಿದ್ರಂತೆ ಆ ವ್ಯಕ್ತಿ: ಬಹಿರಂಗಡಿಸಿದ ಸೌರವ್ ಗಂಗೂಲಿ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಅದ್ಭುತ ಇನ್ನಿಂಗ್ಸ್‌ನ ಕಾರಣದಿಂದಾಗಿ ಸವಾಲಿನ ಗುರಿ ನೀಡಲು ಸಾಧ್ಯವಾಯಿತು. ಉತ್ತಮ ಆರಂಭ ಪಡೆಯುವಲ್ಲಿ ನ್ಯೂಜಿಲೆಂಡ್ ತಂಡ ವಿಫಲವಾದರು ಕೂಡ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗಪ್ಟಿಲ್ 2ನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವನ್ನು ನೀಡಿದರು. ಮಾರ್ಟಿನ್ ಗಪ್ಟಿಲ್ 28 ರನ್‌ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ನಾಯಕ ಕೇನ್ ವಿಲಿಯಮ್ಸನ್ ಅಬ್ಬರದಾಟ ಮುಂದುವರಿದಿತ್ತು. ಮೂರನೇ ವಿಕೆಟ್‌ಗೆ ಗ್ಲೆನ್ ಫಿಲಿಪ್ಸ್‌ ಜೊತೆಗೆ ಸೇರಿಕೊಂಡು 68 ರನ್‌ಗಳ ಜೊತೆಯಾವನ್ನು ಕೇನ್ ವಿಲಿಯಮ್ಸನ್ ನೀಡಿದರು. 18 ಎಸೆತಗಳಲ್ಲಿ 18 ರನ್‌ಗಳಿಸಿದ ಫಿಲಿಪ್ಸ್ ಬಳಿಕ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಫಿಲಿಪ್ಸ್ ವಿಕೆಟ್ ಕಳೆದುಕೊಂಡ ಬಳಿಕ ಅದೇ ಓವರ್‌ನಲ್ಲಿ ಕೇನ್ ವಿಲಿಯನ್ಸನ್ ಕೂಡ ಔಟಾದರು. ಆದರೆ ಅಷ್ಟರಲ್ಲಾಗಲೇ ಕೇನ್ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದ್ದರು. 48 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ ಭರ್ಜರಿ 85 ರನ್‌ ಗಳಸಿದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿ ಸೇರಿದೆ. 177.08ರ ಸ್ಟ್ರೈಕ್‌ರೇಟ್‌ನಲ್ಲಿ ಕೇನ್ ಬ್ಯಾಟ್ ಬೀಸಿದ್ದಾರೆ. ನಂತರ ನೀಶಮ್ 13 ರನ್‌ಗಳಿಸಿದರೆ ಸೈಫರ್ಟ್ 8 ರನ್‌ಗಳಿಸಿ ಅಜೇಯವಾಗಿ ಉಳಿದರು.

ನ್ಯೂಜಿಲೆಂಡ್ ತಂಡ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೋನ್ ಫಿಂಚ್ ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲಿಯೇ ಆಘಾತ ನೀಡಿತ್ತು ಕಿವೀಡ್ ಪಡೆ. ಆದರೆ ಬಳಿಕ ನ್ಯೂಜಿಲೆಂಡ್ ತಂಡಕ್ಕೆ ಹೇಳಿಕೊಳ್ಳಯುವಂತಾ ಯಶಸ್ಸು ದೊರೆಯಲೇ ಇಲ್ಲ. ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ 92 ರನ್‌ಗಳ ಜೊತೆಯಾಟವನ್ನು ನೀಡಿದರು. 38 ಎಸೆತಗಳ್ನನು ಎದುರಿಸಿದ ಡೇವಿಡ್ ವಾರ್ನರ್ 53 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಪರವಾಗಿ ಮತ್ತೊಂದು ಅದ್ಭುತವಾದ ಇನ್ನಿಂಗ್ಸ್ ನೀಡಿದರು.

Story first published: Monday, November 15, 2021, 17:37 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X