ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡ್ರೆಸಿಂಗ್ ರೂಂನಲ್ಲಿ ಧವನ್ - ಕೊಹ್ಲಿ ಫೈಟ್..?

By Kiran B Hegde

ಮೆಲ್ಬೋರ್ನ್, ಡಿ. 23: ಆಸ್ಟ್ರೇಲಿಯಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಸೋಲಲು ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಶಾಂತಿ ಕಾರಣ...

ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ನೀಡಿರುವ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 'ಅಶಾಂತಿ' ಎಂದರೆ ಏನು ಎಂದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನಿಸುತ್ತಿದ್ದರು. ಅದೇನು ಗೊತ್ತೇ..? ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಮಧ್ಯೆ ನಡೆದ ಫೈಟ್!

ಬ್ರಿಸ್ಬೇನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 4ನೇ ದಿನಕ್ಕೇ ಭಾರತ ಸೋತು ಶರಣಾಗಿತ್ತು. ಸೋಲಿಗೆ ಧೋನಿ ಕೊಟ್ಟ ಕಾರಣ "ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಶಾಂತಿ ಮತ್ತು ಸಂವಹನ ಕೊರತೆ" ಎಂಬುದು. [ಟೆಸ್ಟ್: ರವೀಂದ್ರ ಜಡೇಜ ಹೊರಕ್ಕೆ, ಪಟೇಲ್ ಒಳಕ್ಕೆ]

virat

ನಿಜವಾಗಿ ಆಗಿದ್ದೇನು..? : ಶಿಖರ್ ಧವನ್ ಗಾಯಗೊಂಡಿದ್ದ ಕಾರಣ ಆ ಜಾಗದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಆಡಲು ಸೂಚಿಸಲಾಗಿತ್ತು. ಆದರೆ, ಎದುರಾಗಿದ್ದ ಸಮಸ್ಯೆ ಎಂದರೆ ವಿರಾಟ್ ಕೊಹ್ಲಿ ಕೂಡ ಗಾಯಗೊಂಡಿದ್ದರು.

ಮೂರನೇ ದಿನದ ಅಂತ್ಯದಲ್ಲಿ ನಾಟ್ ಔಟ್ ದಾಂಡಿನಾಗಿದ್ದ ಶಿಖರ್ ಧವನ್, ಗಾಯದ ಹಿನ್ನೆಲೆಯಲ್ಲಿ ನಾಲ್ಕನೇ ದಿನ ಆಟ ಆರಂಭಿಸುವುದು ಸಾಧ್ಯವಾಗಲಿಲ್ಲ. ಶಿಖರ್ ಧವನ್ ಗಾಯಗೊಳ್ಳಲು ಕಾರಣ ಕಳಪೆ ಪಿಚ್ ಎಂದು ತಂಡದ ಆಡಳಿತ ಮಂಡಳಿ ಆರೋಪಿಸಿದೆ. [ಭಾರತದ ಸೋಲಿಗೆ 10 ಕಾರಣ ಪಟ್ಟಿ ಮಾಡಿದ ಧೋನಿ]

ಶಿಖರ್ ಮೇಲೆ ಹಲ್ಲೆಗೆ ಯತ್ನಿಸಿದರೇ ಕೊಹ್ಲಿ? : ಆದರೆ, ಈಗ 'ಹಿಂದುಸ್ತಾನ್ ಟೈಮ್ಸ್' ಪತ್ರಿಕೆಯ ವರದಿ ಹೇಳುವುದೆಂದರೆ ಗಾಯದ ಹಿನ್ನೆಲೆಯಲ್ಲಿ ಆಟವಾಡದಿರಲು ನಿರ್ಧರಿಸಿದ ಶಿಖರ್ ಮೇಲೆ ವಿರಾಟ್ ಕೊಹ್ಲಿ ಉಗ್ರಾವತಾರ ತಾಳಿದ್ದರು ಹಾಗೂ ಹಲ್ಲೆ ನಡೆಸಲು ಮುಂದಾಗಿದ್ದರು..!

ನಂತರ ಅನಿವಾರ್ಯವಾಗಿ ಮೈದಾನಕ್ಕಿಳಿದ ಕೊಯ್ಲಿ 11 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ ಮಿಟ್ಚೆಲ್ ಜಾನ್ಸನ್‌ಗೆ ವಿಕೆಟ್ ಒಪ್ಪಿಸಿ ವಾಪಸ್ ಆಗಿದ್ದರು. "ಬ್ಯಾಟಿಂಗ್‌ಗೆ ಇಳಿಯಲು ಕೊಹ್ಲಿಗೆ ಕೇವಲ 5ರಿಂದ 7 ನಿಮಿಷವಷ್ಟೇ ಸಮಯ ನೀಡಲಾಗಿತ್ತು" ಎಂದು ದೋನಿ ನಂತರ ಸಮಜಾಯಿಷಿ ನೀಡಿದ್ದರು. [ಹಸಿದ ಇಶಾಂತ್ ಶರ್ಮ, ರೈನಾಗೆ ಒನ್ ಇಂಡಿಯಾ ಸಲಹೆ]

ಇಷ್ಟೇ ಅಲ್ಲ, ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ವಾಪಸ್ ಬಂದ ನಂತರ ತಾನು 1 ರನ್‌ಗೆ ಔಟ್ ಆಗಿದ್ದಕ್ಕೆ ಧವನ್ ಕಾರಣ ಎಂದು ನಿಂದಿಸಿದ್ದರು. ಆದರೆ, ಈ ಆರೋಪಕ್ಕೆ ತಿರುಗೇಟು ನೀಡಿದ್ದ ಧವನ್, "ನಾನು ಗಾಯಗೊಂಡಿದ್ದು ಸುಳ್ಳಲ್ಲ. ದೇಶಕ್ಕಾಗಿ ಆಡಲು ಹೆಮ್ಮೆಪಡುವ ವ್ಯಕ್ತಿ ನಾನು" ಎಂದು ಹೇಳಿಕೊಂಡಿದ್ದರು. ನಂತರ ಪರಿಸ್ಥಿತಿ ತಣ್ಣಗಾಗಿಸಲು ತಂಡದ ವ್ಯವಸ್ಥಾಪಕ ರವಿ ಶಾಸ್ತ್ರಿ ಆಗಮಿಸಬೇಕಾಯಿತು.

6ನೇ ವಿಕೆಟ್ ಬಿದ್ದ ನಂತರ ಮೈದಾನಕ್ಕಿಳಿದ ಶಿಖರ್ 81 ರನ್ ಗಳಿಸಿದ್ದರು. ಇದು ತಂಡದಲ್ಲೇ ಅತ್ಯಧಿಕ ಮೊತ್ತವಾಗಿತ್ತು. ಆದರೆ, ಭಾರತ ಆಸ್ಟ್ರೇಲಿಯಾಕ್ಕೆ ಗೆಲ್ಲವು ಕೇವಲ 128 ರನ್‌ಗಳ ಗುರಿ ನೀಡಿತ್ತು. ಆಸೀಸ್ ಆಟಗಾರರು 224 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿದರು.

ವಿರಾಟ್ ಜಗಳ ಇದೇ ಮೊದಲಲ್ಲ : ವಿರಾಟ್ ಕೊಹ್ಲಿ ಸಹ ಆಟಗಾರನೊಂದಿಗೆ ಜಗಳ ತೆಗೆದಿದ್ದು ಇದೇ ಮೊದಲಲ್ಲ. ಐಪಿಎಲ್ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದ ಕೊಹ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಜೊತೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು.

ನಾಲ್ಕು ಟೆಸ್ಟ್‌ ಪಂದ್ಯಗಳ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2-0 ಯಿಂದ ಮುಂದಿದೆ. ಮೂರನೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ಡಿ. 26ರಿಂದ ಆರಂಭವಾಗಲಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X