ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇ-ನೈಟ್ ಟೆಸ್ಟ್ ಗೆ ಭಾರತ ನಿರಾಕರಿಸಿದ್ದು ನಿರಾಸೆ ತಂದಿದೆ: ಇಯಾನ್

Disappointing that India refused to play D/N Test: Ian Chappell

ನವದೆಹಲಿ, ಮೇ 13: ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದ ಡೇ-ನೈಟ್ ಟೆಸ್ಟ್ ಗೆ ಭಾರತ ನಿರಾಕರಿಸಿದ್ದು ಬೇಸರ ತಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಹೇಳಿದ್ದಾರೆ.

'ಬಿಸಿಸಿಐ ಈ ನಿರ್ಧಾರ ನಿಜಕ್ಕೂ ತುಂಬಾ ನಿರಾಸೆ ತಂದಿದೆ. ಅಡಿಲೇಡ್ ಸ್ಥಳವು ಡೇ-ನೈಟ್ ಟೆಸ್ಟ್ ನ ಅನಧಿಕೃತ ತವರಾಗಿದ್ದು, ಬಲಾಡ್ಯ ಭಾರತ ತಂಡ ಟೆಸ್ಟ್ ನಲ್ಲಿ ಪಾಲ್ಗೊಳ್ಳುವುದಾಗಿ ನಿರೀಕ್ಷಿಸಲಾಗಿತ್ತು' ಎಂದು ಇಯಾನ್ ತಿಳಿಸಿದ್ದಾರೆ.

'ಬಿಸಿಸಿಐ ಏನೇ ಕಾರಣಗಳನ್ನು ಹೇಳಲಿ; ಉದ್ದೇಶಿತ ಈ ಟೆಸ್ಟ್ ಪಂದ್ಯಾಟದಲ್ಲಿ ಭಾರತ ಪಾಲ್ಗೊಳ್ಳುತ್ತಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲ ಈ ಟೆಸ್ಟ್ ನಲ್ಲಿ ದುರ್ಬಲ ಆಸ್ಟ್ರೇಲಿಯಾ ತಂಡದೆದುರು ಗೆದ್ದು ಬೀಗಲು ಭಾರತಕ್ಕೆ ಒಂದು ಅವಕಾಶವಿತ್ತು' ಎಂದು ಚಾಪೆಲ್ ಹೇಳಿದರು.

ಆಸ್ಟ್ರೇಲಿಯಾ ತಂಡದಲ್ಲಿ ಪ್ರಬಲ ಬ್ಯಾಟ್ಸ್ಮನ್ ಗಳಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ ತವರಿನಲ್ಲಿ ನಡೆಯಲಿದ್ದ ಈ ಸೀರೀಸ್ ನಿಂದ ಹೊರಗುಳಿದಿರುವುರಿಂದ ಆಸ್ಟ್ರೇಲಿಯಾ ದುರ್ಬಲ ತಂಡವಾಗಿದೆ ಎಂಬ ಧ್ವನಿಯಲ್ಲಿ ಚಾಪೆಲ್ ಮಾತನಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರರು ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡಿದ್ದರು. ಸ್ಮಿತ್, ವಾರ್ನರ್ ಒಂದು ವರ್ಷ ಮತ್ತು ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧಕ್ಕೊಳಗಾಗಿರುವುದರಿಂದ ಡೇ-ನೈಟ್ ಟೆಸ್ಟ್ ನಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಿಲ್ಲ.

ಈ ವರ್ಷಾಂತ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ತವರಿನಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಸಲು ಉದ್ದೇಶಿಸಿತ್ತು. ಈ ಪಂದ್ಯಾಟಕ್ಕೆ ಟೀಮ್ ಇಂಡಿಯಾವನ್ನೂ ಆಹ್ವಾನಿಸಿತ್ತು. ಆದರೆ ಭಾರತದ ಕ್ರಿಕೆಟ್ ಮಂಡಳಿ ಸಾಂಪ್ರದಾಯಿಕ ಕೆಂಪು ಚೆಂಡು ಪಂದ್ಯದ ನಿಯಮ ಮೀರಿ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಾಗದು ಎಂದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಹೇಳಿತ್ತು.

Story first published: Sunday, May 13, 2018, 17:34 [IST]
Other articles published on May 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X