ಎಂ ಎಸ್‌ ಧೋನಿ ಬಗ್ಗೆ ಸಿದ್ಧವಾಗ್ತಿದೆ ಡ್ವೇಯ್ನ್ ಬ್ರಾವೋ ರಚನೆಯ ಹಾಡು

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಐಪಿಎಲ್ ಅನಿರ್ಧಾಷ್ಟವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ಎಲ್ಲಾ ಕ್ರಿಕೆಟಿಗರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಜೊತೆಗೆ ಕಾಲಕಳೆಯುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅದರಲ್ಲೂ ಧೋನಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ.

ಕ್ರಿಕೆಟ್‌ ಅಂಗಳದಲ್ಲಿ ಆಲ್‌ರೌಂಡರ್ ಆಗಿ ಮಿಂಚುತ್ತಿರುವ ವೆಸ್ಟ್‌ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಅವರ ಹವ್ಯಾಸದ ಬಗ್ಗೆ ಹೆಚ್ಚಿನ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಗೊತ್ತೇ ಇರುತ್ತದೆ. ಸಂಗೀತ ಮತ್ತು ನೃತ್ಯ ಅಂದರೆ ಬ್ರಾವೋಗೆ ಅಚ್ಚುಮೆಚ್ಚು. ತಾವೇ ರಚಿಸಿದ ಹಾಡುಗಳನ್ನು ಬಿಡುಗಡೆ ಮಾಡಿ ಸಾಕಷ್ಟು ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ ಬ್ರಾವೋ.

ಭಾರತದಲ್ಲಿ ಕ್ರಿಕೆಟ್, ಕ್ರೀಡಾಕೂಟಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆಯಾ?!ಭಾರತದಲ್ಲಿ ಕ್ರಿಕೆಟ್, ಕ್ರೀಡಾಕೂಟಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆಯಾ?!

ಈಗ ಡ್ವೇಯ್ನ್ ಬ್ರಾವೋ ತನ್ನ ಐಪಿಎಲ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹಾಡೊಂದನ್ನು ಸಿದ್ಧಪಡಿಸಿದ್ದಾರೆ. ಅದರ ಒಂದು ಸಣ್ಣ ತುಣುಕನ್ನು ಸ್ವತಃ ಬ್ರಾವೋ ಹಾಡಿ ತೋರಿಸಿದ್ದಾರೆ. ಈ ವಿಡಿಯೋವನ್ನು ಸಿಎಸ್‌ಕೆ ತಂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದೆ.

ಈ ಹಾಡಿನ ಮೇಲೆ ಈಗ ಕೆಲಸಮಾಡುತ್ತಿದ್ದೇನೆ, ಈ ಹಾಡು ನನ್ನ ಸೋದರ ಎಂಎಸ್‌ ಧೋನಿಗೆ ಅರ್ಪಿಸುತ್ತಿದ್ದೇನೆ ಎಂದು ಈ ವಿಡಿಯೋದಲ್ಲಿ ಡ್ವೇಯ್ನ್ ಬ್ರಾವೋ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಡ್ವೀಯ್ನ್ ಬ್ರಾವೋ ಹಾಡಿನ ಆರಂಭಿಕಮ ಸಾಲುಗಳನ್ನೂ ಗುನುಗಿದ್ದಾರೆ. 2016ರಲ್ಲಿ ಬಿಡುಗಡೆಯಾಗಿದ್ದ ಬ್ರಾವೋ ಹಾಡಿದ 'ಡಿಜೆ ಬ್ರಾವೋ' ಹಾಡು ಸಾಕಷ್ಟು ಸದ್ದು ಮಾಡಿತ್ತು.

ಆಲ್‌ರೌಂಡರ್ ಆಗಿರುವ ಬ್ರಾವೋ 2011 ಐಪಿಎಲ್ ಆವೃತ್ತಿಯ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ನ ಪ್ರಮುಖ ಸದಸ್ಯರಾಗಿದ್ದಾರೆ. ಈ ಬಾರಿಯ ಐಪಿಎಲ್‌ಗಾಗಿ ಚೆನ್ನೈಗೆ ಮಾರ್ಚ್‌ನಲ್ಲಿ ಆಗಮಿಸಿದ್ದ ಬ್ರಾವೋ ಅಭ್ಯಾಸ ಶಿಬಿರದಲ್ಲಿ ಒಆಲ್ಗೊಂಡಿದ್ದರು. ಆದರೆ ಬಳಿಕ ಕೊರೊನಾ ವೈರಸ್‌ನ ಕಾರಣದಿಂದ ಐಪಿಎಲ್‌ಅನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡ ಬಳಿಕ ಬ್ರಾವೋ ವಾಪಾಸಾಗಿದ್ದಾರೆ. ಸದ್ಯ ಐಪಿಎಲ್ ಅನ್ನು ಬಿಸಿಸಿಐ ಅನಿರ್ಧಿಷ್ಟಾವಧಿಗೆ ಮುಂದೂಡಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, April 22, 2020, 14:09 [IST]
Other articles published on Apr 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X