ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್ ನಲ್ಲಿ ಪ್ರಪ್ರಥಮ ಹಗಲು -ರಾತ್ರಿ ಟೆಸ್ಟ್ ಪಂದ್ಯ

By Mahesh

ಮೆಲ್ಬೋರ್ನ್, ಜೂ.30: ಕ್ರಿಕೆಟ್ ನಲ್ಲಿ ಹಲವು ಹೊಸತನವನ್ನು ತರುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈಗ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜನೆಗೆ ಮುಂದಾಗಿದೆ. ಸಾಂಪ್ರದಾಯಿಕ ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಪ್ರಪ್ರಥಮ ಟೆಸ್ಟ್ ಪಂದ್ಯವನ್ನು ನವೆಂಬರ್ ತಿಂಗಳಿನಲ್ಲಿ ನಡೆಸಲು ಸಿದ್ಧತೆಯಾಗುತ್ತಿದೆ.

ಈ ಐತಿಹಾಸಿಕ ಟೆಸ್ಟ್ ಪಂದ್ಯ ನವೆಂಬರ್ 27ರಂದು ಅಡಿಲೇಡ್ ಒವಲ್ ನಲ್ಲಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಚಾಪೆಲ್ -ಹ್ಯಾಡ್ಲಿ ಟ್ರೋಫಿ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಹಗಲು ರಾತ್ರಿ ಪಂದ್ಯವಾಗಲಿದೆ. ನಸುಗೆಂಪು(pink) ಬಣ್ಣದ ಕೂಕಾಬುರಾ ಚೆಂಡುಗಳನ್ನು ಬಳಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

Cricket Australia

ಟೆಸ್ಟ್ ಕ್ರಿಕೆಟ್ ಗೆ ಹೊಸ ಜೀವ ತುಂಬಲು ಈ ರೀತಿಯ ಪಂದ್ಯ ಆಯೋಜನೆ ಸಹಕಾರಿ. ಹಾಲಿಡೇ ಅಥವಾ ವೀಕೆಂಡ್ ನೋಡಿಕೊಂಡು ಪಂದ್ಯಗಳ ವೇಳಾಪಟ್ಟಿ ನಿಗದಿಪಡಿಸುವುದು ತುಂಬಾ ಕಷ್ಟಕರ. ವೀಕ್ ಡೇಗಳಲ್ಲಿ ಪಂದ್ಯಗಳನ್ನು ನಡೆಸಿ ಪ್ರೇಕ್ಷಕರನ್ನು ಸೆಳೆಯುವುದು ಇನ್ನೂ ಕಷ್ಟ. ಹಗಲು ರಾತ್ರಿ ಪಂದ್ಯವಾದರೆ ಅಭಿಮಾನಿಗಳಿಗೂ ಅನುಕೂಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯಕಾರಿ ಮುಖ್ಯಸ್ಥ ಜೇಮ್ಸ್ ಸದರ್ಲೆಂಡ್ ಹೇಳಿದ್ದಾರೆ.

1877ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡಲಾಯಿತು. ಅಲ್ಲಿಂದ ಇಲ್ಲಿತನಕ ಟೆಸ್ಟ್ ಕ್ರಿಕೆಟ್ ಹಲವು ನಿಯಮಗಳನ್ನು, ಸುಧಾರಣೆಗಳನ್ನು ಕಂಡಿದೆ. ಆಸ್ಟ್ರೇಲಿಯಾ ಮಂಡಳಿ ಪ್ರಸ್ತಾವನೆಗೆ ನಮ್ಮ ಪೂರ್ಣ ಸಹಕಾರವಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಕಾರ್ಯಕಾರಿ ಮುಖ್ಯಸ್ಥ ಡೇವಿಡ್ ವೈಟ್ ಪ್ರತಿಕ್ರಿಯಿಸಿದ್ದಾರೆ.

ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಇಷ್ಟಪಡುವ ಅಭಿಮಾನಿಗಳಿಗೆ ನವೆಂಬರ್ ನಲ್ಲಿ ಹೊಸ ಮಾದರಿ ಆಟವನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರದರ್ಶಿಸಲಿವೆ. ಇಲ್ಲಿತನಕ ಸರಿ ಸುಮಾರು 2,168 ಟೆಸ್ಟ್ ಪಂದ್ಯಗಳು ಆಡಲ್ಪಟ್ಟಿವೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X