ಟೀಮ್ ಇಂಡಿಯಾ ಮಾಜಿ ಆಟಗಾರ ಸದಾಶಿವ್ ರಾವ್ಜಿ ಪಾಟಿಲ್ ನಿಧನ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸದಾಶಿವ್ ರಾವ್ಜಿ ಪಾಟಿಲ್ ಅವರು ನಿಧನರಾಗಿದ್ದಾರೆ. ಒಂದು ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರತಿನಿಧಿಸಿದ್ದ ಸದಾಶಿವ್, ಕೊಲ್ಲಾಪುರ್‌ನಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ (ಸೆಪ್ಟೆಂಬರ್ 15) ಕೊನೆಯುಸಿರೆಳೆದಿದ್ದಾರೆ. 86 ವರ್ಷವಾಗಿದ್ದ ಸದಾಶಿವ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!

'ಕೊಲ್ಲಾಪುರದ ರೂಯ್ಕರ್ ಕಾಲನಿಯಲ್ಲಿರುವ ಮನೆಯಲ್ಲಿ ಮಂಗಳವಾರ ಮಲಗಿದ್ದಲ್ಲೆ ಸದಾಶಿವ್ ಸಾವನ್ನಪ್ಪಿದ್ದರು,' ಎಂದು ಕೊಲ್ಲಾಪುರ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಪದಾಧಿಕಾರಿ ರಮೇಶ್ ಕದಮ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಆಡಿದ ಏಕಮಾತ್ರ ಟೆಸ್ಟ್‌ನಲ್ಲಿ ರಾವ್ಜಿ 51 ರನ್‌ಗೆ 2 ವಿಕೆಟ್ ಮುರಿದಿದ್ದರು.

ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್

ದೇಸಿ ಕ್ರಿಕೆಟ್‌ಗೆ ಹೆಚ್ಚು ನಿರ್ಬಂಧಿಸಲ್ಪಟ್ಟಿದ್ದ ಪಾಟಿಲ್ ಅವರ ನಿಧನಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸಂತಾಪ ಸೂಚಿಸಿದೆ. 'ಮಧ್ಯಮ ವೇಗಿಯಾಗಿದ್ದ ಪಾಟಿಲ್ 1952-53ರ ಇಸವಿಯಲ್ಲಿ ಪ್ರಥಮದರ್ಜೆ ಪಾದಾರ್ಪಣೆ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಆವತ್ತು ಮಹಾರಾಷ್ಟ್ರ 167 ರನ್ ಗಳಿಸಿತ್ತು. ಎದುರಾಳಿ ಮುಂಬೈಯನ್ನು ಪಾಟಿಲ್ 112 ಕಟ್ಟಿಹಾಕಿದ್ದರು,' ಎಂದು ಬಿಸಿಸಿಐ ಹೇಳಿದೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

'ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸದಾಶಿವ್ ಅವರು 68 ರನ್‌ಗೆ ಮುಂಬೈಯ 3 ವಿಕೆಟ್‌ಗಳನ್ನು ಕೆಡವಿದ್ದರು. ಹೀಗಾಗಿ ಮಹಾರಾಷ್ಟ್ರ ತಂಡ 19 ರನ್ ಜಯ ಗಳಿಸಿತು. ಮತ್ತೆ ಪಾಟಿಲ್‌ಗೆ ಭಾರತದ ಟೆಸ್ಟ್ ಕ್ಯಾಪ್ (ನಂ.79) ಲಭಿಸಿತು. 1955ರಲ್ಲಿ ಪಾಲಿ ಉಮ್ರಿಗರ್ ನಾಯಕತ್ವದಲ್ಲಿ ಪಾಟಿಲ್ ಅವರು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಪಾದಾರ್ಪಣೆ ಪಂದ್ಯ ಆಡಿದ್ದರು,' ಎಂದು ಬಿಸಿಸಿಐ ಸ್ಮರಿಸಿಕೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, September 15, 2020, 21:37 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X