ರಾಜ್ ಕೋಟ್ ಗೆ ಗ್ಯಾರಿ, ಪುಣೆಗೆ ಫ್ಲೆಮಿಂಗ್ ಕೋಚ್?

Posted By:

ನವದೆಹಲಿ, ಡಿ.29: ಟೀಂ ಇಂಡಿಯಾದ ಯಶಸ್ವಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಮತ್ತೆ ಐಪಿಎಲ್‌ಗೆ ಮರಳುವ ಸುದ್ದಿ ಬಂದಿದೆ. ಹೊಚ್ಚ ಹೊಸ ರಾಜ್‌ಕೋಟ್ ಫ್ರಾಂಚೈಸಿ ದಕ್ಷಿಣ ಆಫ್ರಿಕದ ಕರ್ಸ್ಟನ್‌ರೊಂದಿಗೆ ಕೋಚಿಂಗ್ ಹುದ್ದೆಗಾಗಿ ಮಾತುಕತೆ ನಡೆಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2016 ಹಾಗೂ 2017ರ ಆವೃತ್ತಿಯಲ್ಲಿ ಅಮಾನತಿನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಬದಲಿಗೆ ರಾಜ್‌ಕೋಟ್ ಹಾಗೂ ಪುಣೆ ತಂಡಗಳು ಐಪಿಎಲ್‌ನಲ್ಲಿ ಆಡಲಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜಿನ ವೇಳೆ ರಾಜ್‌ಕೋಟ್ ಫ್ರಾಂಚೈಸಿ ಹೊಸ ಕೋಚ್‌ ಹೆಸರು ಪ್ರಕಟಿಸಲಿದೆ.

Gary Kirsten to make IPL comeback as Rajkot coach

ಭಾರತ ಹಾಗೂ ದಕ್ಷಿಣ ಆಫ್ರಿಕ ತಂಡಗಳ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ಐಪಿಎಲ್‌ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಎರಡು ವರ್ಷಗಳ ಕಾಲ ಕೋಚ್ ಆಗಿದ್ದ ಅನುಭವ ಕರ್ಸ್ಟನ್ ಅವರಿಗಿದೆ.

ಗುರು ಗ್ಯಾರಿ ಮಾರ್ಗದರ್ಶನದಲ್ಲಿ 2011ರಲ್ಲಿ ಭಾರತ ವಿಶ್ವಕಪ್‌ ಗೆದ್ದ ಸಾಧನೆ ಮಾಡಿತ್ತು. ದಕ್ಷಿಣ ಆಫ್ರಿಕಾ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಐಪಿಎಲ್ ಡ್ರಾಫ್ಟ್ ಪ್ರಕ್ರಿಯೆ ವೇಳೆ ರಾಜ್‌ಕೋಟ್ ತಂಡಕ್ಕೆ ಐವರು ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ, ಬ್ರೆಂಡನ್ ಮೆಕಲಮ್, ಜೇಮ್ಸ್ ಫಾಕ್ನರ್ ಹಾಗೂ ಡ್ವೇಯ್ನ್ ಬ್ರಾವೊ ಅವರುಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸದ್ಯಕ್ಕೆ ಎಲ್ಲರ ಕರ್ಸ್ಟನ್ ತಂಡದ ಕೋಚ್ ಆಗಬೇಕೆಂದು ಫ್ರಾಂಚೈಸಿಗೆ ಒತ್ತಾಯಿಸಿದ್ದಾರೆ ಎಂಬ ಸುದ್ದಿಯಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಆಗಿದ್ದ ನ್ಯೂಜಿಲೆಂಡ್ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರು ಪುಣೆ ತಂಡದ ಕೋಚ್ ಆಗುವ ಸಾಧ್ಯತೆಯಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 29, 2015, 14:11 [IST]
Other articles published on Dec 29, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ