ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಟಾಪ್ ಫೀಲ್ಡರ್‌ಗಳ ಹೆಸರಿಸಿದ ಮಾಜಿ ಆಟಗಾರ ಹರ್ಷ ಭೋಗ್ಲೆ

Harsha Bhogle named his Indias top best fielders

ನವದೆಹಲಿ, ಮಾರ್ಚ್ 25: ಭಾರತದ ಮಾಜಿ ಆಟಗಾರ ಹರ್ಷ ಭೋಗ್ಲೆ ಟೀಮ್ ಇಂಡಿಯಾದ ಟಾಪ್‌ ಫೀಲ್ಡರ್‌ಗಳನ್ನು ಹೆಸರಿಸಿದ್ದಾರೆ. ಇದರಲ್ಲಿ ಸದ್ಯ ಭಾರತ ತಂಡದಲ್ಲಿರುವ ಆಟಗಾರರೆಂದರೆ ರವೀಂದ್ರ ಜಡೇಜಾ ಒಬ್ಬರೇ. ಉಳಿದವರೆಲ್ಲ ಹಳೆ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿದ್ದ ಆಟಗಾರರು. ಇದರಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಟಾಪ್ ಮೂರರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಟಾಪ್ 13ನಲ್ಲಿ ಸುರೇಶ್ ರೈನಾ, ಯುವರಾಜ್ ಸಿಂಗ್ ಕೂಡ ಇದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!

ಮಾರ್ಚ್ 25ರಂದು ಹರ್ಷ ಭೋಗ್ಲೆ ತನ್ನ ನೆಚ್ಚಿನ ಭಾರತದ ಫೀಲ್ಡರ್‌ಗಳನ್ನು ಹೆಸರಿಸಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ, 'ಗುಡ್‌ ಮಾರ್ನಿಂಗ್, ನನ್ನ ಪ್ರಕಾರ ಭಾರತದ ಮೂವರು ಬೆಸ್ಟ್ ಫೀಲ್ಡರ್‌ಗಳು ಇವರು' ಎಂದು ಬರೆದುಕೊಂಡಿದ್ದಾರೆ.

ನಾಯಕತ್ವ ತ್ಯಜಿಸಿದ್ದ ಬಗ್ಗೆ ಆಸಿಸ್ ಮಾಜಿ ನಾಯಕ ಪಾಂಟಿಂಗ್ ಮಾತುನಾಯಕತ್ವ ತ್ಯಜಿಸಿದ್ದ ಬಗ್ಗೆ ಆಸಿಸ್ ಮಾಜಿ ನಾಯಕ ಪಾಂಟಿಂಗ್ ಮಾತು

ಟ್ವೀಟ್‌ನಲ್ಲಿ ಮೊದಲು ಟಾಪ್ ತ್ರೀ ಫೀಲ್ಡರ್‌ಗಳನ್ನು ಹೆಸರಿಸಿರುವ ಭೋಗ್ಲೆ, ಮತ್ತೆ ಅದರ ಕೆಳಗೆ ಇನ್ನುಳಿದ ಹತ್ತು ಮಂದಿಯನ್ನು ಹೆಸರಿಸಿದ್ದಾರೆ.

ಏಕನಾಥ್ ಸೋಲ್ಕರ್ ಮೊದಲಿಗ

ಏಕನಾಥ್ ಸೋಲ್ಕರ್ ಮೊದಲಿಗ

ಹರ್ಷ ಭೋಗ್ಲೆಯ ನೆಚ್ಚಿನ ಮೂವರು ಬೆಸ್ಟ್ ಫೀಲ್ಡರ್‌ಗಳಲ್ಲಿ 2005ರಲ್ಲಿ ಸಾವನ್ನಪ್ಪಿರುವ ಏಕನಾಥ್ ಸೋಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸೋಲ್ಕರ್ ಭಾರತದ ಪರ 27 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನಾಡಿದ್ದರು. ಇನ್ನು ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿ ಕ್ರಮವಾಗಿ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಮತ್ತು ರವೀಂದ್ರ ಜಡೇಜಾ ಇದ್ದಾರೆ.

5ರಲ್ಲಿ ಟೈಗರ್ ಪಟೌಡಿ

5ರಲ್ಲಿ ಟೈಗರ್ ಪಟೌಡಿ

ಭೋಗ್ಲೆ ನೆಚ್ಚಿನ ಬೆಸ್ಟ್ ಫೀಲ್ಡರ್‌ಗಳಲ್ಲಿ 4ನೇ ಸ್ಥಾನದಲ್ಲಿ ಮಾಜಿ ಕ್ರಿಕೆಟಿಗ ಹೇಮು ಅಧಿಕಾರಿ (21 ಟೆಸ್ಟ್ ಪಂದ್ಯ) ಮತ್ತು 5ನೇ ಸ್ಥಾನದಲ್ಲಿ ದಂತಕತೆ ಮನ್ಸೂರ್ ಅಲಿ ಖಾನ್ ಪಟೌಡಿ (46 ಟೆಸ್ಟ್ ಪಂದ್ಯಗಳು, 310 ಪ್ರಥಮದರ್ಜೆ ಪಂದ್ಯಗಳು), 6ನೇ ಸ್ಥಾನದಲ್ಲಿ ಮಾಜಿ ಕ್ರಿಕೆಟಿಗ ರುಸಿ ಸುರ್ತಿ (26 ಟೆಸ್ಟ್ ಪಂದ್ಯಗಳು, 160 ಪ್ರಥಮದರ್ಜೆ) ಇದ್ದಾರೆ.

ಕಿರ್ಮಾನಿಗೂ ಸ್ಥಾನ

ಕಿರ್ಮಾನಿಗೂ ಸ್ಥಾನ

ಹರ್ಷ ಆಯ್ಕೆಯ ಬೆಸ್ಟ್ ಫೀಲ್ಡರ್‌ಗಳಲ್ಲಿ 7ನೇ ಸ್ಥಾನದಲ್ಲಿ ಬೆಸ್ಟ್ ಕೀಪರ್ ಎನಿಸಿಕೊಂಡಿದ್ದ ಸೈಯ್ಯದ್ ಕಿರ್ಮಾನಿ (88 ಟೆಸ್ಟ್ ಪಂದ್ಯಗಳು, 49 ಏಕದಿನ ಪಂದ್ಯಗಳು), 8ನೇ ಸ್ಥಾನದಲ್ಲಿ ಅಬಿದ್ ಅಲಿ, 9ರಲ್ಲಿ ಬ್ರಿಜೇಶ್ ಪಟೇಲ್, 10ರಲ್ಲಿ ಅಜಯ್ ಜಡೇಜಾ ಇದ್ದಾರೆ.

ಯುವರಾಜ್, ಕೈಫ್

ಯುವರಾಜ್, ಕೈಫ್

ಹರ್ಷ ಭೋಗ್ಲೆ ಹೆಸರಿಸಿರುವ ಈ ಹತ್ತು ಟಾಪ್ ಫೀಲ್ಡರ್‌ಗಳು ಆಯಾ ಕಾಲಕ್ಕನುಗುಣವಾಗಿ ಮಿಂಚಿದವರು ಅನ್ನೋದು ಅರಿವಾಗುತ್ತದೆ. ಬೋಗ್ಲೆಯ ಬೆಸ್ಟ್ ಫೀಲ್ಡರ್ ಪಟ್ಟಿಯಲ್ಲಿ 11ನೇ ಹೆಸರಾಗಿ ಸುರೇಶ್ ರೈನಾ, 12ರಲ್ಲಿ ಯುವರಾಜ್ ಸಿಂಗ್ ಮತ್ತು ಕೊನೆಯ ಹೆಸರಾಗಿ ಭಾರತದ ಜಾಂಟಿ ರೋಡ್ಸ್‌ ಎಂದು ಕರೆಯಲಾಗುತ್ತಿದ್ದ ಮೊಹಮ್ಮದ್ ಕೈಫ್ ಕಾಣಿಸಿಕೊಂಡಿದ್ದಾರೆ.

Story first published: Wednesday, March 25, 2020, 14:08 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X