ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಶೀಮ್‌ ಆಮ್ಲಾ ನಿದ್ರೆ ಕೆಡಿಸಿದ್ದ ಬೌಲರ್‌ ಇವರೇ ಎಂದು ನಂಬೋದು ಕಷ್ಟ!

Hashim Amla picks the best bowler 2019

ಕೇಪ್‌ ಟೌನ್‌, ಆಗಸ್ಟ್‌ 09: ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಹಶೀಮ್‌ ಆಮ್ಲಾ, ಕಿಂಚಿತ್ತೂ ಸುಳಿವು ನೀಡದೆ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿಬಿಟ್ಟರು.

36 ವರ್ಷದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ನಿವೃತ್ತಿ ನಂತರ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಅಪಾಯಕಾರಿ ವೇಗದ ಬೌಲರ್‌ ಯಾರೆಂಬುದನ್ನು ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಆಮ್ಲಾ ಹೆಸರಿಸಿದ ಬೌಲರ್‌ ಯಾರೆಂದು ಹೇಳಿದರೆ ನಿಜಕ್ಕೂ ನಂಬುವುದು ಕಷ್ಟವಾಗುತ್ತದೆ.

ಗ್ಲೋಬಲ್‌ ಟಿ20: ನಾಕ್‌ಔಟ್‌ ಪಂದ್ಯದಲ್ಲಿ ಎದುರಾಳಿಗೆ ಟೋಪಿ ಹಾಕಿದ ಪೊಲಾರ್ಡ್‌!ಗ್ಲೋಬಲ್‌ ಟಿ20: ನಾಕ್‌ಔಟ್‌ ಪಂದ್ಯದಲ್ಲಿ ಎದುರಾಳಿಗೆ ಟೋಪಿ ಹಾಕಿದ ಪೊಲಾರ್ಡ್‌!

ದಕ್ಷಿಣ ಆಫ್ರಿಕಾ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 349 ಪಂದ್ಯಗಳನ್ನಾಡಿ 18672 ರನ್‌ಗಳನ್ನು ಗಳಿಸಿರುವ ಆಮ್ಲಾ, 55 ಶತಕಗಳು ಮತ್ತು 88 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಹರಿಣ ಪಡೆಯ ಪರ ತ್ರಿಶತಕ ದಾಖಲಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಅವರದ್ದು.

ಹೀಗಿರುವಾಗ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಮೊಹಮ್ಮದ್‌ ಆಸಿಫ್‌ ಎದುರು ಬ್ಯಾಟಿಂಗ್‌ ಮಾಡುವುದು ಕಷ್ಟ ಎಂದು ಆಮ್ಲಾ ಹೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಅಷ್ಟೇ ಅಲ್ಲದೆ ಆಸಿಫ್‌ ಎದುರು ಬ್ಯಾಟಿಂಗ್‌ ಯಾಕೆ ಕಷ್ಟ ಎಂಬುದನ್ನೂ ಆಮ್ಲಾ ವಿವರಿಸಿದ್ದಾರೆ.

ಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊ

"ಮೊಹಮ್ಮದ್‌ ಆಸಿಫ್ ನಾನು ಎದುರಿಸಿದ ಶ್ರೇಷ್ಠ ವೇಗದ ಬೌಲರ್‌. ಅವರು ಮ್ಯಾಚ್‌ ಫಿಕ್ಸಿಂಗ್‌ ಮೂಲಕ ನಿಷೇಧಕ್ಕೊಳಗಾದರು ಎಂಬುದು ನನಗೆ ತಿಳಿದಿದೆ. ಆದರೂ, ನಾನು ಎದುರಿಸಿದ ಅಪಾಯಕಾರಿ ವೇಗಿ ಅವರೇ. ಅವರಲ್ಲಿ ವೇಗ ಹೇಳಿಕೊಳ್ಳುವಷ್ಟೇನು ಇರಲಿಲ್ಲ. ಗಂಟೆಗೆ 135 ಕಿ.ಮೀ ವೇಗದಲ್ಲಷ್ಟೇ ಬೌಲಿಂಗ್‌ ಮಾಡುತ್ತಿದ್ದರು. ಆದರೆ, ಕಷ್ಟವಾಗುತ್ತಿದ್ದದ್ದು ಅವರ ನಿಖರವಾದ ಎಸೆತಗಳು. ನಿಖರತೆ ಮೂಲಕವೇ ನಿಮ್ಮ ರಕ್ಷಣಾತ್ಮಕ ಬ್ಯಾಟಿಂಗ್‌ ಕಲೆಗೆ ಸವಾಲೊಡ್ಡುತ್ತಿದ್ದರು. ಹಲವು ವರ್ಷಗಳ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ವಿವಿಧ ತಂಡಗಳ ಹಲವು ಬ್ಯಾಟ್ಸ್‌ಮನ್‌ಗಳ ಪರಿಚಯವಾಗಿದೆ. ತಮಾಶೆ ವಿಚಾರವೆಂದರೆ ಆಸಿಫ್‌ ಕುರಿತಾಗಿ ಪ್ರತಿಯೊಬ್ಬರ ಅಭಿಪ್ರಾಯವೂ ಇದೇ ಆಗಿದೆ," ಎಂದು ತಮ್ಮ ನಿದ್ರೆ ಕೆಡಿಸಿದ್ದ ಬೌಲರ್‌ ಬಗ್ಗೆ ಆಮ್ಲಾ ಮಾತನಾಡಿದ್ದಾರೆ.

ಮಳೆಗೆ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?ಮಳೆಗೆ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

2010ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಸರಣಿಯ ಪಂದ್ಯವೊಂದರಲ್ಲಿ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಮೊಹಮ್ಮದ್‌ ಆಸಿಫ್‌ ಅಂದಿನ ಪಾಕ್‌ ತಂಡದ ನಾಯಕ ಸಲ್ಮಾನ್‌ ಬಟ್‌ ಅವರೊಟ್ಟಿಗೆ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

ಆಮ್ಲಾ. ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಹಲವು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ 2000, 3000, 4000, 5000, 6000 ಮತ್ತು 7000 ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆ ಅವರ ಹೆಸರಿನಲ್ಲಿದೆ.

ಟೆಸ್ಟ್‌ ಕ್ರಿಕೆಟ್‌ ಸಾಧನೆ

ಟೆಸ್ಟ್‌ ಕ್ರಿಕೆಟ್‌ ಸಾಧನೆ

124 ಪಂದ್ಯ,
9282 ರನ್,
311* ಗರಿಷ್ಠ,
46.64 ಸರಾಸರಿ,
49.97 ಸ್ಟ್ರೈಕ್‌ರೇಟ್‌,
28 ಶತಕ,
41 ಅರ್ಧಶತಕ

ಏಕದಿನ ಕ್ರಿಕೆಟ್‌ ಸಾಧನೆ

ಏಕದಿನ ಕ್ರಿಕೆಟ್‌ ಸಾಧನೆ

181 ಪಂದ್ಯ
8113 ರನ್‌
159 ಗರಿಷ್ಠ
49.46 ಸರಾಸರಿ
88.39 ಸ್ಟ್ರೈಕ್‌ರೇಟ್‌
27 ಶತಕ
39 ಅರ್ಧಶತಕ

ಅಂತಾರಾಷ್ಟ್ರೀಯ ಟಿ20

ಅಂತಾರಾಷ್ಟ್ರೀಯ ಟಿ20

44 ಪಂದ್ಯ
1277 ರನ್‌
97* ಗರಿಷ್ಠ
33.60 ಸರಾಸರಿ
132.05 ಸ್ಟ್ರೈಕ್‌ ರೇಟ್‌
08 ಅರ್ಧಶತಕ

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌

237 ಪಂದ್ಯ
17765 ರನ್‌
311* ಗರಿಷ್ಠ
48.67 ಸರಾಸರಿ
52 ಶತಕ
88 ಅರ್ಧಶತಕ
185 ಕ್ಯಾಚ್‌ಗಳು

Story first published: Tuesday, August 13, 2019, 14:37 [IST]
Other articles published on Aug 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X