ದೀಪ್ತಿ ಶರ್ಮಾ ಹೆಸರು ಬಳಸಿದ ಮಿಚೆಲ್ ಸ್ಟಾರ್ಕ್‌: ಆಸಿಸ್ ವೇಗಿ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಕಿಡಿ

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ವಿರುದ್ಧ ಭಾರತೀಯ ಅಭಿಮಾನಿಗಳು ಏಕಾಏಕಿ ಮುಗಿಬಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮಿಚೆಲ್ ಸ್ಟಾರ್ಕ್‌ ಜೋಸ್ ಬಟ್ಲರ್ ಆತುರದಿಂದ ಕ್ರೀಸ್‌ ತೊರೆಯುವುದಕ್ಕೆ ಸ್ಟಾರ್ಕ್‌ ದೀಪ್ತಿ ಶರ್ಮಾ ಹೆಸರು ಬಳಸಿದ್ರು.

ಇಂಗ್ಲೆಂಡ್ ತಂಡವು 3 ಪಂದ್ಯಗಳ ಟಿ20ಐ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಅತ್ಯಂತ ಹೀನಾಯ ಸೋಲು ಕಂಡಿತ್ತು.

ಆದರೆ, ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಸ್ಟಾರ್ಕ್ ಅನಗತ್ಯವಾಗಿ ಭಾರತವನ್ನು ಕೆರಳಿಸಿ ವಿವಾದ ಹುಟ್ಟು ಹಾಕಿದ್ದಾರೆ. 3ನೇ ಟಿ20ಯಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಬಟ್ಲರ್ ಫೌಲ್ ಆದರು. 5ನೇ ಓವರ್‌ನಲ್ಲಿ, ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡುವ ಮೊದಲು, ಬ್ಯಾಟ್‌ನ ಇನ್ನೊಂದು ತುದಿಯಲ್ಲಿ ಜೋಸ್ ಬಟ್ಲರ್ ಬಿಳಿ ಗೆರೆಯನ್ನು ಬೇಗನೆ ದಾಟಿದ್ರು.

ನಾನು ದೀಪ್ತಿ ಶರ್ಮಾ ಅಲ್ಲ ಎಂದ ಮಿಚೆಲ್ ಸ್ಟಾರ್ಕ್!

ನಾನು ದೀಪ್ತಿ ಶರ್ಮಾ ಅಲ್ಲ ಎಂದ ಮಿಚೆಲ್ ಸ್ಟಾರ್ಕ್!

ಬಟ್ಲರ್ ಪದೇ ಪದೇ ನಿಯಮವನ್ನು ಮುರಿಯುವುದರಿಂದ ಸಿಟ್ಟಾದ ಸ್ಟಾರ್ಕ್ ಮಂಕಡಿಂಗ್ ಶೈಲಿಯಲ್ಲಿ ರನ್ ಔಟ್ ಆಗುತ್ತಾರೆ ಎಂದು ವಾರ್ನಿಂಗ್ ಕೊಟ್ಟರು. ಆಗ ಅವರು ಬಟ್ಲರ್‌ಗೆ ಎಚ್ಚರಿಕೆ ನೀಡುವ ವೇಳೆಯಲ್ಲಿ ನಾನು ಮಂಕಡ್ ಮಾಡಲು ದೀಪ್ತಿ ಶರ್ಮಾ ಅಲ್ಲ. ಆದರೆ ನಾನೂ ಮಾಡಬಲ್ಲೆ, ಹೀಗೆ ಮಾಡಿದರೆ ನಾನೂ ಮಾಡುತ್ತೇನೆ" ಎಂದು ಎಚ್ಚರಿಸಿದರು.

ಇದರ ಸ್ಪಷ್ಟ ಸ್ಟಂಪ್ ಮೈಕ್ ಆಡಿಯೋ ಬಿಡುಗಡೆಯಾಗಿದ್ದು, ಭಾರತೀಯ ಅಭಿಮಾನಿಗಳನ್ನ ಕೆರಳಿಸಿತು. ಇಷ್ಟವಿಲ್ಲದಿದ್ದರೆ ವಾರ್ನಿಂಗ್ ಕೊಟ್ಟು ನಿಲ್ಲಿಸಬೇಕಿತ್ತು. ಆದರೆ ಭಾರತದ ಆಟಗಾರ್ತಿ ದೀಪ್ತಿ ಶರ್ಮಾ ಬಗ್ಗೆ ಅನಗತ್ಯವಾಗಿ ಮಾತನಾಡಿರುವುದು ತಪ್ಪು ಎಂದು ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಆಟಗಾರ್ತಿ ದೀಪ್ತಿ ಶರ್ಮಾ ಮಂಕಡಿಂಗ್ ಸ್ಟೈಲ್ ನಲ್ಲಿ ರನೌಟ್ ಮಾಡಿದ್ದರು. ಮಾಜಿ ಇಂಗ್ಲೆಂಡ್ ಆಟಗಾರರು ಮತ್ತು ಮಾಧ್ಯಮಗಳು ಸಹ ಅವರ ವಿರುದ್ಧ ಟೀಕಿಸಿದರು. ಆದರೆ ಇದು ಐಸಿಸಿ ನಿಯಮದಡಿ ಇದೆ ಎಂದು ಅಭಿಮಾನಿಗಳೂ ಪ್ರತಿಕ್ರಿಯಿಸಿರುವುದು ಗಮನಾರ್ಹ.

Ind vs Aus ಅಭ್ಯಾಸ ಪಂದ್ಯ: ಭಾರತ ವಿರುದ್ಧ ಸ್ಟಾರ್ ಆಟಗಾರರನ್ನ ಆಸ್ಟ್ರೇಲಿಯಾ ಕಣಕ್ಕಿಳಿಸುವುದು ಕಷ್ಟಸಾಧ್ಯ!

ಮಿಚೆಲ್ ಸ್ಟಾರ್ಕ್ ವಿರುದ್ಧ ಹೇಮಾಂಗ್ ಬದಾನಿ ಕಿಡಿ

ಭಾರತದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಟ್ವಿಟರ್‌ನಲ್ಲಿ ಸ್ಟಾರ್ಕ್‌ ವಿರುದ್ಧ ಕಿಡಿ ಕಾರಿದ್ದಾರೆ. "ಸ್ಟಾರ್ಕ್ ದೊಡ್ಡವನಾಗು. ಅದು ನಿಮ್ಮಿಂದ ನಿಜವಾಗಿಯೂ ಕಳಪೆಯಾಗಿದೆ. ದೀಪ್ತಿ ಮಾಡಿದ್ದು ಆಟದ ನಿಯಮದೊಳಗೆ ಚೆನ್ನಾಗಿತ್ತು. ನೀವು ಕೇವಲ ಸ್ಟ್ರೈಕರ್ ಅಲ್ಲದವರನ್ನು ಎಚ್ಚರಿಸಲು ಬಯಸಿದ್ರೆ ಮತ್ತು ಅವನನ್ನು ಔಟ್ ಮಾಡದಿದ್ದರೆ ಅದು ಒಳ್ಳೆಯದು. ನಿಮ್ಮ ನಿರ್ಧಾರವನ್ನು ಮಾಡುವುದು ಉತ್ತಮ . ಆದರೆ ನೀವು ದೀಪ್ತಿಯನ್ನು ಇದಕ್ಕೆ ಕರೆತರುವುದು ಕ್ರಿಕೆಟ್ ಜಗತ್ತು ನಿಮ್ಮಿಂದ ನಿರೀಕ್ಷಿಸುವುದಿಲ್ಲ, "ಎಂದು ಅವರು ಹೇಳಿದರು.

ಟಿ20 ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ 3 ವೈಯಕ್ತಿಕ ಗರಿಷ್ಠ ರನ್ ಗಳಿಸಿದವರು

ಏನಿದು ದೀಪ್ತಿ ಶರ್ಮಾ ರನೌಟ್?

ಏನಿದು ದೀಪ್ತಿ ಶರ್ಮಾ ರನೌಟ್?

ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ತಂಡವು 3-0 ಅಂತರದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಈ ಸರಣಿಯಲ್ಲಿ ಅಂತಿಮ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದ ಬಗ್ಗೆ ಸಾಕಷ್ಟು ವಿವಾದಗಳಿವೆ. ದೀಪ್ತಿ ಚಾರ್ಲಿ ಡೀನ್‌ಗೆ ಮೊದಲೇ ಎಚ್ಚರಿಕೆ ನೀಡಿದ್ದರು, ಕ್ರೀಸ್‌ ದಾಟುತ್ತಿದ್ದರು. ಚೆಂಡು ಎಸೆತಕ್ಕೆ ಮೊದಲೇ ಕ್ರೀಸ್‌ ಬಿಡುತ್ತಿದ್ದಾರೆ ಎಂದು ಅಂಪೈರ್‌ಗೆ ದೂರಿದ್ದರು. ಆಕೆ ಪದೇ ಪದೇ ಕ್ರೀಸ್‌ನಿಂದ ಹೊರಗೆ ಹೋಗುತ್ತಿದ್ದಾರೆ ಎಂದು ಅಂಪೈರ್‌ಗೆ ತಿಳಿಸಿದ್ದರು. ವಾಸ್ತವವಾಗಿ, ಡೀನ್ ಮತ್ತು ಫ್ರೇಯಾ ಡೇವಿಸ್ ಕೊನೆಯ ವಿಕೆಟ್‌ಗೆ 35 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಇಬ್ಬರೂ ಬ್ಯಾಟ್ಸ್ ಮನ್ ಗಳು ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಡುವಂತಿತ್ತು. 44ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಮತ್ತೆ ಬಂದು ಚಾರ್ಲಿ ಡೀನ್ ಅವರನ್ನು ರನ್ ಔಟ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು.

For Quick Alerts
ALLOW NOTIFICATIONS
For Daily Alerts
Story first published: [IST]
Other articles published on
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X