ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯ

hyderabad india vs west indies 2nd test day 3 report

ಹೈದರಾಬಾದ್, ಅಕ್ಟೋಬರ್ 14:ಎರಡನೆಯ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹತ್ತು ವಿಕೆಟ್‌ಗಳ ಭರ್ಜರಿ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್‌ಗಳ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್, ಎರಡನೆಯ ಇನ್ನಿಂಗ್ಸ್‌ನಲ್ಲಿ 127 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ 71 ರನ್‌ಗಳ ಅತ್ಯಲ್ಪ ಮುನ್ನಡೆ ಸಾಧಿಸಿತು.

72 ರನ್‌ಗಳ ಸುಲಭದ ಗುರಿಯನ್ನು ಭಾರತ ಕೇವಲ 16.1 ಓವರ್‌ಗಳಲ್ಲಿ ತಲುಪಿತು. ಆರಂಭಿಕರಾದ ಪೃಥ್ವಿ ಶಾ ಮತ್ತು ಕೆ.ಎಲ್. ರಾಹುಲ್ ಇಬ್ಬರೂ ತಲಾ ಅಜೇಯ 33 ರನ್ ಗಳಿಸಿ ಗೆಲುವಿನ ಶಾಸ್ತ್ರ ಪೂರ್ಣಗೊಳಿಸಿದರು.

ಮೂರೇ ದಿನಕ್ಕೆ ಪಂದ್ಯ ಮುಕ್ತಾಯವಾಯಿತು. ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಹಾಗೂ 272 ರನ್‌ಗಳ ಭಾರಿ ಅಂತರದ ಗೆಲುವು ಕಂಡಿತ್ತು.

2ನೇ ಟೆಸ್ಟ್ Live ಸ್ಕೋರ್ : ವೆಸ್ಟ್ ಇಂಡೀಸ್ ವಿರುದ್ಧ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಿತ್ತಿದ್ದ ವೇಗಿ ಉಮೇಶ್ ಯಾದವ್, ಎರಡನೆಯ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು. ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಹತ್ತು ವಿಕೆಟ್ ಸಾಧನೆ ಮಾಡಿದರು. ಅವರಿಗೆ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಆರ್. ಅಶ್ವಿನ್ ಮತ್ತು ಕುಲದೀಪ್ ಯಾದವ್ ಉತ್ತಮ ಬೆಂಬಲ ನೀಡಿದರು.

ವಿಂಡೀಸ್‌ನ ಆರಂಭಿಕರಿಬ್ಬರೂ ಸೊನ್ನೆ ಸುತ್ತಿದರು. ಶಾಯ್ ಹೋಪ್ ಮತ್ತು ಸುನಿಲ್ ಆಂಬ್ರಿಸ್ ಕೊಂಚ ಪ್ರತಿರೋಧ ಒಡ್ಡಿದರು. ಆದರೆ, ಭಾರತದ ನಿಖರ ದಾಳಿ ಎದುರು ಕೆರಿಬಿಯನ್ನರ ಬ್ಯಾಟಿಂಗ್ ಪಡೆ ಮಂಕಾಯಿತು.

ಶನಿವಾರ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದ್ದ ಭಾರತ, ಬೃಹತ್ ಮುನ್ನಡೆ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದರೆ, ಭಾನುವಾರ ಆರಂಭದಿಂದಲೇ ನಿರಂತರವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಅವರ ಅಲ್ಪ ಪ್ರತಿರೋಧದಿಂದಾಗಿ 367 ರನ್ ಗಳಿಸಲು ಶಕ್ತವಾಯಿತು.

ಉತ್ತಮವಾಗಿ ಆಡುತ್ತಿದ್ದ ಅಜಿಂಕ್ಯ ರಹಾನೆ ನಾಯಕ ಜೇಸನ್ ಹೋಲ್ಡರ್ ಅವರಿಗೆ ಭಾನುವಾರದ ಮೊದಲ ಬಲಿಯಾದರು. ಅಚ್ಚರಿಯ ಪುಟಿತ ಕಂಡ ಚೆಂಡು, ರಹಾನೆ ಅವರ ಬ್ಯಾಟ್‌ಗೆ ತಗುಲಿ ನೇರವಾಗಿ ಶಾಯ್ ಹೋಪ್ ಅವರ ಕೈ ಸೇರಿತು. ಹಿಂದಿನ ದಿನದ ಮೊತ್ತಕ್ಕೆ ಅವರು ಕೇವಲ ಐದು ರನ್ (80) ಸೇರಿಸಿದ್ದರು.

ರವೀಂದ್ರ ಜಡೇಜಾ ಅವರನ್ನು ಅದೇ ಓವರ್‌ನಲ್ಲಿ ಎರಡನೆಯ ಎಸೆತದಲ್ಲಿಯೇ ಹೋಲ್ಡರ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.

ಶತಕದ ಭರವಸೆ ಮೂಡಿಸಿದ್ದ ರಿಷಬ್ ಪಂತ್ ಸತತ ಎರಡನೆಯ ಟೆಸ್ಟ್‌ನಲ್ಲಿಯೂ ಎಡವಿದರು. ಮೊದಲ ಟೆಸ್ಟ್‌ನಲ್ಲಿ 92 ರನ್ ಗಳಿಸಿದ್ದ ಪಂತ್, ಅದೇ ಮೊತ್ತಕ್ಕೆ ಔಟಾದರು. ಅಶ್ವಿನ್ 35 ರನ್‌ಗಳ ಕಾಣಿಕೆ ನೀಡಿದರು.

ವೆಸ್ಟ್ ಇಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ (56/5) ಕರಾರುವಾಕ್ ದಾಳಿ ನಡೆಸಿದರು. ಅವರಿಗೆ ಶನನ್ ಗ್ಯಾಬ್ರಿಯಲ್ (107/3) ಉತ್ತಮ ಸಾತ್ ನೀಡಿದರು.

Story first published: Sunday, October 14, 2018, 18:10 [IST]
Other articles published on Oct 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X