ಧೋನಿ ನಿವೃತ್ತಿಯಾಗುವವರೆಗೂ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ: ವೃದ್ಧಿಮಾನ್ ಸಾಹ

36 ವರ್ಷದ ವೃದ್ಧಿಮಾನ್ ಸಹಾ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 11 ವರ್ಷಗಳು ಕಳೆದಿವೆ. 2010ರಲ್ಲಿ ಟೀಮ್ ಇಂಡಿಯಾ ಪರ ಆಡಲು ಟೆಸ್ಟ್ ಪಂದ್ಯವೊಂದರಲ್ಲಿ ಅವಕಾಶ ಪಡೆದ ವೃದ್ಧಿಮಾನ್ ಸಹಾ ತನ್ನ ಎರಡನೇ ಟೆಸ್ಟ್ ಪಂದ್ಯ ಆಡಿದ್ದು 2012ರಲ್ಲಿ. ಹೀಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯಲು ವೃದ್ದಿಮಾನ್ ಸಹಾ 3 ವರ್ಷಗಳು ಕಾಯುವಂತಹ ಪರಿಸ್ಥಿತಿಯಿತ್ತು. ಆರಂಭದ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಗದ ವೃದ್ದಿಮಾನ್ ಸಾಹ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಒಂದು ಅವಕಾಶಕ್ಕಾಗಿ 3 ವರ್ಷ ಕಾಯಬೇಕಾಯ್ತು | Wriddhiman Saha | Oneindia Kannada

ಮುಂದಿನ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್‌ರನ್ನು ಖರೀದಿಸಬಹುದಾದ 3 ತಂಡಗಳಿವುಮುಂದಿನ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್‌ರನ್ನು ಖರೀದಿಸಬಹುದಾದ 3 ತಂಡಗಳಿವು

'2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾನು ಎರಡನೆಯ ಪಂದ್ಯವಾಡಲು 3 ವರ್ಷಗಳು ಕಾಯಬೇಕಾಗಿ ಬಂತು. ಆಗಿನ ಟೀಮ್ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇತ್ತು, ಹೀಗಾಗಿ ಯಾವ ಆಟಗಾರನಾದರೂ ಗಾಯಕ್ಕೊಳಗಾದಾಗ ಮಾತ್ರ ನನಗೆ ಆಡುವ ಅವಕಾಶ ಲಭಿಸುತ್ತಿತ್ತು. ಸಿಕ್ಕ ಅವಕಾಶವನ್ನು ನಾನು ಚೆನ್ನಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ, ಆಡುವ ಪ್ರಯತ್ನ ಸಿಗದಿದ್ದಾಗ ನಾನು ಬೇಸರಕ್ಕೊಳಗಾಗುತ್ತಿರಲಿಲ್ಲ. ಕಾರಣ ನನ್ನ ತಂಡ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿತ್ತು, ತಂಡ ಗೆದ್ದಾಗಲೆಲ್ಲಾ ನನಗೆ ಹೆಮ್ಮೆಯಾಗುತ್ತಿತ್ತು' ಎಂದು ವೃದ್ದಿಮಾನ್ ಸಹಾ ತಿಳಿಸಿದ್ದಾರೆ.

ಐಪಿಎಲ್ ಪುನಾರಂಭದ ದಿನಾಂಕ ಪ್ರಕಟವಾದ ಬೆನ್ನಲ್ಲೇ ಶುರು ಸಾಲು ಸಾಲು ಸಮಸ್ಯೆಗಳು; ಹೀಗಾದರೆ ಕಷ್ಟ!

ಇನ್ನೂ ಮುಂದುವರೆದು ಮಾತನಾಡಿದ ಸಹಾ 'ಎಂಎಸ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ವಿಕೆಟ್ ಕೀಪರ್ ಮತ್ತು ನಾಯಕ. ಅವರು ತಂಡದಲ್ಲಿದ್ದಾಗ ನನಗೆ ಹೆಚ್ಚೇನು ಅವಕಾಶಗಳು ಲಭಿಸುತ್ತಿರಲಿಲ್ಲ. ಧೋನಿ ಗಾಯಕ್ಕೊಳಗಾದಾಗೆಲ್ಲ ನನಗೆ ಆಡುವ ಅವಕಾಶ ಸಿಗುತ್ತಿತ್ತು. ಹೀಗೆ 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ ನಂತರ ತಂಡದಲ್ಲಿ ನನಗೆ ಸಾಲು ಸಾಲು ಅವಕಾಶಗಳು ಸಿಕ್ಕವು' ಎಂದು ತಿಳಿಸಿದ್ದಾರೆ.

2014ರಿಂದ 2018ರವರೆಗೂ ಸಾಲು ಸಾಲು ಅವಕಾಶಗಳು

2014ರಿಂದ 2018ರವರೆಗೂ ಸಾಲು ಸಾಲು ಅವಕಾಶಗಳು

ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ ನಂತರ 2018ರವರೆಗೂ ನನಗೆ ಟೀಮ್ ಇಂಡಿಯಾ ಪರ ಆಡುವ ಸಾಲು ಸಾಲು ಅವಕಾಶಗಳು ಲಭಿಸಿದವು ಹಾಗೂ ಆ ಅವಧಿಯಲ್ಲಿ ನಾನು ಕೆಲ ಅರ್ಧಶತಕ ಮತ್ತು ಶತಕಗಳನ್ನು ಸಿಡಿಸಿ ಉತ್ತಮವಾಗಿ ರನ್ ಕಲೆಹಾಕಿದೆ ಎಂದು ವೃದ್ಧಿಮಾನ್ ಸಹಾ ಹೇಳಿಕೊಂಡಿದ್ದಾರೆ.

2018ರಲ್ಲಿ ರಿಷಭ್ ಪಂತ್ ಆಗಮನ

2018ರಲ್ಲಿ ರಿಷಭ್ ಪಂತ್ ಆಗಮನ

2018ರವರೆಗೂ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ನಾನು ಗಾಯದ ಸಮಸ್ಯೆಗೆ ಒಳಗಾದೆ. ಈ ಸಂದರ್ಭದಲ್ಲಿಯೇ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡರು. ನಂತರ ಇಂಗ್ಲೆಂಡ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದರಲ್ಲಿ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು, ಹೀಗಾಗಿ ತದನಂತರ ನಾನು ತಂಡದಲ್ಲಿ ಮತ್ತೆ ಅವಕಾಶ ಪಡೆದುಕೊಳ್ಳಲು ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಸಾಹ ತಿಳಿಸಿದ್ದಾರೆ.

ಬ್ಯಾಟಿಂಗ್‌ಗಿಂತ ಕೀಪಿಂಗ್ ಮುಖ್ಯ

ಬ್ಯಾಟಿಂಗ್‌ಗಿಂತ ಕೀಪಿಂಗ್ ಮುಖ್ಯ

ವಿಕೆಟ್ ಕೀಪರ್ ಮತ್ತು ಉತ್ತಮ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ್ದ ವೃದ್ಧಿಮಾನ್ ಸಾಹ ತಾನು ಬ್ಯಾಟಿಂಗ್‌ಗಿಂತ ವಿಕೆಟ್ ಕೀಪಿಂಗ್‍ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಸಾಹ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಎಂದಿದ್ರು ಕೊಹ್ಲಿ

ಸಾಹ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಎಂದಿದ್ರು ಕೊಹ್ಲಿ

2018ರಲ್ಲಿ ವೃದ್ಧಿಮಾನ್ ಸಾಹ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾ ತಂಡದಿಂದ ಹೊರಗುಳಿದ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ವೃದ್ಧಿಮಾನ್ ಸಾಹ ವಿಶ್ವ ಕ್ರಿಕೆಟ್‌ನ ಬೆಸ್ಟ್ ವಿಕೆಟ್ ಕೀಪರ್ ಎಂದು ಹೇಳಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, May 26, 2021, 15:52 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X