ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪುನಾರಂಭದ ದಿನಾಂಕ ಪ್ರಕಟವಾದ ಬೆನ್ನಲ್ಲೇ ಶುರು ಸಾಲು ಸಾಲು ಸಮಸ್ಯೆಗಳು; ಹೀಗಾದರೆ ಕಷ್ಟ!

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿ 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದೆ. ಐಪಿಎಲ್ ಬಯೋಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಿಗೆ ಮತ್ತು ತರಬೇತುದಾರರಿಗೆ ಸೋಂಕು ತಗುಲಿದ ಕಾರಣ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿತ್ತು.

IPL ಮತ್ತೆ ಆರಂಭವಾದರೂ ಬೇಸರದ ವಿಚಾರವೇ ಹೆಚ್ಚು!! | Oneindia Kannada

ಹೀಗೆ ಅರ್ಧಕ್ಕೆ ನಿಂತಿದ್ದ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರೆಸಲಾಗುವುದು ಎಂಬ ಸುದ್ದಿ ಈ ಹಿಂದಿನಿಂದಲೂ ಹರಿದಾಡುತ್ತಿತ್ತು. ಈ ಸುದ್ದಿ ಸದ್ಯಕ್ಕೆ ನಿಜವಾಗಿದ್ದು ಮಂಗಳವಾರ ಪಿಟಿಐಗೆ ಬಿಸಿಸಿಐ ಮಾಹಿತಿ ನೀಡಿರುವ ಪ್ರಕಾರ ಸೆಪ್ಟೆಂಬರ್ ಮೂರನೇ ವಾರದಿಂದ ಯುಎಇಯಲ್ಲಿ ಐಪಿಎಲ್ ಪುನರಾರಂಭವಾಗಲಿದೆ. ಹೌದು ಉಳಿದಿರುವ 31 ಐಪಿಎಲ್ ಪಂದ್ಯಗಳನ್ನು ಸೆಪ್ಟೆಂಬರ್ ಮೂರನೇ ವಾರದಿಂದ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ತಿಳಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಪುನರಾರಂಭವಾಗುವ ಸುದ್ದಿ ತಿಳಿದ ಕ್ರೀಡಾಭಿಮಾನಿಗಳು ಒಂದೆಡೆ ಸಂತಸಪಡುತ್ತಿದ್ದರೆ, ಐಪಿಎಲ್ ಪುನರಾಂಭವಾಗುವ ದಿನಾಂಕ ಪ್ರಕಟವಾದ ಬೆನ್ನಲ್ಲೇ ಕ್ರೀಡಾಭಿಮಾನಿಗಳು ಬೇಸರಕ್ಕೊಳಗಾಗುವ ವಿಷಯಗಳು ಮತ್ತೊಂದೆಡೆ ಹುಟ್ಟಿಕೊಂಡಿವೆ. ಹೌದು ಸೆಪ್ಟೆಂಬರ್ ಮೂರನೇ ವಾರದಿಂದ ಐಪಿಎಲ್ ಪುನರಾರಂಭವಾಗಿ ಅಕ್ಟೋಬರ್ ತಿಂಗಳಿನಲ್ಲಿ ಮುಗಿಯಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ಕೆಳಕಂಡ ಬೇಸರದ ವಿಷಯಗಳು ಕೇಳಿಬಂದಿವೆ.

ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಆಟಗಾರರ ಅಲಭ್ಯತೆ

ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಆಟಗಾರರ ಅಲಭ್ಯತೆ

ಐಪಿಎಲ್ ಮುಂದುವರೆಯುವ ವೇಳೆಗೆ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ ಟ್ವೆಂಟಿ ಸರಣಿಗಳು ನಡೆಯುವುದರಿಂದ ಬಹುತೇಕ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡದ ಆಟಗಾರರು ಐಪಿಎಲ್ ಆಡಲು ಅಲಭ್ಯರಾಗಲಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ ಪಾಕಿಸ್ತಾನ ಪ್ರವಾಸವನ್ನೂ ಸಹ ಇಂಗ್ಲೆಂಡ್ ತಂಡ ಕೈಗೊಳ್ಳಲಿದೆ.

ನ್ಯೂಜಿಲೆಂಡ್ ಆಟಗಾರರು ಕೂಡ ಅನುಮಾನ

ನ್ಯೂಜಿಲೆಂಡ್ ಆಟಗಾರರು ಕೂಡ ಅನುಮಾನ

ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 3 ಏಕದಿನ ಪಂದ್ಯಗಳ ಸರಣಿ ಹಾಗೂ 3 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡಲಿರುವ ಕಾರಣ ಐಪಿಎಲ್ ಮುಂದುವರೆದರೆ ನ್ಯೂಜಿಲೆಂಡ್ ತಂಡದ ಆಟಗಾರರು ಕೂಡ ಅಲಭ್ಯರಾಗುವ ಸಂಭವವಿದೆ.

ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಕ್ರಿಕೆಟಿಗರು ಭಾಗಶಃ ಅನುಮಾನ

ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಕ್ರಿಕೆಟಿಗರು ಭಾಗಶಃ ಅನುಮಾನ

ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಹಾಗೂ ಸೌತ್ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೆಪ್ಟೆಂಬರ್ ತಿಂಗಳಿನಲ್ಲಿ ಆಡುವುದರಿಂದ ಐಪಿಎಲ್ ಆಡುವ ಕೆಲ ಆಟಗಾರರು ಭಾಗಶಃ ಅಲಭ್ಯರಾಗಲಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್

ಕೆರಿಬಿಯನ್ ಪ್ರೀಮಿಯರ್ ಲೀಗ್

ಆಗಸ್ಟ್ 28ರಿಂದ ಸೆಪ್ಟೆಂಬರ್ 19ರವರೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು ಬಹುತೇಕ ವೆಸ್ಟ್ ಇಂಡೀಸ್ ತಂಡದ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುವುದರಿಂದ ಪುನರಾರಂಭವಾಗುವ ಐಪಿಎಲ್ ಆಡಲು ಅಲಭ್ಯರಾಗಲಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಗಿಸಿ ಐಪಿಎಲ್ ಆಡಲು ಬಂದರೂ ಕೂಡ ಯುಎಇಯ ಹತ್ತು ದಿನಗಳ ಕ್ವಾರಂಟೈನ್ ನಿಯಮ ಸಮಸ್ಯೆಯಾಗಿ ಪರಿಣಮಿಸಲಿದೆ.

Story first published: Wednesday, May 26, 2021, 15:09 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X