ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ರ್‍ಯಾಂಕಿಂಗ್: ಮಲಾನ್ ನಡುವಿನ ಅಂತರ ಕಡಿಮೆ ಮಾಡಿದ ಬಾಬರ್

ICC T20I rankings: Babar Azam reduced gap with top-ranked Dawid Malan

ಕರಾಚಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚಿಗೆ ಪ್ರಕಟಿಸಿರುವ ಟಿ20ಯ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಸುಧಾರಣೆ ಕಂಡಿದ್ದಾರೆ. ಅಗ್ರಸ್ಥಾನಿ ಇಂಗ್ಲೆಂಡ್‌ನ ಡೇವಿಡ್ ಮಲಾನ್ ನಡುವಿನ ಅಂತರವನ್ನು ಬಾಬರ್ ಕಿರಿದುಗೊಳಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಾಕಿಸ್ತಾನ-ಜಿಂಬಾಬ್ವೆ ಸರಣಿಯಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿದ್ದರು. ಟಿ20ಐ ಸರಣಿಯಲ್ಲಿ ಬಾಬರ್ ಕ್ರಮವಾಗಿ 82, 51 ರನ್ ಬಾರಿಸಿದ್ದರು. ಟಿ20 ಸರಣಿಯನ್ನು ಆತಿಥೇಯ ಪಾಕ್ 3-0ಯಿಂದ ಗೆದ್ದಿತ್ತು. ಈ ಸರಣಿಯ ಪ್ರದರ್ಶನಕ್ಕಾಗಿ ಬಾಬರ್ 2 ಅಂಕ ಹೆಚ್ಚಿಸಿಕೊಂಡಿದ್ದಾರೆ.

ರೋಹಿತ್‌ 5ನೇ ಐಪಿಎಲ್ ಟ್ರೋಫಿ ಗೆಲ್ಲುತ್ತಲೇ ವಿರಾಟ್‌ ಕೊಹ್ಲಿ ಟ್ರೋಲ್!ರೋಹಿತ್‌ 5ನೇ ಐಪಿಎಲ್ ಟ್ರೋಫಿ ಗೆಲ್ಲುತ್ತಲೇ ವಿರಾಟ್‌ ಕೊಹ್ಲಿ ಟ್ರೋಲ್!

ಟಿ20ಐ ಸದ್ಯದ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಡೇವಿಡ್ ಮಲಾನ್ 877 ಪಾಯಿಂಟ್ ಕಲೆ ಹಾಕಿದ್ದಾರೆ. ದ್ವಿತೀಯ ಸ್ಥಾನಿ ಬಾಬರ್ ಅಝಾಮ್ 871 ಅಂಕ ಗಳಿಸಿದ್ದರು. ಅಸಲಿಗೆ ಟಿ20ಐ ರ್‍ಯಾಂಕಿಂಗ್‌ನಲ್ಲಿ ಬಾಬರ್ ಮೊದಲ ಸ್ಥಾನದಲ್ಲಿದ್ದರು. ಇತ್ತೀಚೆಗೆ ಮಲಾನ್ ಮೊದಲ ಸ್ಥಾನ ಆವರಿಸಿಕೊಂಡಿದ್ದರು.

ಟಿ20ಐ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ (835 ಪಾಯಿಂಟ್ಸ್), 4ನೇ ಸ್ಥಾನದಲ್ಲಿ ಭಾರತ ಕೆಎಲ್ ರಾಹುಲ್, 5ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಕಾಲಿನ್ ಮುನ್ರೋ ಇದ್ದಾರೆ.

Story first published: Wednesday, November 11, 2020, 22:23 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X