ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಜಾನಿ ಬೇರ್ಸ್ಟೋ ಅದ್ಭುತ ಆಟದ ಹಿಂದಿದೆ ಲಕ್ಷ್ಮಣ್ ಕೈಚಳಕ!

By R Kaushik, London
ICC World Cup 2019 : ಇವರು ನೀಡಿದ ಸಲಹೆಯಿಂದಲೇ ಸೆಂಚುರಿ ಸಿಡಿದ ಬೇರ್ಸ್ಟೋ..? | Jonny Bairstow
ICC WC 2019: The Laxman hand in Bairstow revival

ಬರ್ಮಿಂಗ್‌ಹ್ಯಾಮ್, ಜುಲೈ 2: ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಭಾರೀ ಜಿದ್ದಾಜಿದ್ದಿಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಜಾನಿ ಬೇರ್ಸ್ಟೋ ಅವರು ಒಂದಿಷ್ಟು ವಿವಾದ ಇಟ್ಟುಕೊಂಡೇ ಪಂದ್ಯಾವಳಿಗೆ ಪ್ರವೇಶ ಪಡೆದುಕೊಂಡಿದ್ದರು. ಎರಡು ಅರ್ಧಶತಕಗಳನ್ನು ಈಗಾಗಲೇ ಬಾರಿಸಿದ್ದ ಅವರ ಫಾರ್ಮ್ ತುಂಬಾ ಉತ್ತಮವಾಗಿದ್ದರೂ ಶ್ರೇಷ್ಠ ಇನ್ನಿಂಗ್ಸ್ ಆಟ ಮಾತ್ರ ಮಿಸ್ ಆಗಿತ್ತು. ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯಿಂದ ಈ ಹಿಂದಿನ ಮೂರು ಪಂದ್ಯಗಳಿಂದ ಜೇಸನ್ ರಾಯ್ ದೂರವಿದ್ದ ಸಂದರ್ಭದಲ್ಲಿ ಬೇರ್ಸ್ಟೋ ಅವರ ಆಟ ಒಂದು ಹಂತಕ್ಕೆ ಮಾತ್ರ ಸೀಮಿತವಾಗಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬೇರ್ಸ್ಟೋ ಬೇಡದ ಕಾರಣಗಳಿಗಾಗಿ ಸುದ್ದಿಯಾಗಿದ್ದನ್ನು ಇಲ್ಲಿ ಗಮನಿಸಬಹುದು. ಇಂಗ್ಲೆಂಡ್ ತಂಡದ ಇಬ್ಬರು ಮಾಜಿ ನಾಯಕರ ವಿರುದ್ಧ ಟೀಕೆ ಮಾಡಿದ್ದು ಹಾಗೂ ಕೆಲ ಪ್ರಮುಖರು ವೈಯಕ್ತಿಕ ಹಿತಸಾಧನೆಗಾಗಿ ಇಂಗ್ಲೆಂಡ್ ಸೋಲನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದು ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು.

ಧೋನಿ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಸಂಜಯ್‌ ಮಾಂಜ್ರೆಕರ್‌ಧೋನಿ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಸಂಜಯ್‌ ಮಾಂಜ್ರೆಕರ್‌

ಅದೇನೇ ಇದ್ದರೂ ತಮ್ಮ ಉತ್ತಮ ವರ್ತನೆ ಹಾಗೂ ಸೌಜನ್ಯತೆಗೆ ಜಾನಿ ಬೇಸ್ಟೊ ಮತ್ತೊಂದು ಹೆಸರು ಎಂದು ಮರೆಯುವಂತಿಲ್ಲ. ಅದೃಷ್ಟ ಎಂಬುದು ಮರೀಚಿಕೆ ಇದ್ದಂತೆ. ಬೇಕಾದಾಗ ಅದು ಸಿಗದು. ತನಗೆ ಬೇಕಾದಾಗ ಮಾತ್ರ ಒಲಿಯುವಂಥದ್ದು. ರವಿವಾರ(ಜೂನ್ 30)ದ ಪಂದ್ಯದಲ್ಲಿ ಜಾನಿ ಬೇರ್ಸ್ಟೋ ಅವರಿಗೆ ಅದೃಷ್ಟ ಒಲಿದಿದ್ದು ಹೀಗೆಯೆ. ಅವತ್ತು ಅವರಾಡಿದ ಆಟ ಅದ್ಭುತವೇ ಆಗಿತ್ತು.

ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಲಿದೆ ಭಾರತ vs ಬಾಂಗ್ಲಾದೇಶ ಪಂದ್ಯ!ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಲಿದೆ ಭಾರತ vs ಬಾಂಗ್ಲಾದೇಶ ಪಂದ್ಯ!

ಜೇಸನ್ ರಾಯ್ ಅವರೊಂದಿಗೆ ಆಟ ಆರಂಭಿಸಿದ ಬೇರ್ಸ್ಟೋ ಆರಂಭಿಕ ಓವರ್‌ಗಳಲ್ಲಿ ಶಮಿ ಬೌಲಿಂಗ್‌ಗೆ ಕನಿಷ್ಠ ಅರ್ಧ ಡಜನ್ ಬಾರಿಯಾದರೂ ಔಟಾಗುವುದರಿಂದ ಬಚಾವಾಗಿದ್ದರು. ಎರಡು ಬಾರಿ ಶಮಿ ಎಸೆದ ಬಾಲ್‌ಗಳು ಬ್ಯಾಟ್ ತಗುಲಿ ಸ್ಟಂಪ್ ಬಳಿಯೇ ಹಾದು ಹೋಗಿದ್ದವು. ಪದೇ ಪದೇ ಬೀಟ್ ಆಗುತ್ತಿದ್ದ ಬೇರ್ಸ್ಟೋ, ಶಮಿ ಹಾಗೂ ಬುಮ್ರಾ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ಕೊಡುವುದರಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಈ ಆರಂಭಿಕ ಅಡೆತಡೆಗಳನ್ನು ಜಯಿಸಿ ಕ್ರೀಸ್ ಮೇಲೆ ಸೆಟ್ಲ್ ಆದ ಬೇರ್ಸ್ಟೋ ಅವರು ಸಿಡಿಸಿದ್ದು 111 ರನ್‌ಗಳನ್ನು. ಈ ರನ್‌ಗಳ ಅಡಿಪಾಯದಿಂದಲೇ ಇಂಗ್ಲೆಂಡ್ ಅವತ್ತು 31 ರನ್‌ಗಳ ಜಯ ಸಾಧಿಸಿದ್ದು ಇತಿಹಾಸ.

ವಿಶ್ವಕಪ್‌: ಪೂರನ್‌ ಶತಕ ವ್ಯರ್ಥ, ಶ್ರೀಲಂಕಾಕ್ಕೆ ರೋಚಕ ಗೆಲುವುವಿಶ್ವಕಪ್‌: ಪೂರನ್‌ ಶತಕ ವ್ಯರ್ಥ, ಶ್ರೀಲಂಕಾಕ್ಕೆ ರೋಚಕ ಗೆಲುವು

ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಒಟ್ಟಾರೆ 10 ಬೌಂಡರಿ ಹಾಗೂ 6 ಸಿಕ್ಸ್ ಬಾರಿಸಿದರು ಬೇಸ್ಟೊ. ಬಹುತೇಕ ಸಿಕ್ಸರ್‌ಗಳು ಸ್ಪಿನ್ನರ್‌ಗಳ ಬೌಲಿಂಗ್‌ನಲ್ಲಿಯೇ ಬಾರಿಸಿದ್ದು ವಿಶೇಷ. ಅದರಲ್ಲೂ ಚಹಲ್ ಅವರ ಬೌಲಿಂಗ್‌ನಲ್ಲಿಯೇ ನಾಲ್ಕು ಸಿಕ್ಸ್ ಬಾರಿಸಿದರು. ಇನ್ನುಳಿದ ಎರಡು ಸಿಕ್ಸ್ ಬಂದಿದ್ದು ಕುಲದೀಪ್ ಯಾದವ್ ಎಸೆತದಲ್ಲಿ. ಬಾಲಿನ ಸ್ವಿಂಗ್ ಬಳಸಿಕೊಂಡು ಆನ್ ಸೈಡ್‌ನಲ್ಲಿ ಶಾರ್ಟ್ ಸ್ಕ್ವೇರ್ ಬೌಂಡರಿಗೆ ನಿರಾಯಾಸವಾಗಿ ಬಾಲುಗಳನ್ನು ಅಟ್ಟಿದರು.

ICC WC 2019: The Laxman hand in Bairstow revival

ಪಂದ್ಯ ಮುಗಿದ ನಂತರ ಮ್ಯಾನ್ ಆಫ್ ದಿ ಮ್ಯಾಚ್ ಗೌರವ ಪಡೆದ ಬೇರ್ಸ್ಟೋ ತಮ್ಮ ಸಾಧನೆಯನ್ನು ಹಿರಿಯ ಭಾರತೀಯ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ ಅವರಿಗೆ ಸಲ್ಲಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಸ್ಪಿನ್ ಬೌಲಿಂಗ್ ಎದುರು ಆಡಲು ಲಕ್ಷ್ಮಣ ಅವರ ಮಾರ್ಗದರ್ಶನವೇ ತಮಗೆ ಸ್ಫೂರ್ತಿ ಎಂದು ಕೊಂಡಾಡಿದರು. ಐಪಿಎಲ್ ಪಂದ್ಯಗಳಲ್ಲಿ ಆಡುವಾಗ ಲಕ್ಷ್ಮಣ ಅವರು ನೀಡಿದ ತರಬೇತಿಯು ನನಗೆ ಬಹಳ ಸಹಾಯ ಮಾಡಿದೆ. ಎಂದು ಬೇರ್ಸ್ಟೋ ಸ್ಮರಿಸಿದರು. ಇದರ ಬಗ್ಗೆ ಜಾಸ್ತಿ ಮಾತನಾಡದಿದ್ದರೂ ಇಲ್ಲಿ ತಿಳಿದುಕೊಳ್ಳುವುದು ಬಹಳಷ್ಟಿದೆ.

ವಿಶ್ವಕಪ್: ರಿವ್ಯೂ ಕೇಳೋದಾ, ಬೇಡ್ವಾ?; ಕೊಹ್ಲಿ ಗೊಂದಲಕ್ಕೊಳಗಾದ ಕ್ಷಣ!ವಿಶ್ವಕಪ್: ರಿವ್ಯೂ ಕೇಳೋದಾ, ಬೇಡ್ವಾ?; ಕೊಹ್ಲಿ ಗೊಂದಲಕ್ಕೊಳಗಾದ ಕ್ಷಣ!

ಸನರೈಸರ್ಸ್ ಹೈದರಾಬಾದ ತಂಡದ ಸದಸ್ಯರಾಗಿ ಆಟವಾಡಿದ್ದ ಬೇರ್ಸ್ಟೋ, ಕಳೆದ ಬೇಸಿಗೆಯಲ್ಲಿ ಸುಮಾರು ಆರು ವಾರಗಳ ಕಾಲ ವಿವಿಎಸ್ ಲಕ್ಷ್ಮಣ ಅವರಿಂದ ತರಬೇತಿ ಪಡೆದುಕೊಂಡಿದ್ದರು. ಆ ಅವಧಿಯಲ್ಲಿ ಲಕ್ಷ್ಮಣ ಅವರ ಕ್ರಿಕೆಟ್ ಅನುಭವದ ಲಾಭ ಬೇರ್ಸ್ಟೋ ಅವರಿಗೆ ಸಿಕ್ಕಿತ್ತು. ಬೇರ್ಸ್ಟೋ ನೆಟ್ ಪ್ರಾಕ್ಟೀಸ್ ಮಾಡುವಾಗಲೆಲ್ಲ ಅವರ ಆಟವನ್ನು ತಿದ್ದಿ ಮಾರ್ಗದರ್ಶನ ಮಾಡುತ್ತಿದ್ದರು. ಗುರು ಲಕ್ಷ್ಮಣ ಅವರು ಹೇಳಿದ ಎಲ್ಲ ಕೌಶಲಗಳನ್ನು ತಮ್ಮದಾಗಿಸಿಕೊಂಡ ಬೇಸ್ಟೊ ಹೈದರಾಬಾದ್ ಸನರೈಸರ್ಸ್ ತಂಡಕ್ಕೆ 10 ಇನ್ನಿಂಗ್ಸ್‌ಗಳಲ್ಲಿ ಬೃಹತ್ 445 ರನ್‌ಗಳನ್ನು ಗಳಿಸಿಕೊಟ್ಟಿದ್ದರು. ಆದರೆ ಈಗ ಲಕ್ಷ್ಮಣ ಅವರ ಮಾರ್ಗದರ್ಶನವನ್ನು ಸ್ವತಃ ತಾವಾಗಿಯೇ ಜಗತ್ತಿನ ಎದುರು ಬಿಚ್ಚಿಟ್ಟ ಬೇಸ್ಟೊ ಅವರ ಕ್ರೀಡಾ ಮನೋಭಾವನೆಯನ್ನು ಮೆಚ್ಚಿಕೊಳ್ಳಲೇಬೇಕು. ಏಕೆಂದರೆ ಲಕ್ಷ್ಮಣ ಸ್ವತಃ ಎಂದೂ ತಮ್ಮ ಬಗ್ಗೆ ಹೇಳಿಕೊಳ್ಳುವುದಿಲ್ಲವಾದ್ದರಿಂದ ಈ ವಿಷಯ ಜಗತ್ತಿಗೆ ತಿಳಿಯುವುದು ಸಾಧ್ಯವೇ ಇರಲಿಲ್ಲ.

ಕೈ ಬೆರಳು ಮುರಿದರೂ ಲೆಕ್ಕಿದಸೆ ಆಡಿ ಮನ ಗೆದ್ದ ವಹಾಬ್‌ ರಿಯಾಝ್‌!ಕೈ ಬೆರಳು ಮುರಿದರೂ ಲೆಕ್ಕಿದಸೆ ಆಡಿ ಮನ ಗೆದ್ದ ವಹಾಬ್‌ ರಿಯಾಝ್‌!

ಕೇವಲ ಭಾರತದ ಐಪಿಎಲ್‌ಗೆ ಈ ವಿಷಯ ಸೀಮಿತವಾಗಿಲ್ಲ. ಹಲವಾರು ವರ್ಷಗಳ ಹಿಂದೆ ಕೆನಡಾದ ತತ್ವಜ್ಞಾನಿ ಮಾರ್ಶಲ್ ಮ್ಯಾಕ್ ಲುಹಾನ್ ಅವರು ಹೇಳಿದ ಕ್ರಿಕೆಟ್ ಜಗತ್ತು ಈಗ ಸಣ್ಣ ಹಳ್ಳಿಯಂತಾಗಿದೆ ಎಂಬ ಮಾತು ನಿಜವಾಗಿದೆ. ಆಗ ಅವರು ಅದನ್ನು ಬೇರೆಯದೇ ವಿಷಯದಲ್ಲಿ ವ್ಯಾಖ್ಯಾನಿಸಿದ್ದು ಬೇರೆ ಮಾತು. ಕ್ರಿಕೆಟ್ ಜಗತ್ತಿನ ದಿಗ್ಗಜರು ತಮ್ಮ ಅನುಭವ ಹಾಗೂ ಜ್ಞಾನಗಳನ್ನು ದೇಶ, ಭಾಷೆಗಳ ಪರಿಮಿತಿ ದಾಟಿ ಯುವ ಆಟಗಾರರೊಂದಿಗೆ ಹಂಚಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಜ್ಞಾನ ಎಂಬುದು ಹಂಚಿಕೊಂಡಷ್ಟೂ ಬೆಳೆಯುವಂಥದು. ಅದರಲ್ಲೂ ಜಗತ್ತಿನಾದ್ಯಂತ ಸುತ್ತಾಡುವ, ಹಲವಾರು ವಿಭಿನ್ನ ಅನುಭವಗಳನ್ನು ಪಡೆಯುವ ಮಹಾನ್ ಆಟಗಾರರು ತಮ್ಮ ಅನುಭವದ ಮೂಸೆಯಿಂದ ಹೊರ ಹೊಮ್ಮಿದ ವಿವೇಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಈಗ ಕ್ರಿಕೆಟ್ ನೈಪುಣ್ಯ ಕೆಲವರ ಸ್ವತ್ತಾಗಿ ಮಾತ್ರ ಉಳಿದಿಲ್ಲ. ಅದು ಎಲ್ಲಿದ್ದರೂ ಎಲ್ಲ ಗಡಿಗಳನ್ನು ಮೀರಿ ಹರಡುತ್ತಿದೆ.

ಭಾರತ ತಂಡವು 2002 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬಾಬ್ ಟೇಲರ್ ಅವರು ರಾಹುಲ್ ದ್ರಾವಿಡ್ ಅವರಿಗೆ ಕೀಪಿಂಗ್ ಪಾಠ ಹೇಳಿಕೊಟ್ಟದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಒಂದು ಕಾಲಕ್ಕೆ ಭಾರತದ ಕೋಚ್ ಆಗಿದ್ದ ಜಾನ್ ರೈಟ್ ಅವರೊಂದಿಗೆ ಬಾಬ್ ಟೇಲರ್ ಡರ್ಬಿಶೈರ್ ಪರವಾಗಿ ಆಡುತ್ತಿದ್ದರು. ಆಗಿನ ಸಮಯದಲ್ಲಿ ಶ್ರದ್ಧೆಯಿಂದ ಕೀಪಿಂಗ್ ಕಲಿಯುತ್ತಿದ್ದ ದ್ರಾವಿಡ್ ಆವರಿಗೆ ಬಾಬ್ ಟೇಲರ್ ಸಾಕಷ್ಟು ಹೇಳಿ ಕೊಟ್ಟಿದ್ದರು. ಈ ವಿಶ್ವಕಪ್‌ನಲ್ಲಿ ಕೂಡ ಅದನ್ನು ಕಾಣಬಹುದು. ನಿವೃತ್ತಿ ಅಂಚಿಗೆ ಬಂದಿರುವ ಸೌತ್ ಆಫ್ರಿಕಾ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರು ಶ್ರೀಲಂಕಾದ ಆಟಗಾರ ಜೇಫ್ರಿ ವಾಂಡರ್ಸೆ ಅವರ ಸಹಾಯವನ್ನು ಹೊಗಳಿದ್ದನ್ನು ಗಮನಿಸಬಹುದು.

ಮೂರನೇ ಬಾರಿ ತಂದೆಯಾದ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ಮೂರನೇ ಬಾರಿ ತಂದೆಯಾದ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಂಥ ಶ್ರೇಷ್ಠ ತರಬೇತಿಗಳು ಜಗತ್ತು ಹೊಸ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ನಿದರ್ಶನವಾಗಿವೆ. 15 ವರ್ಷಗಳ ಹಿಂದೆ ನೋಡಿದರೆ ಇಂಥದೊಂದು ಬದಲಾವಣೆ ಬರುವುದು ಅಸಾಧ್ಯದ ಮಾತಾಗಿತ್ತು. 1987 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಸಂದರ್ಭದಲ್ಲಿ ಭಾರತದ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರು ಪಾಕಿಸ್ತಾನದ ಇಕ್ಬಾಲ್ ಕಾಸೀಮ್ ಹಾಗೂ ತೌಸೀಫ್ ಅಹ್ಮದ್ ಅವರೊಂದಿಗೆ ತಮ್ಮ ಸ್ಪಿನ್ ರಹಸ್ಯ ಹಂಚಿಕೊಂಡದ್ದಕ್ಕೆ ಬಹಳಷ್ಟು ಟೀಕೆಗೆ ಒಳಗಾಗಿದ್ದರು. ಹಾಗೆಯೇ 2012-13 ರಲ್ಲಿ ಗ್ರೆಮ್ ಸ್ವಾನ್ ಅವರೊಂದಿಗೆ ಸೇರಿಕೊಂಡು ಇಂಗ್ಲೆಂಡ್‌ನ ಮಾಂಟಿ ಪನೇಸರ್ ಭಾರತದ ವೈಫಲ್ಯಕ್ಕೆ ಕಾರಣರಾಗಿದ್ದನ್ನು ಮರೆಯುವಂತಿಲ್ಲ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Tuesday, July 2, 2019, 16:25 [IST]
Other articles published on Jul 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X