ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ

Worldcup 2019: ವಿಶ್ವಕಪ್ ಮ್ಯಾಚ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ | Oneindia Kannada
ICC World Cup: Pakistan game will bring the best out of us - Virat Kohli

ಲಂಡನ್, ಜೂನ್ 14: ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ನಿಲ್ಲದೆ ಸುರಿದು ಆಟಕ್ಕೆ ಅಡ್ಡಿಪಡಿಸುತ್ತಿದ್ದ ಮಳೆ ಹನಿಗಳತ್ತಲೇ ದಿಟ್ಟಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಮ್ಮೆಲ್ಲ ಶಕ್ತಿ ಮೀರಿ ಆಡುತ್ತೇವೆ. ಗೆಲುವು ತಂದುಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಾಟಿಂಗ್‌ಹ್ಯಾಮ್‌ನಲ್ಲಿ ಗುರುವಾರ (ಜೂನ್ 13) ನಡೆಯಲಿದ್ದ ಭಾರತ vs ನ್ಯೂಜಿಲೆಂಡ್ ಪಂದ್ಯ ಮಳೆಯ ಕಾರಣ ಟಾಸ್ ಕೂಡ ನಡೆಯದೆ ರದ್ದಾಯಿತು. ಭಾರತ ಮತ್ತು ಕಿವೀಸ್ ಎರಡೂ ತಂಡಗಳಿಗೂ ತಲಾ ಒಂದೊಂದು ಪಾಯಿಂಟ್ ನೀಡಲಾಗಿದೆ. ಇನ್ನು ಭಾನುವಾರ (ಜೂನ್ 16) ಪಾಕಿಸ್ತಾನ ವಿರುದ್ಧ ಭಾರತ ಪಂದ್ಯವನ್ನಾಡಲಿದೆ.

ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?

'ಹಲವಾರು ವರ್ಷಗಳಿಂದಲೂ ಭಾರತ-ಪಾಕಿಸ್ತಾನ ತಂಡಗಳ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ವಿಶ್ವಮಟ್ಟದಲ್ಲಿ ಇದೊಂದು ಹೈ ವೋಲ್ಟೇಜ್ ಪಂದ್ಯ. ಈ ಪಂದ್ಯದ ಗೆಲುವಿನಲ್ಲಿ ಪ್ರತಿಷ್ಠೆ ಅಡಗಿದೆ. ಹೀಗಾಗಿ ಈ ಪಂದ್ಯದಲ್ಲಿ ನಮ್ಮೆಲ್ಲರ ಅತ್ಯುತ್ತಮ ಆಟ ಆಡುತ್ತೇವೆ' ಎಂದು ಕೊಹ್ಲಿ ಹೇಳಿದರು.

ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?

ಮಾತು ಮುಂದುವರೆಸಿದ ನಾಯಕ ವಿರಾಟ್, 'ಭಾನುವಾರದ ಪಂದ್ಯದ ವಿಚಾರಕ್ಕೆ ಬಂದರೆ ನಾವು ಮಾನಸಿಕವಾಗಿ ಸಾಕಷ್ಟು ಗಟ್ಟಿಯಾಗಿದ್ದೇವೆ. ಮೈದಾನಕ್ಕೆ ಹೋಗುತ್ತೇವೆ, ಆಟದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಆಡುತ್ತೇವೆ' ಎಂದು ವಿವರಿಸಿದರು.

ವಿಶ್ವಕಪ್ ತ್ವರಿತಗತಿ 100, ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಇಲ್ಲವಿಶ್ವಕಪ್ ತ್ವರಿತಗತಿ 100, ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಇಲ್ಲ

ಭಾರತ vs ಪಾಕಿಸ್ತಾನ ಪಂದ್ಯವೆಂದರೇನೇ ಅಲ್ಲಿ ವಿಶೇಷ ಕುತೂಹಲವಿರುತ್ತದೆ. ಈವರೆಗೆ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 6 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರೂ ಸಾರಿ ಕೂಡ ಭಾರತ ಗೆದ್ದಿದೆ. ಪಾಕಿಸ್ಥಾನ ಸತತ ಸೋಲುಗಳನ್ನು ಕಂಡಿದೆ.

Story first published: Friday, June 14, 2019, 9:56 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X