ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ವಿಚಾರದಲ್ಲಿ ರಾಸ್‌ ಟೇಲರ್‌ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ!

ಈ ವಿಚಾರದಲ್ಲಿ ರಾಸ್ ಟೇಲರ್ ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ | Oneindia Kannada
If body allows, will continue after WC: Ross Taylor

ಲಂಡನ್‌, ಮೇ 27: ನ್ಯೂಜಿಲೆಂಡ್‌ ತಂಡದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ನಿವೃತ್ತಿ ಕುರಿತಾಗಿ ಸುಳಿವು ನೀಡಿದ್ದು, ವಿಶ್ವಕಪ್‌ ಮುಗಿದ ನಂತರ ತಮ್ಮ ದೇಹ ಸ್ಥಿತಿ ಉತ್ತಮವಾಗಿದಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.

<strong>2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು</strong>2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

35 ವರ್ಷದ ಅನುಭವಿ ಬಲಗೈ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌, ನಿವೃತ್ತಿ ವಿಚಾರದಲ್ಲಿ ತಮಗೆ ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ಅವರು ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಟೂರ್ನಿಯ 12ನೇ ಆವೃತ್ತಿ ಟೇಲರ್‌ ಪಾಲಿಗೆ ಬಹುತೇಕ ಕೊನೆಯ ವಿಶ್ವಕಪ್‌ ಟೂರ್ನಿಯಾಗಿದೆ.

ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!

"ನನಗೀಗ 35 ವರ್ಷ ಮುಂದೆ ಎದುರಾಗುವುದು ಏನೆಂಬುದು ನನಗೆ ತಿಳಿದಿಲ್ಲ. ನನಗೆ ಕ್ರಿಸ್‌ ಗೇಲ್‌ ಸ್ಫೂರ್ತಿ. ಅವರಿಗೆ ಈ ಬಾರಿಯ ವಿಶ್ವಕಪ್‌ನಲ್ಲಿ 39 ವರ್ಷ. ಮುಂದಿನ ವಿಶ್ವಕಪ್‌ ಆಡುವುದಾದರೆ ನನಗೂ 39 ವರ್ಷ ಆಗಿರುತ್ತದೆ. ಆದರೂ ಇದು ಅಷ್ಟು ಸುಲಭವಾಗಿ ಪರಿಗಣಿಸುವ ವಿಚಾರವಲ್ಲ,'' ಎಂದು ಟೇಲರ್‌ ನಿವೃತ್ತಿ ಕುರಿತಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

<span class=ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!" title="ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!" />ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!

ಮೇ 25ರಂದು ದಿ ಓವಲ್‌ನಲ್ಲಿ ನಡೆದ ಭಾರತ ವಿರುದ್ಧ ನಡೆದ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಗಮನ ಸೆಳೆದಿದ್ದ ಟೇಲರ್‌, ಆಕರ್ಷಕ ಅರ್ಧಶತಕ (71 ರನ್‌) ದಾಖಲಿಸಿ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

"ಏನನ್ನೂ ಹೇಳಲು ಸಾಧ್ಯವಿಲ್ಲ. ಇದು ನನ್ನ ಕೊನೆಯ ವಿಶ್ವಕಪ್‌ ಟೂರ್ನಿ ಆಗಬಹುದು. ಗಾಯದ ಸಮಸ್ಯೆಗಳು ಕಾಡದೇ ಇದ್ದರೆ ಮುಂದಿನ ವಿಶ್ವಕಪ್‌ನಲ್ಲಿ ಆಡಲೂ ಬಹುದು. ವಿಶ್ವಕಪ್‌ನಲ್ಲಿ ಆಡಿ ಆನಂದಿಸುವುದಷ್ಟೇ ನನ್ನ ಗುರಿ,'' ಎಂದು ಟೇಲರ್‌ ಹೇಳಿದ್ದಾರೆ.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಕಳೆದ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಫೈನಲ್‌ ತಲುಪಿತ್ತಾದರೂ, ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಕಿವೀಸ್‌ ಪಡೆ 1996ರ ಚಾಂಪಿಯನ್ಸ್‌ ಶ್ರೀಲಂಕಾ ವಿರುದ್ಧ ಶನಿವಾರ ತನ್ನ ಅಭಿಯಾನ ಆರಂಭಿಸಲಿದೆ.

Story first published: Monday, May 27, 2019, 16:54 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X