ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮುಂದೆ ಖಡಕ್ ಪ್ರಶ್ನೆಯಿಟ್ಟ ಜಹೀರ್ ಖಾನ್

If bowlers can be changed, why cant batsmen?: Zaheer Khan questions team india management

ಲಂಡನ್, ಸೆಪ್ಟೆಂಬರ್ 7: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಸರಣಿಯಲ್ಲಿ ಅಮೋಘ ಯಶಸ್ಸು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿದೆ. ಟೀಮ್ ಇಂಡಿಯಾ ಭಾರೀ ಯಶಸ್ಸು ಸಾಧಿಸಿದ ಈ ಸಂದರ್ಭದಲ್ಲಿಯೇ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಖಡಕ್ ಸಾವಲೊಂದನ್ನು ಮುಂದಿಟ್ಟಿದ್ದಾರೆ. ಈ ಸರಣಿ ನಡೆಯುತ್ತಿರುವ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸರ್ವಾಂಗೀಣ ಪ್ರದರ್ಶನ ನೀಡಿಕೊಂಡು ಬಂದಿದೆ. ಕೆಲ ಆಟಗಾರರು ಈ ಸರಣಿಯ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿಕೊಂಡಿ ಬಂದಿದ್ದು ಬಳಿಕ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಪ್ರದರ್ಶನ ಆರಂಭದಲ್ಲಿ ಬಹಳಷ್ಟು ನೀರಸವಾಗಿತ್ತು. ನಾಯಕ ವಿರಾಟ್ ಕೊಹ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚೇತೇಶ್ವರ್ ಪೂಜಾರ ಅಂತಿಮ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ಸಮಾಧಾನ ನೀಡಿದೆ. ರಿಷಭ್ ಪಂತ್ ಕೂಡ ಓವಲ್ ಅಂಗಳದಲ್ಲಿ ಪ್ರದರ್ಶಿಸಿದ ಜವಾಬ್ಧಾರಿಯುವ ಪ್ರದರ್ಶನ ಭರವಸೆ ಮೂಡಿಸಿದೆ.

ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್

ಆದರೆ ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವುದು ತಂಡದ ಪಾಲಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಸರಣಿಯಲ್ಲಿ ಸಾಕಷ್ಟು ಭಾರಿ ಅಜಿಂಕ್ಯಾ ರಹಾನೆಯನ್ನು ಆಡುವ ಬಳಗದಿಂದ ಹೊರಗಿಡಬೇಕು ಎಂಬ ಒತ್ತಾಯ ಕೇಳಿ ಬಂದಿದ್ದರೂ ಮ್ಯಾನೇಜ್‌ಮೆಂಟ್ ರಹಾನೆ ಬೆನ್ನಿಗೆ ನಿಂತಿದೆ. ಇಂತಾ ಸಂದರ್ಭದಲ್ಲಿ ಜಹೀರ್ ಖಾನ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ ಮುಂದೆ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ಬೌಲರ್‌ಗಳನ್ನು ಬದಲಾಯಿಸಬಹುದಾದರೆ ಬ್ಯಾಟ್ಸ್‌ಮನ್ ಯಾಕಿಲ್ಲ

ಬೌಲರ್‌ಗಳನ್ನು ಬದಲಾಯಿಸಬಹುದಾದರೆ ಬ್ಯಾಟ್ಸ್‌ಮನ್ ಯಾಕಿಲ್ಲ

ನಾಲ್ಕನೇ ಟೆಸ್ಟ್ ಪಂದ್ಯದ ಅಂತ್ಯದ ಬಳಿಕ ಜಹೀರ್ ಖಾನ್ ಕ್ರಿಕ್‌ಬಜ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಬ್ಯಾಟಿಂಗ್‌ನಲ್ಲಿ ನಾನು ಒಂದೇ ಒಂದು ಬ್ಲಾವಣೆಯನ್ನು ಬಯಸುತ್ತಿದ್ದೇನೆ. ಆದರೆ ಬೌಲರ್‌ಗಳ ವಿಚಾರದಲ್ಲಿ ಬೌಲರ್‌ಗಳ ಮೇಲಿರುವ ಕೆಲಸದ ಒತ್ತಡವನ್ನು ಗಮನಿಸಬೇಕು. ತಂಡದ ಆಯ್ಕೆಯಲ್ಲಿ ನೀವು ಫಾರ್ಮ್ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದರ ಜೊತೆಗೆ ಪರಿಸ್ಥಿತಿಯನ್ನು ಕೂಡ ಗಮನಿಸಿಕೊಳ್ಳಬೇಕು. ಇಂತಾ ಹಂತದಲ್ಲಿ ನೀವು ಸರಣಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರಣಿಯಲ್ಲಿ ಗೆಲ್ಲಲುಬೇಕಾದ ಅಗತ್ಯವೇನಿದೆ ಅದಕ್ಕೆ ತಕ್ಕನಾದ ಬದಲಾವನೆ ಮಾಡಿಕೊಳ್ಳಬೇಕು. ಬೌಲರ್‌ಗಳನ್ನು ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾದರೆ ಬ್ಯಾಟ್ಸ್‌ಮನ್‌ಗಳನ್ನು ಯಾಕೆ ಸಾಧ್ಯವಿಲ್ಲ" ಎಂದು ಜಹೀರ್ ಖಾನ್ ಪ್ರಶ್ನಿಸಿದ್ದಾರೆ.

ಸತತ ವೈಫಲ್ಯದ ಮಧ್ಯೆಯೂ ಬೆನ್ನಿಗೆ ನಿಂತ ಮ್ಯಾನೇಜ್‌ಮೆಂಟ್

ಸತತ ವೈಫಲ್ಯದ ಮಧ್ಯೆಯೂ ಬೆನ್ನಿಗೆ ನಿಂತ ಮ್ಯಾನೇಜ್‌ಮೆಂಟ್

ಅಜಿಂಕ್ಯಾ ರಹಾನೆ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಮಾತ್ರವಲ್ಲ ಸುದೀರ್ಘ ಕಾಲದಿಂದ ಬ್ಯಾಟಿಂಗ್‌ನಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸಲ್ಲಿ ಒಂದು ಶತಕ ಗಳಿಸಿದ್ದು ಹೊರತುಪಡಿಸಿದರೆ ಅಂತಾ ಹೇಳಿಕೊಳ್ಳುವ ಪ್ರದರ್ಶನ ರಹಾನೆ ಬ್ಯಾಟ್‌ನಿಂದ ಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಕೇವಲ ಒಂದು ಅರ್ಧ ಶತಕದ ಮಾತ್ರವೇ ಸಿಡಿಸಲು ರಹಾನೆಗೆ ಸಾಧ್ಯವಾಗಿದೆ. ಇಂತಾ ಸಂದರ್ಭದಲ್ಲಿ ಕೆಲ ಪಂದ್ಯಗಳಲ್ಲಿ ವಿರಾಮ ನೀಡಿದರೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಬಹುದು ಎಂಬುದು ಕೆಲ ತಜ್ಞರ ಅಭಿಪ್ರಾಯ. ಹಾಗಿದ್ದರೂ ರಹಾನೆ ಸತತವಾಗಿ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸುತ್ತಿದ್ದಾರೆ.

Kohli ಅವರ ಈ celebration ಇಷ್ಟರ ಮಟ್ಟಿಗೆ ಚರ್ಚೆಗೆ ಗ್ರಾಸವಾಗಿದೆ | Oneindia Kannada
ಬೆಂಚ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಹೀರ್

ಬೆಂಚ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಹೀರ್

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೆಂಚ್ ಸಾಮರ್ಥ್ಯದ ಬಗ್ಗೆ ಜಹೀರ್ ಖಾನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ತಮಡದ ಆಟಗಾರರಲ್ಲಿ ಇರುವ ಆತ್ಮ ವಿಶ್ವಾಸ ಈ ತಂಡವನ್ನು ಅತ್ಯುತ್ತಮ ತಂಡವನ್ನಾಗಿಸಿದೆ ಎಂಬ ಅಭಿಪ್ರಾಯವನ್ನು ಜಹೀರ್ ವ್ಯಕ್ತಪಡಿಸಿದ್ದಾರೆ. "ಈ ತಂಡ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣದಿಂದಾಗಿ ದಿನೇ ಅದ್ಭುತ ಪ್ರದರ್ಶನ ನೀಡುತ್ತಾ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುತ್ತಿದೆ. ಬೆಂಚ್ ಸಾಮರ್ಥ್ಯವು ಕೂಡ ಅದ್ಭುತವಾಗಿದೆ. ಆಟಗಾರರು ತಮ್ಮ ಗುರಿ ಹಾಗೂ ಮಾಪನಗಳನ್ನು ಕೂಡ ಎತ್ತರಕ್ಕೆ ಏರಿಸಿಕೊಂಡಿದ್ದಾರೆ" ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

Story first published: Tuesday, September 7, 2021, 20:57 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X