ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸೆನಾ' ದೇಶಗಳಲ್ಲಿ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳು

IND vs ENG: List of Indian batsmen who scored most test runs in SENA countries

ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ 2 ಪಂದ್ಯಗಳು ಮುಗಿದಿದ್ದು ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಪಂದ್ಯ ಮಳೆಗೆ ಆಹುತಿಯಾಗುವ ವುದರ ಮೂಲಕ ಯಾವುದೇ ಫಲಿತಾಂಶ ಸಿಗದೇ ಡ್ರಾನಲ್ಲಿ ಅಂತ್ಯಗೊಂಡಿತು. ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸಿಕ ಹಿನ್ನೆಲೆ ಇರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 151 ರನ್‌ಗಳ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಪರ ಆಪತ್ಬಾಂಧವನಾಗಿ ನಿಂತ ಕನ್ನಡಿಗ ಕೆಎಲ್ ರಾಹುಲ್ 250 ಎಸೆತಗಳನ್ನು ಎದುರಿಸಿ 129 ರನ್ ಕಲೆ ಹಾಕುವುದರ ಮೂಲಕ ಎರಡನೇ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೀಗೆ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸಿದ ಕೆಎಲ್ ರಾಹುಲ್ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಶತಕ ಬಾರಿಸಿದ ಹತ್ತನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದ.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಆದರೆ ನಿರೀಕ್ಷಿಸಿದಂತೆ ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿಯಲ್ಲಿ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಹೌದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಯಶಸ್ಸಿನ ಹಾದಿಗೆ ಬರಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ 5 ಟೆಸ್ಟ್ ಪಂದ್ಯಗಳ ಪೈಕಿ ಇದುವರೆಗೂ ನಡೆದಿರುವ 2 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರುವುದು ಕೇವಲ 62 ರನ್ ಮಾತ್ರ. ಈ ಹಿಂದೆ ಸೆನಾ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳನ್ನು ಒಟ್ಟುಗೂಡಿಸಿ ಸೆನಾ ರಾಷ್ಟ್ರಗಳು ಎಂದು ಕರೆಯಲಾಗುತ್ತದೆ) ರಾಷ್ಟ್ರಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚುತ್ತಿದ್ದ ಕೊಹ್ಲಿ ಈ ಬಾರಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾಗಿದ್ದಾರೆ.

ಹಾಗಾದರೆ ಸೆನಾ ರಾಷ್ಟ್ರಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಅತಿಹೆಚ್ಚು ಟೆಸ್ಟ್ ರನ್ ಕಲೆ ಹಾಕಿರುವ ಭಾರತದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರೆಂಬ ಮಾಹಿತಿ ಮುಂದೆ ಇದೆ ಓದಿ..

5. ಸುನಿಲ್ ಗವಾಸ್ಕರ್

5. ಸುನಿಲ್ ಗವಾಸ್ಕರ್

ಸೆನಾ ರಾಷ್ಟ್ರಗಳಲ್ಲಿ ಒಟ್ಟು 33 ಪಂದ್ಯಗಳನ್ನಾಡಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ 2464 ರನ್ ಗಳಿಸುವುದರ ಮೂಲಕ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

4. ವಿವಿಎಸ್ ಲಕ್ಷ್ಮಣ್

4. ವಿವಿಎಸ್ ಲಕ್ಷ್ಮಣ್

2000-01ರಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ವಿವಿಎಸ್ ಲಕ್ಷ್ಮಣ್ 281 ರನ್ ಕಲೆಹಾಕಿ ಮಿಂಚಿದ್ದರು. ಸೆನಾ ರಾಷ್ಟ್ರಗಳಲ್ಲಿ ಒಟ್ಟು 41 ಪಂದ್ಯಗಳನ್ನಾಡಿರುವ ವಿವಿಎಸ್ ಲಕ್ಷ್ಮಣ್ 2710 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ 2710 ರನ್‌ಗಳು 15 ಅರ್ಧಶತಕ ಮತ್ತು 5 ಶತಕಗಳನ್ನೂ ಹೊಂದಿವೆ. ಹಾಗೂ 2710 ರನ್‌ಗಳ ಪೈಕಿ 1236 ರನ್‌ಗಳನ್ನು ವಿವಿಎಸ್ ಲಕ್ಷ್ಮಣ್ ಆಸ್ಟ್ರೇಲಿಯಾ ನೆಲದಲ್ಲಿಯೇ ಕಲೆ ಹಾಕಿದ್ದಾರೆ.

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

ಮೊದಲೇ ಹೇಳಿದ ಹಾಗೆ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮಂಕಾಗಿರಬಹುದು ಆದರೆ ಈ ಹಿಂದೆ ವಿರಾಟ್ ಕೊಹ್ಲಿ ಸೆನಾ ರಾಷ್ಟ್ರಗಳಲ್ಲಿ ಆಡಿರುವ ಹಲವಾರು ಪಂದ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಸೆನಾ ರಾಷ್ಟ್ರಗಳಲ್ಲಿ ಒಟ್ಟು 3008 ರನ್ ಸಿಡಿಸುವುದರ ಮೂಲಕ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಬಾರಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

2. ರಾಹುಲ್ ದ್ರಾವಿಡ್

2. ರಾಹುಲ್ ದ್ರಾವಿಡ್

ಬಹುತೇಕ ಟೆಸ್ಟ್ ಕ್ರಿಕೆಟ್ ದಾಖಲೆಗಳಲ್ಲಿ ರಾಹುಲ್ ದ್ರಾವಿಡ್ ಹೆಸರು ಇದ್ದೇ ಇರುತ್ತದೆ. ಸೆನಾ ದೇಶಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆಯಲ್ಲಿಯೂ ಸಹ ರಾಹುಲ್ ದ್ರಾವಿಡ್ ಹೆಸರಿದ್ದು ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಸೆನಾ ರಾಷ್ಟ್ರಗಳಲ್ಲಿ 46 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್ 3909 ರನ್ ಬಾರಿಸಿದ್ದು ಇದರಲ್ಲಿ 17 ಅರ್ಧಶತಕ ಮತ್ತು 10 ಶತಕಗಳೂ ಸೇರಿವೆ.

1. ಸಚಿನ್ ತೆಂಡೂಲ್ಕರ್

1. ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ದಾಖಲೆಯ ರನ್ ಬಾರಿಸದ ದೇಶವೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಸೆನಾ ರಾಷ್ಟ್ರಗಳಲ್ಲಿ ಒಟ್ಟು 63 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 5387 ರನ್ ಬಾರಿಸುವುದರ ಮೂಲಕ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಸೆನಾ ರಾಷ್ಟ್ರಗಳಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 17 ಶತಕ ಮತ್ತು 23 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Story first published: Thursday, August 19, 2021, 14:35 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X