ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng; 5ನೇ ಟೆಸ್ಟ್‌ನಿಂದ ರೋಹಿತ್ ಶರ್ಮಾ ಔಟ್; ಭಾರತವನ್ನು ಮುನ್ನಡೆಸಲಿದ್ದಾರೆ ಈ ವೇಗಿ

Ind vs Eng; Rohit Sharma Ruled-out From 5th Test; Jasprit Bumrah Is Going To Lead Team India

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಈವರೆಗೂ ನೆಗೆಟಿವ್ ವರದಿ ಬರದ ಕಾರಣ ಜುಲೈ 1ರಂದು ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಎಎನ್‌ಐ ಮೂಲಗಳ ಪ್ರಕಾರ ಭಾರತ ತಂಡದ ಮ್ಯಾನೇಜ್‌ಮೆಂಟ್ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ರೋಹಿತ್ ಶರ್ಮಾ ಅವರು ಕೋವಿಡ್ -19 ನಿಂದ ಬಳಲುತ್ತಿದ್ದ ನಂತರ, ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತವನ್ನು ಮುನ್ನಡೆಸಬಹುದು ಎಂಬ ಮಾತುಕತೆಗಳು ನಡೆದಿದ್ದವು.

Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?

ಭಾರತ ತಂಡಕ್ಕಾಗಿ ಎಲ್ಲಾ 3 ಮಾದರಿಗಳನ್ನು ಆಡಿರುವ ರಿಷಭ್ ಪಂತ್ ಅವರು ಈಗ ಸಾಕಷ್ಟು ಅನುಭವವನ್ನು ಹೊಂದಿರುವುದರಿಂದ ಭಾರತ ತಂಡವನ್ನು ಸಹ ಮುನ್ನಡೆಸಬಹುದು ಎಂದು ಕೆಲವರು ಭಾವಿಸಿದ್ದರು. ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್‌ಮೆಂಟ್ ಜಸ್ಪ್ರೀತ್ ಬುಮ್ರಾ ಮುನ್ನಡೆಸಬೇಕು ಎಂದು ಅಂತಿಮ ಮುದ್ರೆ ಒತ್ತಿದರು. ಕಪಿಲ್ ದೇವ್ ಬಳಿಕ ಭಾರತದ ವೇಗಿಯೊಬ್ಬರು ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.

ಎಲ್ಲಾ 3 ಮಾದರಿಗಳನ್ನು ಆಡಿರುವ ರಿಷಭ್ ಪಂತ್‌ಗೆ ಅನುಭವ

ಎಲ್ಲಾ 3 ಮಾದರಿಗಳನ್ನು ಆಡಿರುವ ರಿಷಭ್ ಪಂತ್‌ಗೆ ಅನುಭವ

ಭಾರತ ತಂಡಕ್ಕಾಗಿ ಎಲ್ಲಾ 3 ಮಾದರಿಗಳನ್ನು ಆಡಿರುವ ರಿಷಭ್ ಪಂತ್ ಅವರು ಈಗ ಸಾಕಷ್ಟು ಅನುಭವವನ್ನು ಹೊಂದಿರುವುದರಿಂದ ಭಾರತ ತಂಡವನ್ನು ಸಹ ಮುನ್ನಡೆಸಬಹುದು ಎಂದು ಕೆಲವರು ಭಾವಿಸಿದ್ದರು. ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್‌ಮೆಂಟ್ ಜಸ್ಪ್ರೀತ್ ಬುಮ್ರಾ ಮುನ್ನಡೆಸಬೇಕು ಎಂದು ಅಂತಿಮ ಮುದ್ರೆ ಒತ್ತಿದರು. ಕಪಿಲ್ ದೇವ್ ಬಳಿಕ ಭಾರತದ ವೇಗಿಯೊಬ್ಬರು ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.

ಐದು ಪಂದ್ಯಗಳ ಸರಣಿಯಲ್ಲಿ ಕಳೆದ ವರ್ಷ 2-1 ಮುನ್ನಡೆ ಸಾಧಿಸಿರುವ ಭಾರತಕ್ಕೆ ಇದು ಅತ್ಯಂತ ಮಹತ್ವದ ಟೆಸ್ಟ್ ಆಗಿದೆ. ಈ ಮೊದಲು ಭಾರತೀಯ ಶಿಬಿರದಲ್ಲಿ ಸರಣಿ ಕೋವಿಡ್-ಪಾಸಿಟಿವ್‌ಗಳು ಕಂಡುಬಂದ ನಂತರ ಕೊನೆಯ ಟೆಸ್ಟ್ ಅನ್ನು ಜುಲೈ 2022ಕ್ಕೆ ಮುಂದೂಡಲಾಯಿತು. ಭಾರತವು ಟೆಸ್ಟ್ ಪಂದ್ಯವನ್ನು ಡ್ರಾ ಅಥವಾ ಗೆಲ್ಲಲು ಯಶಸ್ವಿಯಾದರೆ, ರಾಹುಲ್ ದ್ರಾವಿಡ್ ನಾಯಕತ್ವದ 2007-08ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಸರಣಿಯನ್ನು ಗೆದ್ದಂತಾಗುತ್ತದೆ. ಈಗ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಆಗ ಸರಣಿ ಗೆದ್ದಿದ್ದರು.

ಭಾರತ ಖಂಡಿತವಾಗಿಯೂ ಗೆಲ್ಲುವ ಫೇವರಿಟ್ ಅಲ್ಲ

ಭಾರತ ಖಂಡಿತವಾಗಿಯೂ ಗೆಲ್ಲುವ ಫೇವರಿಟ್ ಅಲ್ಲ

ತವರಿನಲ್ಲಿ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವಿನ ಹಿನ್ನಲೆಯಿಂದ ಇಂಗ್ಲೆಂಡ್ ತಂಡವು ಬರುತ್ತಿರುವ ಕಾರಣ ಭಾರತಕ್ಕೆ ಗೆಲುವು ಸುಲಭವಲ್ಲ. ಇಂಗ್ಲೆಂಡ್ ಹೊಸ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅಡಿಯಲ್ಲಿ ಅವರು ಹೊಸ ಬ್ರಾಂಡ್ ಕ್ರಿಕೆಟ್ ಮತ್ತು ಆಕ್ರಮಣಕಾರಿ ಆಟವನ್ನು ಆಡುತ್ತಿದ್ದಾರೆ. ಅವರನ್ನು ನಿಭಾಯಿಸಲು ಭಾರತವು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ.

ಪ್ರಸ್ತುತ ಈ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದರೂ ಭಾರತ ಖಂಡಿತವಾಗಿಯೂ ಗೆಲ್ಲುವ ಫೇವರಿಟ್ ಅಲ್ಲ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಇಲ್ಲದ ಕಾರಣ, ಭಾರತ ತಂಡವನ್ನು ಯಶಸ್ವಿಯಾಗಿ ಜವಾಬ್ದಾರಿ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ಅವರ ಮೇಲಿದೆ. ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಪಂದ್ಯದ ಹೊರತಾಗಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಸಹ ಆಡಲಿದೆ.

ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ 36ನೇ ಕ್ರಿಕೆಟಿಗ

ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ 36ನೇ ಕ್ರಿಕೆಟಿಗ

ಜಸ್ಪ್ರೀತ್ ಬುಮ್ರಾ 1932ರಲ್ಲಿ ದೇಶವು ಮೊದಲು ಟೆಸ್ಟ್ ಆಡಿದ ನಂತರ ಭಾರತವನ್ನು ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಮುನ್ನಡೆಸುತ್ತಿರುವ 36ನೇ ಕ್ರಿಕೆಟಿಗನಾಗಲಿದ್ದಾರೆ. ಗುಜರಾತ್ ವೇಗಿ ಜಸ್ಪ್ರೀತ್ ಬುಮ್ರಾ 29 ಟೆಸ್ಟ್‌ಗಳಲ್ಲಿ 123 ವಿಕೆಟ್‌ಗಳನ್ನು ಹೊಂದಿದ್ದು, ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಾಗಿ ಬೆಳೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಈ ಹಿಂದೆ ಭಾರತ ತಂಡವನ್ನು ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ತವರಿನಲ್ಲಿ ಗೆದ್ದುಕೊಂಡಿದ್ದರು.

ಪೂಜಾರ ಅಥವಾ ವಿಹಾರಿ ಶುಭ್‌ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭ

ಪೂಜಾರ ಅಥವಾ ವಿಹಾರಿ ಶುಭ್‌ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭ

ಅನುಭವಿ ರೋಹಿತ್ ಶರ್ಮಾ ಆಡುವ ಹನ್ನೊಂದರಿಂದ ಹೊರಗುಳಿದಿದ್ದು, ಅನುಭವಿ ಚೇತೇಶ್ವರ ಪೂಜಾರ ಅವರು ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರೊಂದಿಗೆ ಬ್ಯಾಟಿಂಗ್ ತೆರೆಯಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಮಾಯಾಂಕ್ ಅಗರ್ವಾಲ್ ಅವರನ್ನು ಕೇವಲ "ಕವರ್' ಆಗಿ ತರಲಾಗಿದೆ ಮತ್ತು ಪ್ಲೇಯಿಂಗ್ ಹನ್ನೊಂದರಲ್ಲಿ ಒಳಗೊಂಡಿರುವ ವಿಷಯಗಳ ಯೋಜನೆಯಲ್ಲಿಲ್ಲ ಎಂದು ಮೂಲಗಳು ತಿಳಿಸಿವೆ.

"ಮಯಾಂಕ್ ಅಗರ್ವಾಲ್ ಇಲ್ಲಿ ಕೇವಲ ಕವರ್ ಆಗಿದ್ದಾರೆ. ಇದು ಪೂಜಾರ-ಗಿಲ್ ಕಾಂಬಿನೇಷನ್ ಬ್ಯಾಟಿಂಗ್ ತೆರೆಯುವ ಸಾಧ್ಯತೆಯಿದೆ. ಹನುಮ ವಿಹಾರಿ ಅವರು ಆಸ್ಟ್ರೇಲಿಯಾದಲ್ಲಿ ಸ್ಟಾಪ್-ಗ್ಯಾಪ್ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದರಿಂದ ಓಪನಿಂಗ್ ಮಾಡಲು ಅವಕಾಶವಿದೆ. ಚೇತೇಶ್ವರ ಪೂಜಾರ ಆರಂಭಿಕರಾಗುವ ಸಾಧ್ಯತೆಗಳು ಹೆಚ್ಚು," ಎಂದು ಹೇಳಲಾಗಿದೆ.

ಚೇತೇಶ್ವರ ಪೂಜಾರ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಿಹಾರಿ ಮತ್ತು ರಿಷಭ್ ಪಂತ್ ಸೆಟ್‌ಅಪ್‌ನಲ್ಲಿ ಸ್ಪೆಷಲಿಸ್ಟ್ ಬ್ಯಾಟರ್‌ಗಳಾಗಿದ್ದಾರೆ.

Story first published: Thursday, June 30, 2022, 9:39 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X