ಭಾರತ vs ಇಂಗ್ಲೆಂಡ್: ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿವೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಹೀಗೆ 3 ಟೆಸ್ಟ್ ಪಂದ್ಯಗಳು ಮುಗಿದ ಬಳಿಕ 1-1 ಸಮಬಲವನ್ನು ಸಾಧಿಸಿರುವ ಎರಡೂ ತಂಡಗಳು ಸದ್ಯ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿರತವಾಗಿವೆ.

'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

ಸೆಪ್ಟೆಂಬರ್ 2 ರ ಗುರುವಾರದಂದು ಲಂಡನ್ ನಗರದ ಓವೆಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿತು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳೇ ಕಳಪೆ ಪ್ರದರ್ಶನ ನೀಡುವುದರ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಆಸರೆಯಾದದ್ದು ಇಬ್ಬರು ಆಟಗಾರರು. ಹೌದು, ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ವಿಕೆಟ್ ಒಪ್ಪಿಸಿ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾದದ್ದು ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್.

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ 50 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿದರೆ, 6 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ 117 ರನ್ ಗಳಿಸಿದ್ದಾಗ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಅಬ್ಬರದ ಬ್ಯಾಟಿಂಗ್ ನಡೆಸಿ 36 ಎಸೆತಗಳಲ್ಲಿ 57 ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗಿ ವಿಕೆಟ್ ಒಪ್ಪಿಸಿದರು.

ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

31 ಎಸೆತಗಳಲ್ಲಿ 50 ರನ್ ಪೂರೈಸಿದ ಶಾರ್ದೂಲ್ ಠಾಕೂರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗವಾಗಿ ಅರ್ಧಶತಕ ಪೂರೈಸಿದ ಭಾರತದ ಎರಡನೇ ಆಟಗಾರ ಎಂಬ ದಾಖಲೆಯನ್ನು ಶಾರ್ದೂಲ್ ಠಾಕೂರ್ ತಮ್ಮ ಹೆಸರಿಗೆ ಬರೆದುಕೊಂಡರು.

ವಿರೇಂದ್ರ ಸೆಹ್ವಾಗ್ ಹಿಂದಿಕ್ಕಿದ ಶಾರ್ದೂಲ್ ಠಾಕೂರ್

ವಿರೇಂದ್ರ ಸೆಹ್ವಾಗ್ ಹಿಂದಿಕ್ಕಿದ ಶಾರ್ದೂಲ್ ಠಾಕೂರ್

36 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 57 ರನ್ ಚಚ್ಚಿದ ಶಾರ್ದೂಲ್ ಠಾಕೂರ್ ಅತಿ ವೇಗವಾಗಿ ಟೆಸ್ಟ್‌ ಅರ್ಧಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಈ ಮೂಲಕ ಈ ಹಿಂದೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ಈ ಸ್ಥಾನವನ್ನು ಶಾರ್ದೂಲ್ ಠಾಕೂರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‍ನಲ್ಲಿ 32 ಎಸೆತಗಳಿಗೆ ಅರ್ಧಶತಕ ಭಾರಿಸುವುದರ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಇದೀಗ 31 ಎಸೆತಗಳಿಗೆ ಟೆಸ್ಟ್ ಅರ್ಧಶತಕವನ್ನು ಬಾರಿಸಿರುವ ಶಾರ್ದೂಲ್ ಠಾಕೂರ್ ವೀರೇಂದ್ರ ಸೆಹ್ವಾಗ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿ ತಾವು ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.

ಅತಿ ವೇಗದ ಟೆಸ್ಟ್ ಅರ್ಧಶತಕ ಬಾರಿಸಿದ ಟಾಪ್ 3 ಭಾರತೀಯ ಆಟಗಾರರು

ಅತಿ ವೇಗದ ಟೆಸ್ಟ್ ಅರ್ಧಶತಕ ಬಾರಿಸಿದ ಟಾಪ್ 3 ಭಾರತೀಯ ಆಟಗಾರರು

ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ವೇಗವಾಗಿ ಅರ್ಧ ಶತಕವನ್ನು ಬಾರಿಸಿದ ಟಾಪ್ 3 ಭಾರತೀಯ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

1. ಕಪಿಲ್ ದೇವ್: ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅತಿ ವೇಗವಾಗಿ ಟೆಸ್ಟ್ ಅರ್ಧಶತಕ ಬಾರಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 1982 ರ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ 50 ರನ್ ಪೂರೈಸಿದ ಕಪಿಲ್ ದೇವ್ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

2. ಶಾರ್ದೂಲ್ ಠಾಕೂರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಸದ್ಯ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 31 ಎಸೆತಗಳಿಗೆ ಅರ್ಧಶತಕವನ್ನು ಪೂರೈಸಿದ ಶಾರ್ದೂಲ್ ಠಾಕೂರ್ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

3. ವಿರೇಂದ್ರ ಸೆಹ್ವಾಗ್: ಈ ಹಿಂದೆ 32 ಎಸೆತಗಳಿಗೆ ಟೆಸ್ಟ್ ಅರ್ಧಶತಕವನ್ನು ಬಾರಿಸಿದ್ದ ವಿರೇಂದ್ರ ಸೆಹ್ವಾಗ್ ಸದ್ಯ ಶಾರ್ದೂಲ್ ಠಾಕೂರ್ ದಾಖಲೆಯ ಬಳಿಕ ಅತಿ ವೇಗವಾಗಿ ಟೆಸ್ಟ್ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಮಿತ್‌ ಶಾ ಭೇಟಿಯಾಗದ ಬಿಎಸ್‌ವೈ! ಯಡಿಯೂರಪ್ಪರನ್ನ ಕಡೆಗಣಿಸಿತೇ ಹೈಕಮಾಂಡ್‌? | Oneindia Kannada
ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮೇಲುಗೈ

ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮೇಲುಗೈ

ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳ ಆಟ ಮುಕ್ತಾಯವಾಗಿದ್ದು ಎರಡೂ ತಂಡಗಳು ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿವೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 190 ರನ್‌ಗಳಿಗೆ ಆಲ್ ಔಟ್ ಆದರೆ, ನಂತರ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 290 ರನ್ ಗಳಿಸಿ ಮೊದಲನೇ ಇನ್ನಿಂಗ್ಸ್‌ನಲ್ಲಿ 100 ರನ್ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, September 4, 2021, 8:00 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X