ಕಳಪೆ ಪ್ರದರ್ಶನ ನೀಡಿದರೂ ಆ ಒಬ್ಬನಿಗೆ ತಂಡದಲ್ಲಿ ಸ್ಥಾನ; ನಾಲ್ಕನೇ ಟೆಸ್ಟ್‌ಗೆ ವಿವಿಎಸ್ ಲಕ್ಷ್ಮಣ್ ಸಲಹೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಬಹುನಿರೀಕ್ಷಿತ ನಾಲ್ಕನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 2ರಿಂದ ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈತನನ್ನು ಓವಲ್ ಟೆಸ್ಟ್‌ನಿಂದ ಕೈಬಿಟ್ಟರೆ ಭಾರತಕ್ಕೆ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಕನೇರಿಯಾಈತನನ್ನು ಓವಲ್ ಟೆಸ್ಟ್‌ನಿಂದ ಕೈಬಿಟ್ಟರೆ ಭಾರತಕ್ಕೆ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಕನೇರಿಯಾ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ ಒಂದೊಂದು ಪಂದ್ಯಗಳಲ್ಲಿ ಜಯ ಗಳಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿವೆ. ಹೌದು, ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಲಾರ್ಡ್ಸ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 76 ರನ್‌ಗಳ ಸರಣಿ ಗೆಲುವನ್ನು ಸಾಧಿಸಿ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿತು.

ಇಂಗ್ಲೆಂಡ್ ಬೌಲರ್‌ಗಳಿಗೆ ಇರುವಷ್ಟು ತಾಳ್ಮೆ ಕೊಹ್ಲಿಗಿಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗಇಂಗ್ಲೆಂಡ್ ಬೌಲರ್‌ಗಳಿಗೆ ಇರುವಷ್ಟು ತಾಳ್ಮೆ ಕೊಹ್ಲಿಗಿಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ

ಹೀಗೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಅಕ್ಷರಶಃ ಕಳಪೆ ಪ್ರದರ್ಶನವನ್ನು ನೀಡಿದ ಭಾರತದ ಕೆಲ ಆಟಗಾರರನ್ನು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈ ಬಿಡಬೇಕು ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿರುವ ಕೆಲವೊಂದಿಷ್ಟು ಕ್ರಿಕೆಟಿಗರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈ ಬಿಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಹಲವಾರು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೇಗಿರಬೇಕು ಎಂಬುದರ ಕುರಿತು ಮಾತನಾಡಿದ್ದು ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಓರ್ವ ಆಟಗಾರನನ್ನು ಯಾವುದೇ ಕಾರಣಕ್ಕೂ ತಂಡದಿಂದ ಕೈ ಬಿಡಬಾರದು ಎಂಬ ಅಭಿಪ್ರಾಯವನ್ನು ಈ ಕೆಳಕಂಡ ಹಾಗೆ ವ್ಯಕ್ತಪಡಿಸಿದ್ದಾರೆ..

ರಹಾನೆಯನ್ನು ತಂಡದಿಂದ ಕೈ ಬಿಡಬಾರದು ಎಂದ ಲಕ್ಷ್ಮಣ್

ರಹಾನೆಯನ್ನು ತಂಡದಿಂದ ಕೈ ಬಿಡಬಾರದು ಎಂದ ಲಕ್ಷ್ಮಣ್

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ 61 ಗಳಿಸಿದ್ದು ಬಿಟ್ಟರೆ ಇತ್ತೀಚಿನ ಬೇರೆ ಯಾವುದೇ ಪಂದ್ಯಗಳಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಆದರೂ ಸಹ ಅಜಿಂಕ್ಯ ರಹಾನೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಬೆನ್ನಿಗೆ ನಿಂತಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ BCCI ಬೇಜವಬ್ದಾರಿಯಿಂದ ನತದೃಷ್ಟರಾದ್ರು ಈ ಆಟಗಾರರು | Oneindia Kannada
ಆಸ್ಟ್ರೇಲಿಯಾ ಸರಣಿಯಲ್ಲಿ ರಹಾನೆ ಆಟ ಮರಿಯೋಕಾಗಲ್ಲ

ಆಸ್ಟ್ರೇಲಿಯಾ ಸರಣಿಯಲ್ಲಿ ರಹಾನೆ ಆಟ ಮರಿಯೋಕಾಗಲ್ಲ

ಇನ್ನೂ ಮುಂದುವರೆದು ಮಾತನಾಡಿದ ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾ ನೆಲದಲ್ಲಿ ನಾಯಕನಾಗಿ ಟೆಸ್ಟ್ ಸರಣಿ ಗೆಲ್ಲಿಸಿದ್ದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 36 ರನ್‌ಗೆ ಆಲ್ ಔಟ್ ಆದ ನಂತರದ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಶತಕ ಬಾರಿಸಿದ್ದನ್ನು ವಿವಿಎಸ್ ಲಕ್ಷ್ಮಣ್ ಶ್ಲಾಘಿಸಿದ್ದಾರೆ. ನಾಯಕನಾಗಿ ಆಸ್ಟ್ರೇಲಿಯಾ ನೆಲದಲ್ಲಿ ಅಜಿಂಕ್ಯ ರಹಾನೆ ಸರಣಿಯನ್ನು ಗೆಲ್ಲಿಸಿದ್ದನ್ನು ಹಾಡಿ ಹೊಗಳಿದ ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಮೇಲೆ ಇನ್ನೂ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಅಧಿಕ ಬ್ಯಾಟ್ಸ್‌ಮನ್‌ನ ಅಗತ್ಯತೆಯಿದೆ

ಅಧಿಕ ಬ್ಯಾಟ್ಸ್‌ಮನ್‌ನ ಅಗತ್ಯತೆಯಿದೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದು ಬ್ಯಾಟಿಂಗ್ ವಿಭಾಗ, ಹೀಗಾಗಿ ಮಧ್ಯಮ ಕ್ರಮಾಂಕದ ಜತೆಗೆ ಓರ್ವ ಅಧಿಕ ಬ್ಯಾಟ್ಸ್‌ಮನ್‌ನ ಅಗತ್ಯತೆ ತಂಡಕ್ಕಿದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 2, 2021, 8:49 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X