ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದಾನೆ: ಟೀಮ್ ಇಂಡಿಯಾ ಆಟಗಾರನ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗನ ಮಾತು

IND vs NZ: Danish Kaneria said Indian young pacer Arshdeep Singh totally out of form

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 21 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಪ್ರವಾಸಿ ನ್ಯೂಜಿಲೆಂಡ್ ಈ ಸರಣಿಯಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ನೀರಸ ಪ್ರದರ್ಶನ ನೀಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದ ಯಹುವ ವೇಗಿ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿರುವು,ದು ಸ್ಪಷ್ಟವಾಗಿದೆ ಎಂದಿದ್ದಾರೆ.

ಪಾಕ್ ಮಾಜಿ ಸ್ಪಿನ್ನರ್ ದಾನಿಶ್ ಕನೆರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕನೆರಿಯಾ, ಅರ್ಷ್‌ದೀಪ್ ಸಿಂಗ್ ಫಾರ್ಮ್ ಕಳೆದುಕೊಂಡಿರುವಂತೆ ಕಾಣಿಸುತ್ತಿದ್ದಾರೆ ಮತ್ತು ತಮಗೆ ಪೂರಕವಾಗಿರುವ ಪಿಚ್ ದೊರೆತಿದ್ದರೂ ತಮ್ಮ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.

Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆWomen's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ

"ಅರ್ಷ್‌ದೀಪ್ ಸಿಂಗ್ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದಾರೆ, ಆತ ಲಯವನ್ನು ಕಂಡುಕೊಳ್ಳಲು ವಿಫಲವಾಗಿದ್ದಾರೆ. ಸಾಮಾನ್ಯವಾಗಿ ಆತ ಎರಡು ಕಡೆಗೂ ಸ್ವಿಂಗ್ ಮಾಡುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಸಂಪೂರ್ಣವಾಗಿ ಅವರು ಉತ್ತಮವಾದ ಪಿಚ್ ಕಂಡೀಶನ್ ಇದ್ದರು ಕೂಡ ಅದರ ಉಪಯೋಗ ಪಡೆಯಲು ಸಾಧ್ಯವಾಗಿಲ್ಲ" ಎಂದಿದ್ದಾರೆ ದಾನಿಶ್ ಕನೆರಿಯಾ

ವಾಶಿಂಗ್ಟನ್ ಸುಂದರ್ ಬಗ್ಗೆ ಮೆಚ್ಚುಗೆಯ ಮಾತು

ವಾಶಿಂಗ್ಟನ್ ಸುಂದರ್ ಬಗ್ಗೆ ಮೆಚ್ಚುಗೆಯ ಮಾತು

ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಕನೆರಿಯಾ. "ವಾಶಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಅದ್ಭುತವಾಗಿದ್ದರು, ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದ್ದಾರೆ. ಆದರೆ ಆ ಮೇಲುಗೈಯನ್ನು ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ಹೊಸ ಚೆಂಡಿನಲ್ಲಿ ತಾನು ಬೌಲಿಂಗ್ ನಡೆಸುವುದಕ್ಕಿಂತ ಸುಂದರ್‌ಗೆ ನೀಡಬಹುದಾಗಿತ್ತು. ಆತ ಲೈನ್ ಹಾಗೂ ಲೆಂತ್‌ನಲ್ಲಿಯೂ ಅದ್ಭುತವಾಗಿದ್ದರು" ಎಂದಿದ್ದಾರೆ ದಾನಿಶ್ ಕನೆರಿಯಾ.

ಹಾರ್ದಿಕ್ ನಾಯಕತ್ವದ ಬಗ್ಗೆಯೂ ಮಾತು

ಹಾರ್ದಿಕ್ ನಾಯಕತ್ವದ ಬಗ್ಗೆಯೂ ಮಾತು

"ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆಯೂ ಕನೆರಿಯಾ ಕೆಲ ಮಾತುಗಳನ್ನಾಡಿದ್ದಾರೆ. "ಬೌಲರ್‌ಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ಚಾಣಾಕ್ಷ ಎಂದು ಅನಿಸುವುದಿಲ್ಲ. ಆತ ಶಿವಂ ಮಾವಿ ಅವರನ್ನು ಬಹಳ ತಡವಾಗಿ ದಾಳಿಗಿಳಿಸಿದರು. ಆತ ಬೇಗನೆ ದಾಳಿಗೆ ಇಳಿಯಬೇಕಾಗಿತ್ತು. ದೀಪಕ್ ಹೂಡಾ ಅವರನ್ನು ಕೂಡ ಹೆಚ್ಚು ಬಳಸಿಕೊಳ್ಳಬಹುದಾಗಿತ್ತು. ಯಾಕೆಂದರೆ ಇಲ್ಲಿ ಬಹಳಷ್ಟು ತಿರುವು ಪಡೆಯುತ್ತಿತ್ತು. ಈ ವಿಚಾರದಲ್ಲಿ ಹಾರ್ದಿಕ್ ರಣತಂತ್ರದಲ್ಲಿ ಹಿಂದುಳಿದರು" ಎಂದಿದ್ದಾರೆ ದಾನಿಶ್ ಕನೆರಿಯಾ.

ಭಾರತದ ಬೌಲಿಂಗ್ ಬಗ್ಗೆ ಟೀಕೆ

ಭಾರತದ ಬೌಲಿಂಗ್ ಬಗ್ಗೆ ಟೀಕೆ

ಇನ್ನು ಭಾರತದ ಬೌಲರ್‌ಗಳು ಪಿಚ್‌ನ ಲಾಭವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ವಿಫಲವಾದರು ಎಂಬುದಾಗಿಯೂ ಕನೆರಿಯಾ ಹೇಳಿದ್ದಾರೆ. "ಭಾರತದ ಬೌಲರ್‌ಗಳು ಸಾಕಷ್ಟು ರನ್ ಬಿಟ್ಟುಕೊಟ್ಟರು. ಹಾರ್ದಿಕ್ ಹೊಸ ಚೆಂಡಿನಲ್ಲಿ ಉತ್ತಮವಾಗಿ ಬೌಲಿಂಗ್ ನಡೆಸಲು ವಿಫಲವಾದರು. ಈ ಸಂದರ್ಭದಲ್ಲಿ ಕಿವೀಸ್ ಬ್ಯಾಟರ್‌ಗಳಾದ ಡೆವೋನ್ ಕಾನ್ವೆ ಹಾಗೂ ಫಿನ್ ಅಲೆನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇವರಿಬ್ಬರು ಕೂಡ ಆರಂಬದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದರು" ಎಂದಿದ್ದಾರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ.

Story first published: Saturday, January 28, 2023, 18:17 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X