ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ

IND vs NZ: Next 2 Matches Are Crucial For Ishan Kishan Says Dinesh Karthik

ಭಾನುವಾರ, ಜನವರಿ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ 2ನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಪಂದ್ಯ ಸೋತಿದ್ದರಿಂದ ಆತಿಥೇಯ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 21 ರನ್‌ಗಳಿಂದ ಸೋತಿತು. ಇದೀಗ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಡಬೇಕೆಂದರೆ, ಎರಡನೇ ಪಂದ್ಯವನ್ನು ಗೆಲ್ಲಬೇಕಿದೆ.

KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!

ಮೊದಲ ಪಂದ್ಯದಲ್ಲಿ ಭಾರತದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರ ಆರಂಭಿಕ ಜೋಡಿ ದೊಡ್ಡ ನಿರಾಸೆ ಮೂಡಿಸಿತು. ಈ ಇಬ್ಬರು ಆಟಗಾರರು ಅತ್ಯಂತ ಕಳಪೆಯಾಗಿ ವಿಕೆಟ್ ಒಪ್ಪಿಸಿದರು.

ಟಿ20 ತಂಡದಲ್ಲಿ ಇಶಾನ್ ಕಿಶನ್‌ ಅವರ ಸಮಯ ಮೀರುತ್ತಿದೆ

ಟಿ20 ತಂಡದಲ್ಲಿ ಇಶಾನ್ ಕಿಶನ್‌ ಅವರ ಸಮಯ ಮೀರುತ್ತಿದೆ

ಇದೀಗ ಭಾರತ ಟಿ20 ತಂಡದಲ್ಲಿ ಇಶಾನ್ ಕಿಶನ್‌ ಅವರ ಸಮಯ ಮೀರುತ್ತಿದೆ ಎಂದು ಭಾರತೀಯ ಹಿರಿಯ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಏಕದಿನ ಸ್ವರೂಪದಲ್ಲಿ ಭಾರತದ ಪರ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್ ಕಳೆದ 11 ಟಿ20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.

ಎರಡನೇ ಟಿ20 ಪಂದ್ಯದ ಮೊದಲು ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್, ಇಶಾನ್ ಕಿಶನ್‌ಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಳೆದ 11 ಪಂದ್ಯಗಳಲ್ಲಿ ಕಿಶನ್ ಅರ್ಧಶತಕ ಗಳಿಸಿಲ್ಲ

ಕಳೆದ 11 ಪಂದ್ಯಗಳಲ್ಲಿ ಕಿಶನ್ ಅರ್ಧಶತಕ ಗಳಿಸಿಲ್ಲ

"ಹೆಚ್ಚಿನ ಪಂದ್ಯಗಳನ್ನು ಆಡಿಯೂ ಅರ್ಧಶತಕ ಗಳಿಸದ ಒಬ್ಬ ಆಟಗಾರ ಇಶಾನ್ ಕಿಶನ್. ಕಳೆದ 11 ಪಂದ್ಯಗಳಲ್ಲಿ ಅವರು ಅರ್ಧಶತಕ ಗಳಿಸಿಲ್ಲ. ಅವರು ಎಲ್ಲಾ ಪಂದ್ಯಗಳಲ್ಲಿ ಇನ್ನಿಂಗ್ಸ್ ತೆರೆದಿದ್ದಾರೆ ಮತ್ತು ವಿಶೇಷವಾಗಿ ಏಷ್ಯಾದಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ," ಎಂದಿ ದಿನೇಶ್ ಕಾರ್ತಿಕ್ ತಿಳಿಸಿದರು.

"ನ್ಯೂಜಿಲೆಂಡ್ ವಿರುದ್ಧದ ಮುಂದಿನ ಎರಡು ಪಂದ್ಯಗಳು ಇಶಾನ್ ಕಿಆನ್‌ಗೆ ದೊಡ್ಡ ರನ್ ಗಳಿಸಲು ಮತ್ತು ಅವರು ಆಡುವ 11ರ ಬಳಗದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಲಿದೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.

ದಿನೇಶ್ ಕಾರ್ತಿಕ್ ಏಕದಿನ ಸ್ವರೂಪದಲ್ಲಿ ಉತ್ತಮವಾಗಿ ಆಟವಾಡಿದ್ದಾರೆ

ದಿನೇಶ್ ಕಾರ್ತಿಕ್ ಏಕದಿನ ಸ್ವರೂಪದಲ್ಲಿ ಉತ್ತಮವಾಗಿ ಆಟವಾಡಿದ್ದಾರೆ

ಇಶಾನ್ ಕಿಶನ್ ಏಕದಿನ ಸ್ವರೂಪದಲ್ಲಿ ಉತ್ತಮವಾಗಿ ಆಟವಾಡಿದ್ದಾರೆ ಎಂದು ಹೇಳಿದ ದಿನೇಶ್ ಕಾರ್ತಿಕ್, "ಕಿಶನ್ 50-ಓವರ್‌ಗಳ ಆಟದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದಾನೆ," ಎಂದು ಕಾರ್ತಿಕ್ ಹೇಳಿದರು.

"ಇಶಾನ ಕಿಶನ್ ತಮಗೆ ಸಿಕ್ಕಿರುವ ಕನಿಷ್ಠ ಏಕದಿನ ಕ್ರಿಕೆಟ್‌ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಶಾನ್ ಕಿಶನ್ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದಾರೆ," ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟರು.

18 ತಿಂಗಳ ನಂತರ ಪೃಥ್ವಿ ಶಾ ಭಾರತ ತಂಡಕ್ಕೆ ಬರುವುದರೊಂದಿಗೆ ಭಾರತಕ್ಕೆ ಆರಂಭಿಕ ಪ್ರಮಾಂಕದಲ್ಲಿ ಆಯ್ಕೆಗಳಿವೆ. ಪೃಥ್ವಿ ಶಾ ದೇಶೀಯ ಟೂರ್ನಿಯಲ್ಲಿ ಆಕ್ರಮಣಕಾರಿ ಆಟವಾಡಿದ್ದಾರೆ. ವೈಟ್ ಬಾಲ್ ಜೊತೆಗೆ ರೆಡ್ ಬಾಲ್ ಪಂದ್ಯಗಳಲ್ಲಿಯೂ ವೇಗವಾಗಿ ರನ್ ಗಳಿಸಿದ್ದಾರೆ.

2ನೇ ಟಿ20 ಪಂದ್ಯದಲ್ಲಿ ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

2ನೇ ಟಿ20 ಪಂದ್ಯದಲ್ಲಿ ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

Story first published: Sunday, January 29, 2023, 16:19 [IST]
Other articles published on Jan 29, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X