ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್‌ನಿಂದ ಯಾರೂ ನಿರೀಕ್ಷಿಸದ ಉತ್ತರ ಪಡೆದ ಸೂರ್ಯಕುಮಾರ್; ಪೋಸ್ಟ್ ವೈರಲ್

 IND vs NZ: Suryakumar Yadav Gets Surprising Answer From Australia Women Cricketer; Post Goes Viral

ಭಾರತ ತಂಡದ ಅಗ್ರಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಕಡಿಮೆ ಸಮಯದಲ್ಲಿ ದೊಡ್ಡ ಹೆಸರು ಮಾಡಿದ ಆಟಗಾರ. ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಐಸಿಸಿ ಟಿ20 ನಂ.1 ಬ್ಯಾಟ್ಸ್‌ಮನ್ ಆಗಿ ರೂಪುಗೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದರೂ, ನಾಲ್ಕನೇ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ವೈಯಕ್ತಿಕವಾಗಿ ಟೂರ್ನಿಯ ಸ್ಟಾರ್ ಆಗಿ ಮಿಂಚಿದರು.

IND vs NZ: ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತದ ಫೀಲ್ಡಿಂಗ್ ಕೋಚ್ ಆಗಿ ಮುನಿಶ್ ಬಾಲಿ ನೇಮಕIND vs NZ: ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತದ ಫೀಲ್ಡಿಂಗ್ ಕೋಚ್ ಆಗಿ ಮುನಿಶ್ ಬಾಲಿ ನೇಮಕ

ಸೂರ್ಯಕುಮಾರ್ ಯಾದವ್ ಇದೀಗ ನವೆಂಬರ್ 18ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದ ಭಾಗವಾಗಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ನ್ಯೂಜಿಲೆಂಡ್‌ನ ರಾಜಧಾನಿ ವೆಲ್ಲಿಂಗ್ಟನ್‌ಗೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು ಮತ್ತು ಟ್ವಿಟ್ಟರ್‌ನಲ್ಲಿ ಅನಿರೀಕ್ಷಿತ ವ್ಯಕ್ತಿಯಿಂದ ಆಶ್ಚರ್ಯಕರ ಉತ್ತರವನ್ನು ಪಡೆದರು.

'ಹಲೋ ವೆಲ್ಲಿಂಗ್ಟನ್' ಎಂದ ಸೂರ್ಯಕುಮಾರ್ ಯಾದವ್

ವೆಲ್ಲಿಂಗ್ಟನ್‌ಗೆ ಬಂದಿಳಿದ ನಂತರ ಸೂರ್ಯಕುಮಾರ್ ಯಾದವ್ ಟ್ವಿಟ್ಟರ್‌ನಲ್ಲಿ 'ಹಲೋ ವೆಲ್ಲಿಂಗ್ಟನ್' ಎಂದು ನಗುವಿನ ಇಮೋಜಿ ಜೊತೆ ಪೋಸ್ಟ್ ಹಾಕಿದರು.

ಇದಕ್ಕೆ ಆಸ್ಟ್ರೇಲಿಯಾ ತಂಡದ ಮಹಿಳಾ ಕ್ರಿಕೆಟರ್ ಅಮಂಡಾ-ಜಡೆ ವೆಲ್ಲಿಂಗ್ಟನ್ ನಗುವಿನ ಇಮೋಜಿಯೊಂದಿಗೆ 'ಹಲೋ ಯಾದವ್' ಎಂದು ಉತ್ತರಿಸಿದ್ದಾಳೆ. 25 ವರ್ಷ ವಯಸ್ಸಿನ ಆಸೀಸ್ ಲೆಗ್ ಸ್ಪಿನ್ನರ್ ವೆಲ್ಲಿಂಗ್ಟನ್ ಅವರ ಪೋಸ್ಟ್ ಶೀಘ್ರದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಭಾರತೀಯ ಕ್ರಿಕೆಟ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ ಮತ್ತು ಆಶ್ಚರ್ಯಕರ ವ್ಯಕ್ತಿಯಿಂದ ಬಂದ ಉತ್ತರ ನೋಡಿ ನಕ್ಕಿದ್ದಾರೆ.

ಅಮಂಡಾ-ಜಡೆ ವೆಲ್ಲಿಂಗ್ಟನ್ ಯಾರು?

ಅಮಂಡಾ-ಜಡೆ ವೆಲ್ಲಿಂಗ್ಟನ್ ಯಾರು?

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಲಗೈ ಬ್ಯಾಟರ್ ಮತ್ತು ಬಲಗೈ ಲೆಗ್-ಸ್ಪಿನ್ನರ್ ಆಗಿರುವ ಅಮಂಡಾ-ಜಡೆ ವೆಲ್ಲಿಂಗ್ಟನ್ ಅವರು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಜನಿಸಿದರು. ವೆಲ್ಲಿಂಗ್ಟನ್ ಆಸ್ಟ್ರೇಲಿಯಾ ಮಹಿಳಾ ತಂಡದ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುತ್ತಿದ್ದು, ಈವರೆಗೆ 13 ಏಕದಿನ, 8 ಟಿ20 ಮತ್ತು ಏಕೈಕ ಟೆಸ್ಟ ಪಂದ್ಯವಾಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅಮಂಡಾ-ಜಡೆ ವೆಲ್ಲಿಂಗ್ಟನ್ ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನಲ್ಲಿ ಸೌತ್ ಆಸ್ಟ್ರೇಲಿಯನ್ ಸ್ಕಾರ್ಪಿಯಾನ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನಿಂಗ್ ದಿಗ್ಗಜ ಶೇನ್ ವಾರ್ನ್ ಅವರಿಂದ ಅಮಂಡಾ-ಜಡೆ ವೆಲ್ಲಿಂಗ್ಟನ್ ಸ್ಫೂರ್ತಿ ಪಡೆದಿದ್ದಾಳೆ.

6 ಪಂದ್ಯಗಳಿಂದ 239 ರನ್‌ ಗಳಿಸಿರುವ ಸೂರ್ಯಕುಮಾರ್ ಯಾದವ್

6 ಪಂದ್ಯಗಳಿಂದ 239 ರನ್‌ ಗಳಿಸಿರುವ ಸೂರ್ಯಕುಮಾರ್ ಯಾದವ್

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 18, 20 ಮತ್ತು 22ರಂದು ನಡೆಯುವ ಮೂರು ಟಿ20 ಪಂದ್ಯಗಳಿಗಾಗಿ ಪ್ರವಾಸಕ್ಕೆ ತೆರಳಿದ್ದು, ಸೂರ್ಯಕುಮಾರ್ ಯಾದವ್ ಸದ್ಯ ವೆಲ್ಲಿಂಗ್ಟನ್‌ನಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್‌ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, 6 ಪಂದ್ಯಗಳಿಂದ 239 ರನ್‌ಗಳೊಂದಿಗೆ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಅವರು ಮೂರು ಅರ್ಧಶತಕ ಬಾರಿಸಿದ್ದಾರೆ.

Story first published: Monday, November 14, 2022, 14:00 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X