ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ವಿರಾಟ್ ಕೊಹ್ಲಿಯ ಈ ಟಿ20 ದಾಖಲೆ ಮುರಿಯಲು ಸೂರ್ಯಕುಮಾರ್‌ಗಿದೆ ಅದ್ಭುತ ಅವಕಾಶ

IND vs NZ: Suryakumar Yadav Has A Big Chance To Break Virat Kohlis This T20 Record

ಯುವ ಆಟಗಾರರಿಂದ ಕೂಡಿದ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಅಲ್ಲಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಗುರುವಾರ (ನವೆಂಬರ್ 18) ರಂದು ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭವಾಗುವ ಟಿ20 ಸರಣಿಯಲ್ಲಿ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಟಿ20 ದಾಖಲೆ ಮುರಿಯಲು ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ಗೆ ಅತ್ಯುತ್ತಮ ಅವಕಾಶವಿದೆ.

IPL 2023: ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ನೇಮಕIPL 2023: ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ನೇಮಕ

2016ರಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತುಂಗದಲ್ಲಿದ್ದ ವಿರಾಟ್ ಕೊಹ್ಲಿ 31 ಪಂದ್ಯಗಳಿಂದ 89.66ರ ಸರಾಸರಿ ಮತ್ತು 147.14 ಸ್ಟ್ರೈಕ್ ರೇಟ್‌ನಲ್ಲಿ 1614 ರನ್ ಗಳಿಸಿದರು. ಅದೇ ವರ್ಷ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರವಾಗಿ ಒಂದೇ ಋತುವಿನಲ್ಲಿ ನಾಲ್ಕು ಟಿ20 ಶತಕಗಳು ಒಳಗೊಂಡಂತೆ 973 ರನ್ ಗಳಿಸಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಮೊದಲ ಭಾರತೀಯ

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಮೊದಲ ಭಾರತೀಯ

2016ರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಈ ರನ್‌ಗಳು ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇನ್ನು ಸಾರ್ವಕಾಲಿಕ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (2 ಬಾರಿ), ಬಾಬರ್ ಅಜಂ, ಅಲೆಕ್ಸ್ ಹೇಲ್ಸ್, ಕ್ರಿಸ್ ಗೇಲ್ ಮತ್ತು ಶಾನ್ ಮಸೂದ್ ನಂತರ ಏಳನೇ ಸ್ಥಾನದಲ್ಲಿ ದೆಹಲಿ ಮೂಲದ ವಿರಾಟ್ ಕೊಹ್ಲಿ ಇದ್ದಾರೆ.

ಮೂರು ಪಂದ್ಯಗಳಲ್ಲಿ ಕೇವಲ 236 ರನ್‌ಗಳ ಅಗತ್ಯ

ಮೂರು ಪಂದ್ಯಗಳಲ್ಲಿ ಕೇವಲ 236 ರನ್‌ಗಳ ಅಗತ್ಯ

ಇದೇ ದಾಖಲೆಯ ವಿಚಾರವಾಗಿ ಸುರ್ಯಕುಮಾರ್ ಯಾದವ್ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಮೀರಿಸುವ ಎಲ್ಲಾ ಅವಕಾಶಗಳಿದ್ದು, 32ರ ಹರೆಯದ ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಿಸಲು ಮೂರು ಪಂದ್ಯಗಳಲ್ಲಿ ಕೇವಲ 236 ರನ್‌ಗಳ ಅಗತ್ಯವಿದೆ.

ಪ್ರಸ್ತುತ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರು 2022ರಲ್ಲಿ ಆಡಿದ 39 ಟಿ20 ಪಂದ್ಯಗಳಿಂದ 43.09 ಸರಾಸರಿ ಮತ್ತು 173.89 ಸ್ಟ್ರೈಕ್‌ರೇಟ್ ಒಳಗೊಂಡಂತೆ 1379 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಅಮೋಘ ಶತಕ ಮತ್ತು 12 ಅರ್ಧಶತಕಗಳು ಒಳಗೊಂಡಿವೆ.

2022ರ ಟಿ20 ವಿಶ್ವಕಪ್‌ನಲ್ಲಿ 239 ರನ್

2022ರ ಟಿ20 ವಿಶ್ವಕಪ್‌ನಲ್ಲಿ 239 ರನ್

ಸೂರ್ಯಕುಮಾರ್ ಯಾದವ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2022ರ ಟಿ20 ವಿಶ್ವಕಪ್‌ನಲ್ಲಿ 190 ಸ್ಟ್ರೈಕ್‌ರೇಟ್‌ನಲ್ಲಿ ಮೂರು ಅರ್ಧಶತಕಗಳೊಂದಿಗೆ 239 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಪರಾಭವಗೊಂಡು ಫೈನಲ್ ತಲುಪಲು ವಿಫಲವಾಯಿತು. ಇನ್ನು ಭಾರತ ವಿರುದ್ಧ ಗೆದ್ದು ಫೈನಲ್ ತಲುಪಿದ್ದ ಇಂಗ್ಲೆಂಡ್ ತಂಡ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಕದನದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ 2022ರ ಟಿ20 ವಿಶ್ವಕಪ್‌ನ ನೂತನ ಚಾಂಪಿಯನ್ ಆಯಿತು.

Story first published: Thursday, November 17, 2022, 12:39 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X