ರನ್‌ಗಳಿಸದಿದ್ದರೆ ಕ್ಯೂನಲ್ಲಿ ತುಂಬಾ ಜನ ಇದ್ದಾರೆ: ಅನುಭವಿ ಆಟಗಾರನಿಗೆ ಎಚ್ಚರಿಕೆ ನೀಡಿದ ಹರ್ಭಜನ್

ನ್ಯೂಜಿಲೆಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯ ಬಳಿಕ ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಎರಡು ತಂಡಗಳು ಸೆಣೆಸಾಟವನ್ನು ನಡೆಸಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವ ಅಜಿಂಕ್ಯಾ ರಹಾನೆ ವಹಿಸಿಕೊಳ್ಳಲಿದ್ದು ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಆದರೆ ಈ ಸರಣಿಯಲ್ಲಿ ಕೆಲ ಅನುಭವಿ ಆಟಗಾರರ ಮೇಲೆ ಜವಾಬ್ಧಾರಿ ಹೆಚ್ಚಿದ್ದು ಭವಿಷ್ಯದ ದೃಷ್ಟಿಯಿಂದ ಈ ಆಟಗಾರರಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

ಇದೇ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಂಡದ ಓರ್ವ ಅನುಭವಿ ಆಟಗಾರನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ತಂಡದಲ್ಲಿ ಪ್ರತಿಭಾನ್ವುತ ಆಟಗಾರರ ದಂಡೇ ಇದೆ. ಉತ್ತಮ ರನ್‌ಗಳಿಸಲು ಸಾಧ್ಯವಾಗದಿದ್ದರೆ ಆ ಸ್ಥಾನವನ್ನು ಪಡೆದುಕೊಳ್ಳಲು ಹಲವು ಆಟಗಾರರ ದಂಡೇ ಕಾಯುತ್ತಿದೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್

ಹಾಗಾದರೆ ಹರ್ಭಜನ್ ಸಿಂಗ್ ಎಚ್ಚರಿಕೆ ನೀಡಿದ್ದು ಯಾವ ಆಟಗಾರನಿಗೆ. ಟೀಮ್ ಇಂಡಿಯಾದ ಆ ಆಟಗಾರ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮವಾಗಿ ರನ್‌ಗಳಿಸಲಿದ್ದಾರೆಯೇ? ಮುಂದೆ ಓದಿ..

ಆತನಿಗೆ ಸ್ಥಾನ ದೊರೆಯುವುದೇ ಅಚ್ಚರಿಯಾಗಿತ್ತು

ಆತನಿಗೆ ಸ್ಥಾನ ದೊರೆಯುವುದೇ ಅಚ್ಚರಿಯಾಗಿತ್ತು

"ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿರ್ಶರಾಂತಿ ಪಡೆದುಕೊಂಡಿದ್ದಾರೆ. ಅಜಿಂಕ್ಯಾ ರಹಾನೆ ಇದ್ದಾರೆ. ಆತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೋ ಇಲ್ಲವೇ ಎಂಬುದೇ ಕುತೂಹಲವಾಗಿತ್ತು. ಆದರೆ ಆತನಿಗೆ ಮೊದಲ ಟೆಸ್ಟ್ ಪಂದ್ಯದ ನಾಯಕತ್ವವನ್ನೇ ನೀಡಲಾಗಿದೆ. ಕಳೆದ 11 ಪಂದ್ಯಗಳಲ್ಲಿ ಅವರಿಂದ ಉತ್ತಮ ಆಟ ಬಂದಿಲ್ಲ. ಕಢವಲ 19ರಷ್ಟು ಸರಾಸರಿಯನ್ನು ಅವರು ಈ ಪಂದ್ಯಗಳಲ್ಲಿ ಹೊಂದಿದ್ದಾರೆ. ಆತನೋರ್ವ ಅದ್ಭುತ ಆಟಗಾರ. ಆದರೆ ಆತನ ಪ್ರದರ್ಶನ ಸಾಥ್ ನೀಡುತ್ತಿಲ್ಲ. ಆದರೆ ರೋಹಿತ್ ಶೃ್ಮಾ, ವಿರಾಟ್ ಕೊಹ್ಲಿ ಹಾಗೂ ಕೋಚಚ್ ರಾಹುಲ್ ದ್ರಾವಿಡ್ ರಹಾನೆ ಮೇಲೆ ನಂಬಿಕೆಯಿಟ್ಟಿರುವುದು ನೋಡಲು ಸಂತಸವಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್.

ರಹಾನೆ ಮೇಲೆ ಭಜ್ಜಿಗೆ ನಂಬಿಕೆ

ರಹಾನೆ ಮೇಲೆ ಭಜ್ಜಿಗೆ ನಂಬಿಕೆ

ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಕೂಡ ಅಜಿಂಕ್ಯಾ ರಹಾನೆ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. "ಆತನಿಗೆ ನಾಯಕತ್ವ ನೀಡಲಾಗಿದೆ ಎಂಬುದು ಮಾತ್ರವೇ ಇಲ್ಲಿನ ವಿಚಾರವಲ್ಲ. ಆತ ತಂಡವನ್ನು ಉತ್ತಮವಾಗಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ ಹಾಗೂ ಬ್ಯಾಟಿಂಗ್ ಮೂಲಕವೂ ಅದ್ಭುತವಾದ ಪ್ರದರ್ಶನ ನಿಡುವ ಮೂಲಕ ಫಾರ್ಮ್ ಮರಳಿ ಗಳಿಸುತ್ತಾರೆ. ಈ ಮೂಲಕ ಅವರು ಹೆಚ್ಚು ಹೋತ್ತು ಕ್ರೀಸ್‌ನಲ್ಲಿ ಇರುವುದನ್ನು ನಾವು ನೀಡಬಹುದು" ಎಂದಿದ್ದಾರೆ ಹರ್ಭಜನ್ ಸಿಂಗ್.

ರನ್‌ಗಳಿಸದಿದ್ದರೆ ದೊಡ್ಡ ಕ್ಯೂ ಇದೆ

ರನ್‌ಗಳಿಸದಿದ್ದರೆ ದೊಡ್ಡ ಕ್ಯೂ ಇದೆ

ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಅಜಿಂಕ್ಯಾ ರಹಾನೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. "ರಹಾನೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇದ್ದು ರನ್‌ಗಳಿಸುವಂತಾಗಬೇಕು. ಇಲ್ಲವಾದಲ್ಲಿ ಬಹಳ ದೊಡ್ಡ ಕ್ಯೂ ಆ ಸರದಿಗಾಗಿ ಕಾಯುತ್ತಿದೆ. ಸೂರ್ಯಕುಮಾರ್ ಯಾದವ್ ಸೇರಿದಂತೆ ಬಹಳ ಆಟಗಾರರು ಸ್ಥಾನವನ್ನು ಪಡೆದುಕೊಳ್ಳಲು ಕಾಯುತ್ತಿದ್ದಾರೆ" ಎಂದು ಹರ್ಭಜನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ನಾಯಿಯ ಆಲ್ ರೌಂಡ್ ಆಟಕ್ಕೆ ಮನಸೋತ ಕ್ರಿಕೆಟ್ ದೇವರು ಹೇಳಿದ್ದೇನು? | Oneindia Kannada
ಕಿವೀಸ್ ವಿರುದ್ಧದ ಸರಣಿ ಮುಖ್ಯ

ಕಿವೀಸ್ ವಿರುದ್ಧದ ಸರಣಿ ಮುಖ್ಯ

ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಭಾರತ ಸಾಕಷ್ಟು ಟಿ20 ಕ್ರಿಕೆಟ್ ಆಡಿದೆ. ಐಪಿಎಲ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಆಟಗಾರರು ಭಾಗಿಯಾಗಿದ್ದರು. ಆದರೆ ಇದೀಗ ಸುದೀರ್ಘ ಕಾಲದ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಇದು ತಂಡಕ್ಕೆ ಬಹಳ ಮುಖ್ಯವಾಗಿದೆ ಎಂದಿದ್ದಾರೆ ಭಜ್ಜಿ. "ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ ಹೇಗೆ ಆರಂಭಿಸಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಯಾಕೆಂದರೆ ಅವರು ಕೂಡ ಭಾರತದಂತೆಯೇ ಸಾಕಷ್ಟು ಬಲಿಷ್ಠವಾದ ತಂಡ. ಭಾರತದಲ್ಲಿ ಉತ್ತಮವಾದ ಕ್ರಿಟ್ ಪೀಚ್‌ನಲ್ಲಿ ಉತ್ತಮವಾದ ಕ್ರಿಕೆಟ್ ನೋಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದಿದ್ದಾರೆ ಹರ್ಭಜನ್ ಸಿಂಗ್.

For Quick Alerts
ALLOW NOTIFICATIONS
For Daily Alerts
Story first published: Wednesday, November 24, 2021, 13:20 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X