ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್

IND vs NZ: Yuzvendra Chahal Becomes Indias Highest Wicket-taker in T20 Cricket

ಭಾನುವಾರ, ಜನವರಿ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ 6 ವಿಕೆಟ್‌ಗಳ ಪ್ರಯಾಸಕರ ಜಯ ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿಕೊಂಡಿತು.

ಇದೇ ವೇಳೆ 32 ವರ್ಷದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಉಮ್ರನಾ ಮಲಿಕ್ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಆಗಿ ಸ್ಥಾನ ಪಡೆದು ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲುಗಲ್ಲಿ ಸ್ಥಾಪಿಸಿದರು.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹಾರ್ದಿಕ್ ಪಾಂಡ್ಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಭಾರತೀಯ ಬೌಲರ್‌ಗಳು ಕಟಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಫಿನ್ ಅಲೆನ್ ವಿಕೆಟ್ ರೂಪದಲ್ಲಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಭುವನೇಶ್ವರ್ ಕುಮಾರ್ ಅವರ 90 ವಿಕೆಟ್‌ಗಳ ದಾಖಲೆ ಮುರಿದ ಚಹಾಲ್

ಭುವನೇಶ್ವರ್ ಕುಮಾರ್ ಅವರ 90 ವಿಕೆಟ್‌ಗಳ ದಾಖಲೆ ಮುರಿದ ಚಹಾಲ್

ಫಿನ್ ಅಲೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಯುಜ್ವೇಂದ್ರ ಚಹಾಲ್ ಅವರು ಟಿ20 ಕ್ರಿಕೆಟ್‌ನಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವರ 90 ವಿಕೆಟ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು ಮತ್ತು 91 ವಿಕೆಟ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. 100 ವಿಕೆಟ್‌ಗಳನ್ನು ಪೂರೈಸಲು ಚಹಾಲ್‌ಗೆ ಕೇವಲ ಒಂಬತ್ತು ವಿಕೆಟ್‌ಗಳ ಅಗತ್ಯವಿದೆ.

87 ಟಿ20 ಪಂದ್ಯಗಳಲ್ಲಿ 90 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಇದೀಗ ಎರಡನೇ ಸ್ಥಾನಕ್ಕೆ ಜಾರಿದರೆ, ರವಿಚಂದ್ರನ್ ಅಶ್ವಿನ್ 72 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ 70 ವಿಕೆಟ್‌ಗಳೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ 21 ಟಿ20 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆದ ನಂತರ ಯುಜ್ವೇಂದ್ರ ಚಹಾಲ್, ಈ ವರ್ಷ ಮತ್ತೊಂದು ಅದ್ಭುತ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದಾರೆ. ಚಹಾಲ್ ಇಲ್ಲಿಯವರೆಗೆ 75 ಟಿ20 ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

1) ಯುಜ್ವೇಂದ್ರ ಚಹಾಲ್ - 91 ವಿಕೆಟ್

2) ಭುವನೇಶ್ವರ್ ಕುಮಾರ್ - 90 ವಿಕೆಟ್

3) ರವಿಚಂದ್ರನ್ ಅಶ್ವಿನ್ - 72 ವಿಕೆಟ್

4) ಜಸ್ಪ್ರೀತ್ ಬುಮ್ರಾ - 70 ವಿಕೆಟ್

5) ಹಾರ್ದಿಕ್ ಪಾಂಡ್ಯ - 64 ವಿಕೆಟ್

107 ಪಂದ್ಯಗಳಲ್ಲಿ 134 ವಿಕೆಟ್‌ ಪಡೆದಿರುವ ಟಿಮ್ ಸೌಥಿ

107 ಪಂದ್ಯಗಳಲ್ಲಿ 134 ವಿಕೆಟ್‌ ಪಡೆದಿರುವ ಟಿಮ್ ಸೌಥಿ

ನ್ಯೂಜಿಲೆಂಡ್‌ನ ಟಿಮ್ ಸೌಥಿ 107 ಪಂದ್ಯಗಳಲ್ಲಿ 134 ವಿಕೆಟ್‌ಗಳೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‌ಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಶಕಿಬ್ ಅಲ್ ಹಸನ್, ರಶೀದ್ ಖಾನ್, ಇಶ್ ಸೋಧಿ ಮತ್ತು ಲಸಿತ್ ಮಾಲಿಂಗ ಚುಟುಕು ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಪಡೆದ ಇತರ ಬೌಲರ್‌ಗಳಾಗಿದ್ದಾರೆ.

Story first published: Monday, January 30, 2023, 18:13 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X