ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ದ್ವಿತೀಯ ಏಕದಿನ ಪಂದ್ಯದಿಂದ ಪೊಲಾರ್ಡ್ ಹೊರಗುಳಿದ ಕಾರಣ ಬಹಿರಂಗ

IND vs WI: Nicholas Pooran revealed why Kieron Pollard isnt playing second ODI

ಭಾರತ ಪ್ರವಾಸವನ್ನು ಕೈಗೊಂಡಿರುವ ಕೆರಿಬಿಯನ್ನರು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದಾರೆ. ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ಆರಂಭವಾಗಿದ್ದು, ಫೆಬ್ರವರಿ 6ರ ಭಾನುವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು.

ಆರ್‌ಸಿಬಿ ಪರ ಕೆಟ್ಟ ಪ್ರದರ್ಶನ: ನಿಮ್ಮಪ್ಪನ ಜೊತೆ ಆಟೋ ಓಡಿಸು ಎಂದಿದ್ರು, ಸಹಾಯ ಮಾಡಿದ್ದು ಧೋನಿ: ಸಿರಾಜ್ಆರ್‌ಸಿಬಿ ಪರ ಕೆಟ್ಟ ಪ್ರದರ್ಶನ: ನಿಮ್ಮಪ್ಪನ ಜೊತೆ ಆಟೋ ಓಡಿಸು ಎಂದಿದ್ರು, ಸಹಾಯ ಮಾಡಿದ್ದು ಧೋನಿ: ಸಿರಾಜ್

ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿತು. ಅತ್ತ ಭಾರತ ವಿರುದ್ಧದ ಈ ಸರಣಿ ಆರಂಭವಾಗುವುದಕ್ಕೂ ಮುನ್ನ ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡಿದ್ದ ವೆಸ್ಟ್ ಇಂಡೀಸ್ 3 - 2 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳುವುದರ ಮೂಲಕ ಮಿಂಚಿತ್ತು. ಇನ್ನು ನಾಯಕನಾಗಿ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡವನ್ನು ಆ ಸರಣಿಯಲ್ಲಿ ಉತ್ತಮವಾಗಿ ನಿರ್ವಹಿಸಿದ್ದರು. ಹೀಗೆ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದ ಕೀರನ್ ಪೊಲಾರ್ಡ ನಾಯಕತ್ವದ ವೆಸ್ಟ್ ಇಂಡೀಸ್ ಭಾರತದ ಪ್ರವಾಸವನ್ನು ಕೈಗೊಂಡಾಗಲೂ ಅದೇ ರೀತಿಯ ಪ್ರದರ್ಶನ ನೀಡಿ ತವರಿನಲ್ಲಿಯೇ ಟೀಮ್ ಇಂಡಿಯಾಗೆ ಸೋಲುಣಿಸಲಿದೆ ಎಂಬ ಲೆಕ್ಕಾಚಾರಗಳೂ ಸಹ ಇದ್ದವು. ಆದರೆ ಪ್ರಥಮ ಏಕದಿನ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವಿರುದ್ಧ ಸೋತಿದ್ದು, ಇದೀಗ ಫೆಬ್ರವರಿ 9ರ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದೆ.

ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!

ಹೀಗೆ ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದ ಕೀರನ್ ಪೊಲಾರ್ಡ್ ದ್ವಿತೀಯ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಕಾರಣದಿಂದಾಗಿ ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ನಿಕೋಲಸ್ ಪೂರನ್ ವಹಿಸಿಕೊಂಡಿದ್ದು ಕೀರನ್ ಪೊಲಾರ್ಡ್ ಈ ಪಂದ್ಯಕ್ಕೆ ಗೈರಾಗಿದ್ದು ಏಕೆ ಎಂಬುದರ ಕಾರಣವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಪೊಲಾರ್ಡ್ ಗೈರು

ಪೊಲಾರ್ಡ್ ಗೈರು

ಭಾರತ ಮತ್ತು ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಮಾತನಾಡಿದ ನಾಯಕ ನಿಕೋಲಸ್ ಪೂರನ್ ಕೀರನ್ ಪೊಲಾರ್ಡ್ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ಕಣಕ್ಕಿಳಿಯಲು ಫಿಟ್ ಆಗಿಲ್ಲ ಎಂದಿದ್ದಾರೆ. ಹೀಗೆ ಕೀರನ್ ಪೊಲಾರ್ಡ್ ಅಲಭ್ಯತೆಯ ಜೊತೆ ಕಣಕ್ಕಿಳಿಯಲಿರುವ ತಮ್ಮ ತಂಡ ಉತ್ತಮ ಕ್ರಿಕೆಟ್ ಆಡುವ ಗುರಿಯನ್ನು ಹೊಂದಿದೆ ಎಂದಿದ್ದಾರೆ ಹಾಗೂ ಈ ಪಂದ್ಯದಲ್ಲಿ ಆಗಿರುವ ಒಂದೇ ಒಂದು ಬದಲಾವಣೆ ಎಂದರೆ ಅದು ಕೀರನ್ ಪೊಲಾರ್ಡ್ ಬದಲು ಓಡಿಯನ್ ಸ್ಮಿತ್ ಆಗಮಿಸಿರುವುದು ಎಂದು ನಿಕೋಲಸ್ ಪೂರನ್ ತಿಳಿಸಿದ್ದಾರೆ.

ಪ್ರಥಮ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಪೊಲಾರ್ಡ್

ಪ್ರಥಮ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಪೊಲಾರ್ಡ್

ಕಳೆದ ಭಾನುವಾರದಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕನಾಗಿದ್ದ ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆಗಿದ್ದರು. ಯುಜ್ವೇಂದ್ರ ಚಾಹಲ್ ಎಸೆದಿದ್ದ ಗೂಗ್ಲಿಗೆ ಬಲಿಯಾಗಿದ್ದ ಕೀರನ್ ಪೊಲಾರ್ಡ್ ಗೋಲ್ಡನ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದರು.

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada
ದ್ವಿತೀಯ ಏಕದಿನ ಪಂದ್ಯದ ಆಡುವ ಬಳಗಗಳು

ದ್ವಿತೀಯ ಏಕದಿನ ಪಂದ್ಯದ ಆಡುವ ಬಳಗಗಳು

ಭಾರತ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ


ವೆಸ್ಟ್ ಇಂಡೀಸ್‌ ಆಡುವ ಬಳಗ: ಶಾಯ್ ಹೋಪ್ (ವಿಕೆಟ್ ಕೀಪರ ), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೇಲ್ ಹೊಸೈನ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್

Story first published: Wednesday, February 9, 2022, 16:25 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X